ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಮೈಸೂರು

ಸದ್ಯಕ್ಕೆ ಬಸ್ ದರ ಏರಿಕೆ ಇಲ್ಲ: 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

June 21, 2018

ಬೆಂಗಳೂರು:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶೇ.15 ರಷ್ಟು ಬಸ್ ಪ್ರಯಾಣದರ ಹೆಚ್ಚಿಸಲು ಮುಂದಾಗಿದೆ.

ನಿಗಮದ ಪ್ರಸ್ತಾವವನ್ನು ತಿರಸ್ಕರಿಸಿರುವ ರಾಜ್ಯ ಸರ್ಕಾರ ಇದರಿಂದ ಹೊರೆಯಾಗುವ 400ರಿಂದ 500 ಕೋಟಿ ರೂ.ಗಳನ್ನು ಬೇರೆ ಮೂಲಗಳಿಂದ ತುಂಬಿ ಕೊಡುವ ಭರವಸೆ ನೀಡಿದೆ. ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಈಗಷ್ಟೇ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರ ಪ್ರಯಾಣಿಕರ ದರ ಹೆಚ್ಚಿಸಲು ಸದ್ಯಕ್ಕೆ ಅವಕಾಶ ನಿಡುವುದಿಲ್ಲ, ಸಾರಿಗೆ ನಿಗಮಗಳಿಗೆ ಆಗುವ ನಷ್ಟವನ್ನು ಬೇರೆ ಮೂಲ ಗಳಿಂದ ಸರಿದೂಗಿಸಲು ಸಲಹೆ ಮಾಡಲಾಗಿದೆ ಎಂದರು. ನಿಗಮ ನಷ್ಟದಲ್ಲಿದ್ದರೂ ರಾಜ್ಯದ ಎಲ್ಲಾ ವರ್ಗದ ಒಟ್ಟು 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಅವರು ಮುಂದಿನ ಬಜೆಟ್‍ನಲ್ಲಿ ಪ್ರಕಟಿಸಲಿದ್ದಾರೆ. ಇಂತಹ ನಿರ್ಧಾರದಿಂದ ಸಂಸ್ಥೆ ಮೇಲೆ ವಾರ್ಷಿಕ ಹೆಚ್ಚುವರಿ 620 ಕೋಟಿ ರೂ. ಹೊರೆ ಬೀಳಲಿದೆ. ಈ ನಷ್ಟವನ್ನು ನಿಗಮ ತುಂಬಿ ಕೊಡಲಿದ್ದು, ಉಳಿದ ಭಾಗವನ್ನು ಸರ್ಕಾರ ಇಲ್ಲವೇ ಶಿಕ್ಷಣ ಇಲಾಖೆ ಭರಿಸಿದರೆ ನಾವು, ಬಸ್ ಪಾಸ್ ವಿತರಣೆಗೆ ಮುಂದಾಗುತ್ತೇವೆ. ದಿನೇ ದಿನೆ ಪರಿಸರ ಮಾಲಿನ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಡೀಸೆಲ್ ವಾಹನಗಳಿಗೆ ಕಡಿವಾಣ ಹಾಕಲು ಗಂಭೀರ ಚಿಂತನೆ ನಡೆದಿದೆ.

ಡೀಸೆಲ್ ವಾಹನಗಳ ನೋಂದಣಿ ಕಡಿಮೆ ಮಾಡಲು ಸೂತ್ರವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಮುಂದೆ, ವಾಹನ ಪಾರ್ಕಿಂಗ್ ಸೌಲಭ್ಯ ಹೊಂದಿರುವವರಿಗೆ ಮಾತ್ರ ಕಾರು ಖರೀದಿಗೆ ಅನುಮತಿ ನೀಡಲಾಗುತ್ತದೆ. ಈ ಸಂಬಂಧ ಅಗತ್ಯ ಕಾನೂನು ತಿದ್ದುಪಡಿ ತರಲು ಸರ್ಕಾರ ಸಿದ್ಧ ಎಂದರು.

ಇದೇ ಸಂದರ್ಭದಲ್ಲಿ ಸಮೂಹ ಸಾರಿಗೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಈ ಕುರಿತ ಪ್ರಚಾರ ಹೊಣೆಯನ್ನು ನಗರಾಭಿವೃದ್ಧಿ ಇಲಾಖೆ ಮಾಡಬೇಕು.

Translate »