ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 
ಮಂಡ್ಯ

ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು 

June 19, 2018

ಶ್ರೀರಂಗಪಟ್ಟಣ:  ನಮ್ಮ ಧರ್ಮ, ಸಂಸ್ಕೃತಿ ಎಚ್ಚರಗೊಳಿಸುವವರೇ ಸ್ವಾಮೀಜಿಗಳು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಆಯೋಜಿಸಿದ್ದ ಧಾರವಾಡ ಇಂಡಿಯನ್ ವರ್ಚುಯಲ್ ಫಾರ್ ಪೀಸ್ & ಎಜುಕೇಷನ್ ಸಂಸ್ಥೆ, ಭಾರತ ಸರ್ಕಾರ ದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದ ಶ್ರೀಗಳಿಗೆ ಗುರುವಂದನಾ ಸಮಾರಂಭ ಹಾಗೂ ಗಣ್ಯರಿಗೆ ಗೌರವ, 11ನೇ ಸಮೃದ್ಧ ಜೀವನ ಶಿಬಿರ ಮತ್ತು ಶ್ರೀ ತ್ರಿನೇತ್ರ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯೋಗಿಕ್ ಸೈನ್ಸ್ & ರಿಸರ್ಚ್ ಸೆಂಟರ್‍ನ ಸಮಾ ರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಗಿನ ಕಾಲದಲ್ಲಿ ರಾಜರು ಮಠಗಳನ್ನು ಪೋಷಿಸುತ್ತಿದ್ದರು. ಈಗ ನಾವೆಲ್ಲರೂ ಮಠಗಳನ್ನು ಪೋಷಿಸಬೇಕು. ನಮಗೆಲ್ಲಾ ಮಠದ ಅವಶ್ಯಕತೆ ಇದೆ ಹಾಗೂ ಹುಟ್ಟು-ಸಾವುಗಳ ಮಧ್ಯೆ ನಾವು ಹೆಸರು ಉಳಿ ಯುವ ಹಾಗೆ ಬದುಕಬೇಕು ಎಂದರು.

ಡಾ. ಶ್ರೀಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಸಾಧು-ಸಂತರಿಗೆ, ಶರಣರಿಗೆ ಪೂಜ್ಯ ಸ್ಥಾನವಿದೆ.

ಎಲ್ಲರನ್ನೂ ಒಂದು ಗೂಡಿ ಸುವುದೇ ಧರ್ಮ. ದಾನದ ಮಾರ್ಗದಲ್ಲಿ ಸತ್ಕಾರ್ಯ ಮಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿರುವ ಸನಾತನ ಧರ್ಮ ಉಳಿಸಬೇಕು ಎಂದರು.

ತ್ರಿನೇತ್ರಶ್ರೀ ಮಾತನಾಡಿ, ಮನಸ್ಸು ನೀರು, ಗಾಳಿಗಿಂತ ವೇಗವಾದುದು. ಈ ಮನಸ್ಸಿಗೆ ಕಡಿವಾಣ ಹಾಕಿ ಜೀವನ ನಡೆಸಬೇಕು. ಒಬ್ಬ ಸಂತನಿಗೆ ಎಲ್ಲಾ ಪದವಿಗಳಿಗಿಂತ ಶ್ರೇಷ್ಠವಾದುದು ಕರುಣೆ, ಪ್ರೀತಿ, ತ್ಯಾಗ, ಮಮತೆ. ಪ್ರತಿಯೊಬ್ಬರೂ ಮನಸ್ಸುಗಳನ್ನು ಕೂಡಿಸಿ ಹೊಲಿಯುವ ಸೂಜಿಯಾಗ ಬೇಕೇ ಹೊರತು, ಹರಿಯುವ ಕತ್ತರಿ, ಖಡ್ಗ ಆಗಬಾರದು. ನಾನು ಮತ್ತು ಬೇಕು ಎನ್ನುವುದನ್ನು ಮನುಷ್ಯ ತ್ಯಜಿಸಿದರೆ ಜೀವನದಲ್ಲಿ ಸುಖಿಯಾಗಿರುತ್ತಾನೆ. ಈ ಸ್ವಭಾವ ಬಿಡದಿದ್ದರೆ ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ದುಃಖಿತನಾಗಬೇಕಾ ಗುತ್ತದೆ ಎಂಬ ಸಂದೇಶ ತಿಳಿಸಿದರು.

ಇದೇ ವೇಳೆ ಡಾಕ್ಟರೇಟ್ ಪಡೆದ ಬೇಬಿಮಠ, ಚಂದ್ರವನ ಆಶ್ರಮದ ಪೀಠಾ ಧ್ಯಕ್ಷ ಡಾ. ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿ, ಹೊಸದುರ್ಗದ ಭಗೀರಥ ಪೀಠದ ಡಾ. ಶ್ರೀಪುರುಷೋತ್ತಮಾನಂದ ಪುರಿ ಸ್ವಾಮೀಜಿ, ವಾಟಾಳು ಮಠದ ಡಾ. ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಗುರುವಂದನೆ ಮತ್ತು ಡಾ. ಅಂ.ಚಿ.ಸಣ್ಣ ಸ್ವಾಮಿಗೌಡ ಮತ್ತು ಡಾ.ಎಂ.ಎಲ್. ರವೀಂದ್ರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಡಾ. ಶ್ರೀಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ಶ್ರೀತ್ರಿನೇತ್ರ ರಿಸರ್ಚ್ ಸೆಂಟರ್‍ನ ಆಯುರ್ವೇದ ತಜ್ಞ ಡಾ.ನಾಗೇಶ್, ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್, ಪುರಸಭೆ ಮಾಜಿ ಸದಸ್ಯ ಕೃಷ್ಣಪ್ಪ, ಸಮಾಜ ಸೇವಕ ಶ್ರೀಶೈಲ ರಾಮಣ್ಣವರ್, ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್, ನವೀನ್ ಮತ್ತು ರವೀಂದ್ರ ಜಿ. ಕುಲಕರ್ಣಿ, ನರಸಿಂಹ ಮೂರ್ತಿ, ಪ್ರಮೀಳ, ಮಲ್ಲೇಶ್, ದೇವಪ್ಪ, ಮುಂಜುನಾಥ್, ಉಪಸ್ಥಿತರಿದ್ದರು.

 

Translate »