ಬೆಂಗಳೂರು: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಅತ್ಯಾಧುನಿಕ ಬಸ್ ನಿಲ್ದಾಣ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ದೂರದಿಂದ ಬಂದ ರೈತರು ಮತ್ತು ಸಾರ್ವಜನಿಕರು ಬಸ್ ಇಳಿದ ನಂತರ ಕಚೇರಿಯಿಂದ ಕಚೇರಿಗೆ ಅಲೆಯುವು ದನ್ನು ತಪ್ಪಿಸಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಹೊಂದಿ ರುವ ಬಹುಮಹಡಿ ಕಟ್ಟಡಗಳನ್ನು ಪ್ರಾರಂಭಿಸಲಿದೆ. ಬಹುತೇಕ ತಾಲೂಕುಗಳಲ್ಲಿ ಕೆಲವು ಇಲಾಖೆಗಳಿಗೆ ಕಚೇರಿಗಳೇ ಇರುವುದಿಲ್ಲ. ಅಂತಹ ಅಧಿಕಾರಿಗಳು ಎಲ್ಲಿಯೂ ಕುಳಿತು ಕೆಲಸ ಮಾಡಬೇಕು. ಅವರನ್ನು ಹುಡುಕಲು…
ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ ಮಾತನಾಡಿಸಿದ್ದಾರೆ, ಗ್ಲಾಸ್ ನೀರು ಕೊಟ್ಟಿದ್ದಾರೆ…
March 8, 2019ಮದ್ದೂರು: ಅಂಬರೀಷ್ ಅವರು ಶಾಸಕ, ಸಚಿವ ಆಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ (ಸುಮ ಲತಾ) ಮಾತನಾಡಿಸಿದ್ದಾರೆ, ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟು ಏನಪ್ಪಾ ನಿನ್ನ ಸಮಸ್ಯೆ ಎಂದು ಕೇಳಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. ಮದ್ದೂರಿನ ಕೊಳ ಗೆರೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಅಂಬರೀಷ್ ಅವರ ಹೆಸರೇಳಿಕೊಂಡು ನಾನೇನೋ ಜಿಲ್ಲೆಯನ್ನು ಉದ್ಧಾರ ಮಾಡುತ್ತೇನೆ ಎಂದು ಬರುತ್ತಿ…
ಬೀದೀಲಿ ನಿಂತು ಮಾತನಾಡುವುದು ಅವರ ಸಂಸ್ಕಾರ, ಅದು ನನ್ನದಲ್ಲ…
March 8, 2019ಮಳವಳ್ಳಿ: ಅತಿಥಿ ಸತ್ಕಾರ ಏನು ಎಂದು ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ. ದಿನದ 24 ಗಂಟೆ ಅತಿಥಿ ಸತ್ಕಾರ ಮಾಡಿರುವವರು ಅಂಬರೀಷ್. ಸಚಿವ ಡಿ.ಸಿ.ತಮ್ಮಣ್ಣನವರು ಎಷ್ಟು ಸಲ ನಮ್ಮ ಮನೆಗೆ ಬಂದಿದ್ದಾರೆ, ಎಷ್ಟು ನೀರು ಕುಡಿದಿದ್ದಾರೆ, ಊಟ ಮಾಡಿದ್ದಾರೆ, ನಾವು ಎಷ್ಟು ಸಲ ಅವರ ಮನೆಗೆ ಹೋಗಿದ್ದೇವೆ ಎಂಬುದನ್ನು ಅವರ ಕುಟುಂಬದವರೇ ಹೇಳಲಿ ಎನ್ನುವ ಮೂಲಕ ಸುಮಲತಾ ಅವರು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಟಾಂಗ್ ನೀಡಿದರು. ಇಂದು ಬೆಳಿಗ್ಗೆ ಮಳವಳ್ಳಿಗೆ ಆಗಮಿಸಿದ ಸುಮಲತಾ ಅವರನ್ನು ಅಂಬರೀಷ್ ಅಭಿಮಾನಿಗಳು…
ನಾವಿಬ್ಬರೂ ಒಂದೇ ಊರು: ಡಿಸಿಟಿ
