ಮಂಡ್ಯದಲ್ಲಿ ಕಮಲ ಮಂದಿರ ಲೋಕಾರ್ಪಣೆ
ಮಂಡ್ಯ

ಮಂಡ್ಯದಲ್ಲಿ ಕಮಲ ಮಂದಿರ ಲೋಕಾರ್ಪಣೆ

June 19, 2018

ಮಂಡ್ಯ:  ಆರ್‍ಎಸ್‍ಎಸ್ ಶಾಖಾ ಕೇಂದ್ರಗಳು ಸಂಸ್ಕಾರ ಕೇಂದ್ರಗಳಾ ದರೆ, ಕಾರ್ಯಾಲಯ ತಪಸ್ವಿಗಳ ಕೇಂದ್ರ ವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರ ಕಾರ್ಯವಾಹ ಸಿ.ಆರ್. ಮುಕುಂದ ಅಭಿಪ್ರಾಯಪಟ್ಟರು.

ಇಲ್ಲಿನ ನೆಹರೂ ನಗರದ 2ನೇ ಕ್ರಾಸ್ ನಲ್ಲಿ ಶ್ರೀಜನಜಾಗರಣ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಆರ್‍ಎಸ್‍ಎಸ್‍ನ ನೂತನ ಕಾರ್ಯಾಲಯ “ಕಮಲ ಮಂದಿರ’’ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಮಾಜ ಮತ್ತು ದೇಶದ ಬಗ್ಗೆ ನಿಸ್ವಾರ್ಥವಾಗಿ ಸದಾ ಚಿಂತಿಸುವ ತಪಸ್ವಿ ಗಳ ಕೇಂದ್ರವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಎಂದು ಅವರು ತಿಳಿಸಿದರು.

ಮಠ, ಮಂದಿರಗಳಲ್ಲಿ ನಿಶ್ಯಬ್ಧ ವಾತಾವರಣ ಇರುತ್ತದೆ. ಇಲ್ಲವೇ ನಿಶ್ಯಬ್ಧವಾಗಿ ರುವಂತೆ ಸೂಚಿಸಲಾಗುತ್ತದೆ. ಆದರೆ ಸಂಘದ ಕಾರ್ಯಾಲಯಗಳು ಸದಾ ಚಟುವಟಿಕೆಯಿಂದ ಕೂಡಿರುತ್ತವೆ. ಇಲ್ಲಿ ನಗು, ಹಾಸ್ಯ, ವಾದ ವಿವಾದ, ಎಲ್ಲವನ್ನೂ ಎಲ್ಲರೂ ಮುಕ್ತ ಮನಸ್ಸಿನಿಂದ ದೇಶದ ಬಗ್ಗೆ ಚಿಂತಿಸುತ್ತಾರೆ. ಸಂತೋಷದಿಂದ ಒಟ್ಟಾಗಿ ಸೇರುವ ಜಾಗವಾಗಿಯೂ ಪರಿಣಮಿಸುತ್ತದೆ ಎಂದು ಹೇಳಿದರು.

ಸಂಘದ ಕೆಲಸ ಬ್ರಹ್ಮಸ್ವರೂಪಿಯಾಗಿ ರುತ್ತದೆ. ಎಲ್ಲರೂ ತಮ್ಮ ಹೃದಯ ಕಮಲ ದಲ್ಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ವಿಶ್ವಕ್ಕೆ ಅಗತ್ಯವಾದ ಬಹುದೊಡ್ಡದಾದ ಕೆಲಸ ಇದಾಗಿದೆ. ಸಂಘದ ಕಾರ್ಯಗಳನ್ನು ಮಾಡಲು ಕಚೇರಿಯೇ ಬೇಕೆಂದಿಲ್ಲ. ಪ್ರಕ್ರಿಯೆ ಮಾಡಲು, ರೂಪ ಕೊಡಲು ಸಂಘದ ಕಾರ್ಯಾಲಯ ಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಮಲ ಮಂದಿರ ಕಟ್ಟಡ ಸಮಿತಿ ಅಧ್ಯಕ್ಷ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ, ಯೋಗ ಮತ್ತು ವೇದಾಧ್ಯಯವನ್ನು ಪ್ರತಿಯೊಬ್ಬರೂ ಮಾಡಬೇಕು. ಇದಕ್ಕೆ ಜಾತಿ ಮತದ ಸಂಕುಚಿತ ಮನೋಭಾವ ಸಲ್ಲ. ಜ್ಞಾನ ಎಂದರೆ ತಿಳಿವಳಿಕೆ. ಇದು ಪ್ರತಿಯೊಬ್ಬರಿಗೂ ಅಗತ್ಯ. ಕೇವಲ ವೈದಿಕರು ಮಾತ್ರ ಇದನ್ನು ಕಲಿಯ ಬೇಕೆಂದಿಲ್ಲ. ಪ್ರತಿಯೊಬ್ಬರೂ ವೇದಾಧ್ಯಯ ಮಾಡುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಜನಜಾಗರಣ ಟ್ರಸ್ಟ್ ಅಧ್ಯಕ್ಷ ಅಜಿತ್ ಕುಮಾರ್, ಪ್ರಾಂತ ಸಂಘ ಚಾಲಕ ವೆಂಕಟರಾಮ್, ವಿಭಾಗ ಪ್ರಚಾ ರಕ್ ರಾಜೇಶ್, ಸಂಘದ ಜಿಲ್ಲಾ ಕಾರ್ಯ ವಾಹ ಪಾ.ದು. ವೆಂಕಟೇಶ್, ಶಾಸಕ ರಾಮ ದಾಸ್, ಜಿಲ್ಲಾ ಪ್ರಚಾರಕ್ ಉಮೇಶ್ ಇದ್ದರು.

Translate »