ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅಭಿಮತ
ಮೈಸೂರು

ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅಭಿಮತ

June 8, 2018

ನಾಗ್ಪುರ: ರಾಷ್ಟ್ರೀಯತೆ ಎಲ್ಲ ಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಇಂದು ನಾಗ್ಪುರದಲ್ಲಿ ಆರ್‍ಎಸ್‍ಎಸ್‍ನ ಸಂಘ ಶಿಕ್ಷಾ ವರ್ಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತ ಅತ್ಯುತ್ತಮ, ಸಮರ್ಥ ಆಡಳಿತ ಹೊಂದಿದೆ ಎಂದು 7ನೇ ಶತಮಾನದಲ್ಲೇ ವಿದೇಶದ ವಿದ್ವಾಂಸರು ನಮ್ಮ ದೇಶವನ್ನು ಕೊಂಡಾಡಿದ್ದರು. ನಮ್ಮ ದೇಶಕ್ಕೆ 5 ಸಾವಿರ ವರ್ಷಗಳ ಸಾಂಸ್ಕೃತಿಕ ಅಡಿಪಾಯ ಭದ್ರ ವಾಗಿದೆ. ಸಂಸ್ಕೃತಿಯ ಏಕತೆ, ಮೂಲಭೂತ ಐಕ್ಯತೆ ನಮ್ಮ ಮಂತ್ರ, ಜಾತ್ಯಾತೀತತೆ ನನಗೆ ನಂಬಿಕೆಯ ಪ್ರಶ್ನೆಯಾಗಿದ್ದು, ರಾಷ್ಟ್ರೀಯ ತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಮಾಜಿ ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.

ದ್ವೇಷದ ಭಾವನೆ ನಮ್ಮ ರಾಷ್ಟ್ರೀಯತೆಗೆ ಅಪಾಯಕಾರಿ, ನಮ್ಮ ದೇಶದ ವಿಚಾರಧಾರೆ ಗಳನ್ನು ಹಿಂಸಾಚಾರವಿಲ್ಲದೇ ಹಂಚಿಕೊಳ್ಳ ಬೇಕಾಗಿದೆ, ರಾಷ್ಟ್ರೀಯತೆಯೇ ಎಲ್ಲಕ್ಕಿಂತ ಮಿಗಿಲು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಎಂದು ಪ್ರಣಬ್ ಮುಖರ್ಜಿ ಹೇಳಿದ್ದು, ಸಂಘ ಶಿಕ್ಷಾ ವರ್ಗಾ ಮುಕ್ತಾಯ ಗೊಳಿಸಿರುವ ಕಾರ್ಯಕರ್ತರು ಶಾಂತಿ, ಸಹಬಾಳ್ವೆ, ಸೌಹಾರ್ದತೆಯನ್ನು ಪ್ರಚಾರ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

ಹೆಮ್ಮೆಯ ಪುತ್ರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‍ಎಸ್‍ಎಸ್)ದ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಮಾಜಿ ರಾಷ್ಟ್ರಪತಿ ಅವರು ಆರ್‍ಎಸ್‍ಎಸ್ ಪ್ರಧಾನ ಕಚೇರಿ ಯಲ್ಲಿರುವ ವೀಕ್ಷಕರ ಪುಸ್ತಕದಲ್ಲಿ ಬರೆದಿದ್ದಾರೆ.ಅವರು ಆರ್‍ಎಸ್‍ಎಸ್ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸು ವುದಕ್ಕಾಗಿ ಇಂದು ಮಹಾರಾಷ್ಟ್ರದ ನಾಗ್ಪುರಕ್ಕೆ ಆಗಮಿಸಿದಾಗ ಅವರನ್ನು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಕಚೇರಿಯಲ್ಲಿದ್ದ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ ಪ್ರಣಬ್ ಮುಖರ್ಜಿ ಅವರು ಹೆಡಗೇ ವಾರ್‍ಗೆ ವಿಶೇಷ ಗೌರವ ಸಲ್ಲಿಸಿದರು. ಭಾರತ ಮಾತೆಯ ಹೆಮ್ಮೆಯ ಪುತ್ರ, ಕೆ.ಬಿ.ಹೆಡಗೇವಾರ್ ಜನ್ಮಸ್ಥಳಕ್ಕೆ ಆಗಮಿಸಿದ್ದೇನೆ. ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಪ್ರಣಬ್ ಮುಖರ್ಜಿ ವೀಕ್ಷಕರ ಹಾಜರಿ ಪುಸ್ತಕದಲ್ಲಿ ಬರೆದು ತಮ್ಮ ಸಹಿ ಹಾಕಿದ್ದಾರೆ. ಪ್ರಣಬ್ ಮುಖರ್ಜಿ ಅವರು ಆರ್‍ಎಸ್‍ಎಸ್ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದು, ತೀವ್ರ ವಿರೋಧ ಹಾಗೂ ಚರ್ಚೆಗೆ ಕಾರಣವಾಗಿದೆ.