November 26, 2018ಅಂಬರೀಶ್ ಅವರದು ಸಾಯುವ ವಯಸ್ಸಲ್ಲ ಭಾರತೀನಗರ: ಅಂಬರೀಶ್ ಅವರದು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ವೈವಿಧ್ಯಮಯ ವ್ಯಕ್ತಿತ್ವ. ಅವರ ಅನಿರೀಕ್ಷಿತ ಅಗಲಿಕೆ ನನಗೆ ಆಘಾತ ತಂದಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರ ಮಾತು ಕಠಿಣವಾದರೂ, ಹೃದಯ ಮಾತ್ರ ಮೃದು. ಕೆಳವರ್ಗದ ಜನರ ಬಗೆಗೆ ಇದ್ದ ಅವರ ಪ್ರೀತಿ ಅಪಾರ. ಅಂತಹ ಉದಾತ್ತ ಗುಣದ ವ್ಯಕ್ತಿ ಕಳೆದುಕೊಂಡು ಜಿಲ್ಲೆ ಬಡವಾಗಿದೆ ಎಂದರು. ಅಂಬರೀಶ್ ಅವರದು ಸಾಯುವ ವಯಸ್ಸಲ್ಲ. ಇನ್ನೂ ಹತ್ತಾರು…
ಗ್ರಾಮೀಣ ಕಲಾವಿದರಿಂದ ಮಾತ್ರ ನೈಜಕಲೆ ಕಾಣಲು ಸಾಧ್ಯ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
August 28, 2018ಭಾರತೀನಗರ: ಗ್ರಾಮೀಣ ಭಾಗದಲ್ಲಿ ಬಣ್ಣಹಚ್ಚಿ ನಾಟಕ ಪ್ರದರ್ಶನ ನೀಡುವ ಕಲಾವಿದರಿಂದ ಮಾತ್ರ ನೈಜ ಕಲೆ ಕಾಣಲು ಸಾಧ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಇಲ್ಲಿನ ಕೇಂಬ್ರಿಡ್ಜ್ ಶಾಲಾವರಣದಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ, ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್, ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಎಷ್ಟೇ ದೊಡ್ಡ ವ್ಯಕ್ತಿಗಳಾದರೂ, ಅಹಂಕಾರ ಪಡಬಾರದು. ಅಹಂಕಾರ ಪಟ್ಟರೆ ಸರ್ವನಾಶವಾಗುತ್ತಾರೆ ಎಂಬುವುದಕ್ಕೆ ಈ…
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿಸಿಟಿ ಗುದ್ದಲಿ ಪೂಜೆ
July 24, 2018ಭಾರತೀನಗರ: ಇಲ್ಲಿನ ಕೂಳಗೆರೆ ಗ್ರಾಮದಲ್ಲಿ ಗಾಂಧಿ ಪಥ, ಗ್ರಾಮಪಥ ವಿಶೇಷ ಯೋಜನೆಯಡಿ 95.11 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವರು, ಗ್ರಾಮಗಳ ಅಭಿವೃದ್ಧಿಗಾಗಿ ಹಿಂದಿನಿಂದಲೂ ದುಡಿಯುತ್ತಿದ್ದೇನೆ ಮತ್ತು ಈಗ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಎಲ್ಲೇ ಇದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು. ಶಾಸಕನಾಗಿದ್ದಾಗ ವಾರದಲ್ಲಿ 6 ದಿನ ಕ್ಷೇತ್ರದಲ್ಲಿರುತ್ತಿದ್ದೆ. ಆದರೆ ಈಗ ರಾಜ್ಯದ ಅಭಿವೃದ್ಧಿ…
ಮನಸ್ಸಿನ ನೆಮ್ಮದಿಗಾಗಿ ದೇವಾಲಯಕ್ಕೆ ಭೇಟಿ: ಡಿಸಿಟಿ
July 23, 2018ಭಾರತೀನಗರ: ದೇವಾಲಯಕ್ಕೆ ಭೇಟಿ ನೀಡುವುದು ರಾಜಕೀಯ ಉದ್ದೇಶ ಕಲ್ಲ ಮನಸ್ಸಿನ ನೆಮ್ಮದಿಗಾಗಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಕರಡಕೆರೆ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಸಚಿವರು, ಯಾರು ಧರ್ಮ ಮಾರ್ಗದಲ್ಲಿ ನಡೆಯುತ್ತಾರೋ ಅಂತಹವರನ್ನು ಧರ್ಮವೇ ಕಾಪಾಡುತ್ತದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಸನ್ಮಾರ್ಗ ದಲ್ಲಿ ನಡೆಯಬೇಕೆಂಬುದು ನನ್ನ ಆಶಯ ಎಂದರು. ಯುವ ಜನತೆ ದುಷ್ಚಟಗಳಿಗೆ ಬಲಿಯಾಗಿ ದೈವಭಕ್ತಿ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮಗಳಲ್ಲಿ ದೇವಸ್ಥಾನಗಳಿರುವುದರಿಂದ ಕೆಲವರು ಭಯ ಭಕ್ತಿಯಿಂದ ಇದ್ದಾರೆ. ಇಲ್ಲದಿದ್ದರೆ ದುರ್ನಡತೆಯಿಂದ ಸಮಾಜ…
ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಡಿ.ಸಿ.ತಮ್ಮಣ್ಣ
July 5, 2018ಮದ್ದೂರು: ‘ನಾನು ಶಾಸಕನಾಗಿ ಬಂದ ಮೇಲೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ನನ್ನ ಗುರಿಯಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಸಮೀಪದ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಜಿಟಿಟಿಸಿ ಉಪಕೇಂದ್ರದ ನೂತನ ಆಡಳಿತ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 992ಲಕ್ಷ ರೂ. ವೆಚ್ಚ ದಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬೆಂಗಳೂರಿನ ಪ್ರತಿಷ್ಠಿತ ಉಷಾ ಕನ್ಷ್ಟ್ರಕ್ಷನ್ ಸಂಸ್ಥೆಯು ಈ…
ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯ ಸುಧಾರಣೆ ಭರವಸೆ: ಡಿ.ಸಿ.ತಮ್ಮಣ್ಣ
June 27, 2018ಹಾಸನ: ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜಿಲ್ಲೆಯಲ್ಲಿಂದು ಸಂಚರಿಸಿ, ವಿವಿಧ ಬಸ್ ನಿಲ್ದಾಣ ಹಾಗೂ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದರ ಲ್ಲದೆ, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಸಂಪೂರ್ಣ ಮಾಹಿತಿ ಪಡೆದು ಕೊಂಡರು. ಬೆಳಿಗ್ಗೆ ಚನ್ನರಾಯಪಟ್ಟಣಕ್ಕೆ ಆಗಮಿ ಸಿದ ಸಾರಿಗೆ ಸಚಿವರು, ಶಾಸಕ ಸಿ.ಎನ್. ಬಾಲಕೃಷ್ಣ ಅವರೊಂದಿಗೆ ನಗರದ ಬಸ್ ನಿಲ್ದಾಣ ಹಾಗೂ ಡಿಪೋವನ್ನು ವೀಕ್ಷಣೆ ಮಾಡಿ ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಲಹೆ ಸೂಚನೆ ನೀಡಿದರು. ನಂತರ ಹೊಳೆ ನರಸೀಪುರಕ್ಕೆ ಆಗಮಿಸಿ,…
ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
June 21, 2018ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶೇ.15 ರಷ್ಟು ಬಸ್ ಪ್ರಯಾಣದರ ಹೆಚ್ಚಿಸಲು ಮುಂದಾಗಿದೆ. ನಿಗಮದ ಪ್ರಸ್ತಾವವನ್ನು ತಿರಸ್ಕರಿಸಿರುವ ರಾಜ್ಯ ಸರ್ಕಾರ ಇದರಿಂದ ಹೊರೆಯಾಗುವ 400ರಿಂದ 500 ಕೋಟಿ ರೂ.ಗಳನ್ನು ಬೇರೆ ಮೂಲಗಳಿಂದ ತುಂಬಿ ಕೊಡುವ ಭರವಸೆ ನೀಡಿದೆ. ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಈಗಷ್ಟೇ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರ ಪ್ರಯಾಣಿಕರ ದರ ಹೆಚ್ಚಿಸಲು ಸದ್ಯಕ್ಕೆ ಅವಕಾಶ…