ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿಸಿಟಿ ಗುದ್ದಲಿ ಪೂಜೆ
ಮಂಡ್ಯ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿಸಿಟಿ ಗುದ್ದಲಿ ಪೂಜೆ

July 24, 2018

ಭಾರತೀನಗರ:  ಇಲ್ಲಿನ ಕೂಳಗೆರೆ ಗ್ರಾಮದಲ್ಲಿ ಗಾಂಧಿ ಪಥ, ಗ್ರಾಮಪಥ ವಿಶೇಷ ಯೋಜನೆಯಡಿ 95.11 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸಚಿವರು, ಗ್ರಾಮಗಳ ಅಭಿವೃದ್ಧಿಗಾಗಿ ಹಿಂದಿನಿಂದಲೂ ದುಡಿಯುತ್ತಿದ್ದೇನೆ ಮತ್ತು ಈಗ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಎಲ್ಲೇ ಇದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಶಾಸಕನಾಗಿದ್ದಾಗ ವಾರದಲ್ಲಿ 6 ದಿನ ಕ್ಷೇತ್ರದಲ್ಲಿರುತ್ತಿದ್ದೆ. ಆದರೆ ಈಗ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚಿಂತಿಸಬೇಕಾದ ಹಿನ್ನೆಲೆಯಲ್ಲಿ ವಾರಕ್ಕೆ ಒಂದೆರಡು ದಿನವಾ ದರೂ ಬಂದು ಕ್ಷೇತ್ರದ ಜನರ ಸಮಸ್ಯೆ ಗಳನ್ನು ಆಲಿಸುತ್ತೇನೆ. ನಾನು ಕ್ಷೇತ್ರದ ಹೊರ ಗಿದ್ದರೂ ಅಭಿವೃದ್ಧಿ ಬಗ್ಗೆಯೇ ಚಿಂತಿಸುತ್ತೇನೆ ಎಂದರು. ಪ್ರತಿಯೊಂದು ಕಾಮಗಾರಿಯ ರೂಪು ರೇಷೆಯಂತೆ ನಿರ್ಮಾಣ ಸಾಮಾಗ್ರಿ ಗಳನ್ನು ಬಳಸಬೇಕು. ಕಾಮಗಾರಿಯನ್ನು ಕಾಟಾಚಾರಕ್ಕೆ ನಡೆಸದೇ ನಿರ್ಮಿಸಿದ ಕಾಮಗಾರಿ ಹಲವು ವರ್ಷ ಸಾರ್ವ ಜನಿಕರಿಗೆ ದೊರಕಬೇಕು ಆಗ ಮಾತ್ರ ಉದ್ದೇಶಿತ ಕಾಮಗಾರಿಗೆ ಅರ್ಥ ಬರುತ್ತದೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮೀಣಾಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಮತದಾರರ ಋಣ ತೀರಿಸಲು ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸುತ್ತೇನೆ ಎಂದರು.

ಇದೇ ವೇಳೆ ಯೋಜನಾ ವಿಭಾಗಾಧಿ ಕಾರಿ ಎ.ಇ.ವಸಂತೇಗೌಡ, ಎ.ಇಇ. ಶಂಕರ್, ಜಿಪಂ ಸದಸ್ಯ ಬೋರಯ್ಯ, ಗುತ್ತಿಗೆದಾರÀ ಎಸ್.ಕೆ.ಕುಮಾರ್, ಮುಖಂಡ ರಾದ ಪ್ರವೀಣ್, ಕೆ.ಟಿ.ಶಂಕರ್, ತಾಪಂ ಸದಸ್ಯೆ ಸುಧಾಕೃಷ್ಣ, ಚಿಕ್ಕಣ್ಣ, ಸಿ.ಶಂಕರ್, ಪುಟ್ಟರಾಜು, ಸ್ವಾಮಿ, ಸೋಮಶೇಖರ್ ಸೇರಿದಂತೆ ಇತರಿದ್ದರು.

Translate »