ರಾಜಕೀಯ ತಲ್ಲಣ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಆರ್‍ಎಸ್‍ಎಸ್ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿರುವುದು, ದೇಶದ ರಾಜಕೀಯ ಮೊಗಸಾಲೆಯಲ್ಲಿ ಸಣ್ಣದೊಂದು ತಲ್ಲಣ ಮೂಡಿಸಿದೆ. ಪ್ರಣಬ್ ಅವರ ಇಂದಿನ ಭೇಟಿಯನ್ನು ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೆ ಹೋಲಿಸಿ ವ್ಯಾಖ್ಯಾನಿಸುತ್ತಿರುವುದೇ ಈ ತಲ್ಲಣಕ್ಕೆ ಕಾರಣ.ಆದರೆ ಪ್ರಣಬ್ ಅವರ ಭೇಟಿಯನ್ನು ಆರ್‍ಎಸ್‍ಎಸ್ ವಿರೋಧಿ ರಾಜಕೀಯ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಪ್ರಣಬ್ ತಮ್ಮ ಜೀವಮಾನವಿಡೀ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವ್ಯಕ್ತಿಯಾಗಿದ್ದರು. ಮತ್ತು ಅವರು ಆರ್‍ಎಸ್‍ಎಸ್ ಸಭೆಯಲ್ಲಿ ಭಾಗವಹಿಸಿರುವುದು ಅಕ್ಷಮ್ಯ ಎಂಬುದು ಕಾಂಗ್ರೆಸ್ ವಾದ. ಪ್ರಣಬ್ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮರುಕ್ಷಣದಿಂದಲೇ ಪಕ್ಷ ರಾಜಕಾರಣ ದಿಂದ ತಮ್ಮನ್ನು ತಾವು ಬೇರ್ಪಡಿಸಿಕೊಂಡಿದ್ದರು. ಇದೊಂದು ಅನಿವಾರ್ಯ ನಡೆ ಎಂದು ಹೇಳಬಹುದಾದರೂ, ಪ್ರಣಬ್ ಅವರ ವ್ಯಕ್ತಿತ್ವ ಕೂಡ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣದತ್ತಲೇ ಇತ್ತು ಎಂಬುದು ಶತಸಿದ್ದ. ಆದರೆ ಪ್ರಣಬ್ ಮುಖರ್ಜಿ ಅವರ ಇಂದಿನ ಭೇಟಿಯನ್ನು ವಿರೋಧಿಸುತ್ತಾ ಕಾಂಗ್ರೆಸ್ ತನ್ನ ಸಂಕುಚಿತ ಮನೋಭಾವನೆ ಯನ್ನು ತನಗೆ ಅರಿವಿಲ್ಲದಂತೆ ಹೊರ ಹಾಕುತ್ತಿದೆ ಎಂಬ ಮಾತುಗಳಿಗೂ ತೂಕವಿದೆ.

ಪ್ರಣಬ್ ಮುಖರ್ಜಿ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೇ ಕಾಂಗ್ರೆಸ್ ನ ಪ್ರಮುಖ ನಾಯಕರೆಲ್ಲರೂ ಇದಕ್ಕೆ ವಿರೋಧ ವ್ಯಕ್ತಪಡಿಸತೊಡಗಿದ್ದರು. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಹಿಡಿದು ರಾಹುಲ್ ಗಾಂಧಿ, ಆನಂದ್ ಶರ್ಮ, ಅಹ್ಮದ್ ಪಟೇಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಪ್ರಣಬ್ ನಿರ್ಧಾರಕ್ಕೆ ಅಪಸ್ವರ ಎತ್ತಿದ್ದರು.

ಅದರಲ್ಲೂ ಖುದ್ದು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಮ್ಮ ತಂದೆಯ ನಿರ್ಣಯವನ್ನು ವಿರೋಧಿಸಿದ್ದು, ಹಲವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ಇಂದಿನ ಸಭೆಯಲ್ಲಿ ತಾವೇ ಹೇಳಿದಂತೆ ಬಹುತ್ವದ ರಾಜಕಾರಣವನ್ನು ಪ್ರಣಬ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದಕ್ಕೂ ಮಿಗಿಲಾಗಿ ಪ್ರಣಬ್ ಅವರ ರಾಜಕೀಯ ನಿಲುವನ್ನು ಗೌರವಿಸುತ್ತಲೇ ಇಂದಿನ ಸಭೆಗೆ ಅವರನ್ನು ಆಹ್ವಾನಿಸಿದ್ದಾಗಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಈ ಎಲ್ಲ ಊಹಾಪೆÇೀಹಗಳಿಗೆ ತೆರೆ ಎಳೆದಂತಿತ್ತು. ಒಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅವರ ಇಂದಿನ ಆರ್ ಎಸ್ ಎಸ್ ಸಭೆಗೆ ಅದೆನೇ ವಿರೋಧ ವ್ಯಕ್ತವಾದರೂ, ಪರಸ್ಪರ ವೈರುದ್ಯ ಸಿದ್ದಾಂತ ರಾಜಕಾರಣವನ್ನೂ ಮೀರಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ ಎಂಬುದು ಇಂದು ಮತ್ತೆ ಸಾಬೀತಾಗಿದೆ.

Translate »