ಮನಸ್ಸಿನ ನೆಮ್ಮದಿಗಾಗಿ ದೇವಾಲಯಕ್ಕೆ ಭೇಟಿ: ಡಿಸಿಟಿ
ಮಂಡ್ಯ

ಮನಸ್ಸಿನ ನೆಮ್ಮದಿಗಾಗಿ ದೇವಾಲಯಕ್ಕೆ ಭೇಟಿ: ಡಿಸಿಟಿ

July 23, 2018

ಭಾರತೀನಗರ: ದೇವಾಲಯಕ್ಕೆ ಭೇಟಿ ನೀಡುವುದು ರಾಜಕೀಯ ಉದ್ದೇಶ ಕಲ್ಲ ಮನಸ್ಸಿನ ನೆಮ್ಮದಿಗಾಗಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಕರಡಕೆರೆ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಸಚಿವರು, ಯಾರು ಧರ್ಮ ಮಾರ್ಗದಲ್ಲಿ ನಡೆಯುತ್ತಾರೋ ಅಂತಹವರನ್ನು ಧರ್ಮವೇ ಕಾಪಾಡುತ್ತದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಸನ್ಮಾರ್ಗ ದಲ್ಲಿ ನಡೆಯಬೇಕೆಂಬುದು ನನ್ನ ಆಶಯ ಎಂದರು. ಯುವ ಜನತೆ ದುಷ್ಚಟಗಳಿಗೆ ಬಲಿಯಾಗಿ ದೈವಭಕ್ತಿ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮಗಳಲ್ಲಿ ದೇವಸ್ಥಾನಗಳಿರುವುದರಿಂದ ಕೆಲವರು ಭಯ ಭಕ್ತಿಯಿಂದ ಇದ್ದಾರೆ. ಇಲ್ಲದಿದ್ದರೆ ದುರ್ನಡತೆಯಿಂದ ಸಮಾಜ ಹಾಳುಗುತ್ತಿತ್ತು ಎಂದರು.

ಮಠ ಮಂದಿರಗಳಿಗೆ ಭೇಟಿ ನೀಡುವು ದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನಸ್ಸಿಗೆ ನೆಮ್ಮದಿ ಕೊಡುವ ಮಠ ಮಂದಿರಗಳಿಗೆ ಭೇಟಿ ನೀಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ತಪ್ಪು ಮಾಡುವುದು ಮಾನವನ ಸಹಜ ಗುಣ. ನಂತರ ತಿದ್ದಿ ನಡೆಯುವುದು ಅಷ್ಟೇ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವ ಸಂದರ್ಭ ನಮ್ಮಿಂದಾಗುವ ತಪ್ಪುಗಳ ಕುರಿ ತಂತೆ ಆತ್ಮಾವಲೋಕನ ಮಾಡಿಕೊಂಡು ನಂತರದ ದಿನಗಳಲ್ಲಿ ಸನ್ನಡತೆಯಿಂದ ಮುನ್ನಡೆಯುವುದು ಅಗತ್ಯ ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಯುವ ಮುಖಂಡ ಸಂತೋಷ್ ತಮ್ಮಣ್ಣ, ಜಿಪಂ ಸದಸ್ಯೆ ಸುಕನ್ಯಾ, ಮಾಜಿ ಸದಸ್ಯ ಕುಮಾರ್‍ರಾಜು, ರಾಮಲಿಂಗು, ಬೊಮ್ಮಲಿಂಗೇಗೌಡ, ತೈಲಪ್ಪ, ಸುರೇಶ್ ಸೇರಿದಂತೆ ಇತರರಿದ್ದರು.

Translate »