ಟೀ ಕುಡಿಯುವ ಸೋಗಿನಲ್ಲಿ ಮಾಂಗಲ್ಯ ಸರ ಅಪಹರಣ
ಮಂಡ್ಯ

ಟೀ ಕುಡಿಯುವ ಸೋಗಿನಲ್ಲಿ ಮಾಂಗಲ್ಯ ಸರ ಅಪಹರಣ

July 24, 2018

ಕೆ.ಆರ್.ಪೇಟೆ: ಟೀ ಕುಡಿಯುವ ಸೋಗಿನಲ್ಲಿ ನಿಂತಿದ್ದ ಯುವಕರಿಬ್ಬರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಪಟ್ಟಣದ ಸುಭಾಷ್‍ನಗರಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಕಟ್ಟಡದ ನೆಲ ಅಂತಸ್ತಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಮಹದೇವ್ ಪತ್ನಿ ರತ್ನಮ್ಮ ಚಿನ್ನದ ಸರ ಕಳೆದು ಕೊಂಡವರು.

ಘಟನೆ ವಿವರ: ರತ್ನಮ್ಮ ಅವರು ಎಂದಿನಂತೆ ಬೆಳಿಗ್ಗೆ 5.30ರಲ್ಲಿ ಟೀ ಅಂಗಡಿ ಮುಂಭಾಗ ಕಸ ಗುಡಿಸುವು ದರಲ್ಲಿ ನಿರತರಾಗಿದ್ದರು. ಈ ವೇಳೆ ಅಂಗಡಿ ಮುಂದೆ ನಿಂತಿದ್ದ ಯುವಕರು ಟೀ ಅಂಗಡಿ ಬಾಗಿಲು ತೆಗೆಯುತ್ತಿದ್ದಾರೆ. ಟೀ ಕುಡಿದು ಹೋಗೋಣ ಎಂದು ಮಾತನಾಡುತ್ತಿದ್ದರು. ಹೀಗಾಗಿ ಟೀ ಕುಡಿಯಲು ಬಂದಿರುವ ಗ್ರಾಹಕರೆಂದು ತಿಳಿದು ಕಸ ಗುಡಿಸುತ್ತಿದ್ದರು. ಈ ವೇಳೆ ಹಿಂಭಾಗದಿಂದ ಬಂದ ಒಬ್ಬ ಯುವಕ ರತ್ನಮ್ಮ ಅವರ ಕತ್ತಿನಲ್ಲಿದ್ದ ಚಿನ್ನ ಮಾಂಗಲ್ಯ ಸರ ಕಿತ್ತುಕೊಂಡ ಬಳಿಕ, ಇಬ್ಬರು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿರುವ ರತ್ನಮ್ಮ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Translate »