ಮಂಡ್ಯ ಅಭಿವೃದ್ಧಿಗೆ 500 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ
ಮಂಡ್ಯ

ಮಂಡ್ಯ ಅಭಿವೃದ್ಧಿಗೆ 500 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ

June 19, 2018

ಮಂಡ್ಯ:  ಮಂಡ್ಯ ಅಭಿವೃದ್ಧಿಗೆ 500 ಕೋಟಿ, ಮೈಷುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿ, ಹಳೇ ಮಿಲ್ ತೆಗೆದು ಹೊಸ ಮಿಲ್ ಅಳವಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ. ಶ್ರೀನಿವಾಸ್ ತಿಳಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಶ್ರೀನಿವಾಸ್ ಅವರು ನಗರದ ತಾಪಂ ಕಚೇರಿ ಆವರಣದಲ್ಲಿ ತಮ್ಮ ನೂತನ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಾಸಕರ ಕಚೇರಿ ಉದ್ಘಾಟಿಸುತ್ತಿ ದ್ದೇನೆ. ನನ್ನ ಶಾಸಕರ ಕಚೇರಿ ಸರ್ವರಿಗೂ ತೆರೆದ ಬಾಗಿಲು. ಯಾವುದೇ ಅಡಚಣೆ ಇಲ್ಲದೆ, ಯಾರ ಹಂಗೂ ಇಲ್ಲದೆ ನನ್ನನ್ನು ನೇರವಾಗಿ ಜನತೆ ಸಂಪರ್ಕ ಮಾಡ ಬಹುದು. ಯಾರಾದರೂ ಏನಾದರೂ ವಂಚನೆ ಮಾಡಿದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬಹುದು ಎಂದು ಸಾರ್ವ ಜನಿಕರಲ್ಲಿ ಮನವಿ ಮಾಡಿದರು.

ಕುಂದು ಕೊರತೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕ ಮಾಡಬಹುದು. ಮಧ್ಯವರ್ತಿಗಳ ಮೂಲಕ ಸಂಪರ್ಕ ಮಾಡುವುದನ್ನು ಬಿಟ್ಟು ನೇರವಾಗಿ ಸಂಪರ್ಕಿಸಿ ಕೆಲಸ ಕಾರ್ಯ ಮಾಡಿಸಿ ಕೊಳ್ಳಬಹುದು ಎಂದು ತಿಳಿಸಿದರು.

ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮಂಡ್ಯದಲ್ಲಿದ್ದ ಸಂದರ್ಭ ಸಂಪರ್ಕ ಮಾಡಬಹುದು. ತಾಲೂಕಿನ ಎಲ್ಲಾ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ಶಾಲಾ ಕಾಲೇಜುಗಳನ್ನು ಅಭಿವೃದ್ಧಿ ಪಡಿಸುವುದು ಸೇರಿದಂತೆ ವಿವಿಧ ಅಭಿ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪವನೆ ಸಲ್ಲಿಸಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೆ.ಎಸ್. ವಿಜಯಾ ನಂದ, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಜಿ. ತಿಮ್ಮೇಗೌಡ, ನಗರ ಘಟಕದ ಅಧ್ಯಕ್ಷ ಗೌರೀಶ್, ಜಿಪಂ ಸದಸ್ಯ ಯೋಗೇಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಡಾ. ಕೃಷ್ಣ, ಶ್ರೀನಿವಾಸ್, ಲಕ್ಷ್ಮಿ ಅಶ್ವಿನ್‍ಗೌಡ ಇತರರು ಈ ವೇಳೆ ಹಾಜರಿದ್ದರು.

Translate »