ಇಂದು ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ 42 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ 20,678 ಮಂದಿಯಿಂದ ಮತದಾನ
ಮೈಸೂರು

ಇಂದು ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ 42 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ 20,678 ಮಂದಿಯಿಂದ ಮತದಾನ

June 8, 2018

ಮೈಸೂರು: ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‍ಗೆ ನಾಳೆ(ಜೂ.8) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ವಿಧಾನ ಪರಿಷತ್ ಚುನಾವಣೆ ಅಧಿಕಾರಿ ಪಿ.ಹೇಮಲತಾ ಅವರ ನೇತೃತ್ವದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ನಡೆಸಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 42 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

7,735 ಮಹಿಳೆಯರು, ಐವರು ಇತರರು ಸೇರಿ ಒಟ್ಟು 20,678 ಮಂದಿ ಶಿಕ್ಷಕರು ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾ ಯಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 18, ಮಂಡ್ಯದಲ್ಲಿ 9, ಹಾಸನದಲ್ಲಿ 10 ಹಾಗೂ ಚಾಮರಾಜನಗರದಲ್ಲಿ 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾನ ಪ್ರಕ್ರಿಯೆ ಸಂಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗ ಹಾಗೂ ಪ್ರಾದೇಶಿಕ ಆಯುಕ್ತರ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಮತಗಟ್ಟೆಗಳ ವಿವರ

ಮೈಸೂರು ಜಿಲ್ಲೆ: ಪಿರಿಯಾಪಟ್ಟಣ, ಮಿನಿ ವಿಧಾನಸೌಧ, ಕೆ.ಆರ್. ನಗರ ಮಿನಿ ವಿಧಾನಸೌಧ, ಹುಣಸೂರು ತಾಲೂಕು ಕಚೇರಿ, ಮೈಸೂರು ನಗರದ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 1, 2, ವಿಜಯನಗರ 2ನೇ ಹಂತದ ಶ್ರೀ ಕಲಾನಿಕೇತನ ಕಲಾ ಶಾಲೆ, ಗೋಕು ಲಂ 3ನೇ ಹಂತದ ಕಾಂಟೂರ್ ರಸ್ತೆಯ ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ ಶಾಲೆ, ಕೆಸರೆ ರಾಜೇಂದ್ರನಗರದ ಸರ್ಕಾರಿ ಪ್ರಾಥ ಮಿಕ ಶಾಲೆ, ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ರಾಮಾನುಜ ರಸ್ತೆಯ ಸೆಂಟ್‍ಮೇರಿಸ್ ಶಾಲೆ, ಹೆಚ್.ಡಿ. ಕೋಟೆ ಮಿನಿವಿಧಾನಸೌಧ, ನಂಜನ ಗೂಡಿನ ತಾಲೂಕು ಕಚೇರಿ, ತಿ.ನರಸೀ ಪುರ ಮಿನಿವಿಧಾನಸೌಧ, ಮೈಸೂರಿನ ಸಿದ್ಧಾರ್ಥ ಲೇಔಟ್‍ನ ಗೀತಾ ಶಿಶು ಶಿಕ್ಷಣ ಸಂಸ್ಥೆ, ಕೃಷ್ಣಮೂರ್ತಿ ಪುರಂ 6ನೇ ಕ್ರಾಸಿನ ಸರ್ಕಾರಿ ಪ್ರಾಥಮಿಕ ಶಾಲೆ, ಶೇಷಾದ್ರಿ ಅಯ್ಯರ್ ರಸ್ತೆಯ ವಿದ್ಯಾವರ್ಧಕ ಪ್ರೌಢಶಾಲೆ, ಚರ್ಚ್ ಬಳಿಯ ಸೇಂಟ್ ಫಿಲೋಮಿನಾ ಕಿರಿಯ ಪ್ರಾಥಮಿಕ ಶಾಲೆ.

ಚಾಮರಾಜನಗರ ಜಿಲ್ಲೆ: ಗುಂಡ್ಲುಪೇಟೆ ಮಿನಿವಿಧಾನಸೌಧ, ಚಾಮರಾಜನಗರ ಮಿನಿವಿಧಾನಸೌಧ, ಯಳಂದೂರು ಮಿನಿ ವಿಧಾನಸೌಧ, ಕೊಳ್ಳೇಗಾಲ ಮಿನಿವಿಧಾನ ಸೌಧ, ಹನೂರು ವಿಶೇಷ ತಹಶೀಲ್ದಾರ್ ಕಚೇರಿ.

ಹಾಸನ ಜಿಲ್ಲೆ: ಬೇಲೂರು ಮಿನಿ ವಿಧಾನಸೌಧ, ಅರಸೀಕೆರೆ ಮಿನಿವಿಧಾನಸೌಧ, ಚನ್ನರಾಯ ಪಟ್ಟಣ ಮಿನಿ ವಿಧಾನಸೌಧ, ಹಾಸನ ಶತಮಾನೋತ್ಸವ ಭವನ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಆಲೂರು ಪಟ್ಟಣ ಪಂಚಾಯ್ತಿ ಕಚೇರಿ, ಸಕಲೇಶಪುರ ತಾಲೂಕು ಕಚೇರಿ ಅರಕಲಗೂಡು ಮಿನಿ ವಿಧಾನಸೌಧ ಹೊಳೆನರಸೀಪುರ ಮಿನಿವಿಧಾನಸೌಧ.

ಮಂಡ್ಯ ಜಿಲ್ಲೆ : ಕೆ.ಆರ್.ಪೇಟೆ ಮಿನಿ ವಿಧಾನಸೌಧ, ನಾಗಮಂಗಲ ಮಿನಿವಿಧಾನಸೌಧ, ಪಾಂಡವಪುರ ಮಿನಿವಿಧಾನಸೌಧ, ಮಂಡ್ಯ ಮಿನಿವಿಧಾನಸೌಧ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ, ಮದ್ದೂರು ಮಿನಿವಿಧಾನಸೌಧ, ಶ್ರೀರಂಗಪಟ್ಟಣ ಮಿನಿವಿಧಾನಸೌಧ, ಮಳವಳ್ಳಿ ಮಿನಿ ವಿಧಾನಸೌಧ.

ಕಣದಲ್ಲಿರುವ ಅಭ್ಯರ್ಥಿಗಳು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಜೆಡಿಎಸ್‍ನಿಂದ ಮರಿತಿಬ್ಬೇಗೌಡ, ಬಿಜೆಪಿಯ ಬಿ.ನಿರಂಜನ ಮೂರ್ತಿ, ಕಾಂಗ್ರೆಸ್‍ನ ಎಂ.ಲಕ್ಷ್ಮಣ, ಪಕ್ಷೇತರರಾದ ಎ.ಹೆಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್‍ಬಿಎಂ ಪ್ರಸನ್ನ(ಡಾ.ಅಜಯ್ ಪ್ರಸನ್ನ), ಡಾ.ಮಹದೇವ, ಎಂ.ಎನ್.ರವಿ ಶಂಕರ್ ಹಾಗೂ ಪಿ.ಎ ಶರತರಾಜ್ ಅವರು ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

Translate »