ಮುಂದುವರೆದ ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ
ಮಂಡ್ಯ

ಮುಂದುವರೆದ ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ

June 19, 2018

ಮಂಡ್ಯ: ಕೃಷಿ ವಿಜ್ಞಾನ ಕಾಲೇಜು ಪ್ರಾರಂಭ ಮಾಡಲು ಖಾಸಗಿ ಯವರಿಗೆ ಅನುಮತಿ ಕೊಡುವುದನ್ನು ವಿರೋಧಿಸಿ ವಿಸಿ ಫಾರಂ ಕೃಷಿ ಕಾಲೇಜು ಮುಂದೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.ಕಳೆದ 3 ದಿನಗಳಿಂದ ತರಗತಿ ಬಹಿಷ್ಕ ರಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ದಲ್ಲಿ ರೈತಸಂಘ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಕಾರ್ಯ ಕರ್ತರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿ ಸಿದರು.

ಈ ವೇಳೆ ವಿದ್ಯಾರ್ಥಿ ಮುಖಂಡ ಚೇತನ್ ಮಾತನಾಡಿ, ಖಾಸಗಿ ಕೃಷಿ ರೈ ಟೆಕ್ ಕಾಲೇಜು ಮಾನ್ಯತೆ ರದ್ದುಪಡಿಸಬೇಕು, ಸರ್ಕಾರಿ ಕೃಷಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಿಂದಾಗುತ್ತಿರುವ ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆಗೆ ಪರಿ ಹಾರ ಸೂಚಿಸಬೇಕೆಂದು ಆಗ್ರಹಿಸಿದರು.

ಸರ್ಕಾರಿ ಕೃಷಿ ವಿವಿ ವಿದ್ಯಾರ್ಥಿಗಳ ಹಿತ ಕಾಯುವ ನಿಟ್ಟಿನಲ್ಲಿ ಕೃಷಿ ಕಾಲೇಜು ವಿದ್ಯಾರ್ಥಿಗಳ ಕಾಯ್ದೆಗೆ ತಿದ್ದುಪಡಿ ತರ ಬೇಕು. ನಿಯಮ ಮೀರಿ ನಡೆಯುತ್ತಿರುವ ಖಾಸಗಿ ಕೃಷಿ ರೈ ಟೆಕ್ ಕಾಲೇಜುಗಳನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಗೆ 2010ರಲ್ಲಿ ತಿದ್ದುಪಡಿ ತಂದು ಖಾಸಗಿ ಕೃಷಿ ವಿವಿ ಕಾಲೇಜುಗಳನ್ನು ಪ್ರಾರಂಭಿ ಸಲು ಅನುಮತಿ ನೀಡಿರುವುದರಿಂದ ಖಾಸಗಿ ಕಾಲೇಜು ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ವಿಭಾಗದಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದಿವೆ. ಪರಿಣಾಮ ಸರ್ಕಾರಿ ಕೃಷಿ ವಿವಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಿರುದ್ಯೋಗ ದಂತಹ ಸಮಸ್ಯೆ ಎದುರಾಗಿದೆ. ಗುಣಮಟ್ಟದ ಶಿಕ್ಷಣವಿಲ್ಲದೇ ವಿದ್ಯಾರ್ಥಿಗಳ ಜೀವನ ಹಾಳಾ ಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದುವರೆಗೆ ಶಾಂತ ರೀತಿಯ ಹೋರಾಟ ಮಾಡಿಕೊಂಡು ಬರಲಾಗಿದೆ. ಒಂದು ವೇಳೆ ಈ ನಮ್ಮ ಹೋರಾಟಕ್ಕೆ ಸ್ಪಂದಿಸದಿ ದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.ರೈತ ಸಂಘದ ಶಂಭೂನಹಳ್ಳಿ ಸುರೇಶ್ ಸೇರಿದಂತೆ ಹಲವು ಮುಖಂಡರು ವಿದ್ಯಾರ್ಥಿ ಗಳ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಚರಣ್, ದರ್ಶನ್, ಭರತ್, ಬಾಲಾಜಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »