ಕೇವಲ ಅಧಿಕಾರಿಗಳ ವರದಿ ಮಂಡನೆಗೆ ಸೀಮಿತವಾದ ತಾಪಂ ಕೆಡಿಪಿ ಸಭೆ
ಮೈಸೂರು

ಕೇವಲ ಅಧಿಕಾರಿಗಳ ವರದಿ ಮಂಡನೆಗೆ ಸೀಮಿತವಾದ ತಾಪಂ ಕೆಡಿಪಿ ಸಭೆ

June 19, 2018

ಮೈಸೂರು: ಮೈಸೂರಿನ ಮಿನಿ ವಿಧಾನಸೌಧದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆ ಕೇವಲ ಅನುಪಾಲನಾ ವರದಿ ಮಂಡನೆಗೆ ಮಾತ್ರ ಸೀಮಿತವಾಯಿತು. ಬಹು ದಿನಗಳ ನಂತರ ಸಭೆಯಲ್ಲಿ ತಾಲೂಕಿನ ಯಾವುದೇ ಪ್ರಮುಖ ಸಮಸ್ಯೆಗಳ ಚರ್ಚೆಗೆ ಸದಸ್ಯರು ಮೌನಕ್ಕೆ ಶರಣಾಗುವ ಮೂಲಕ ನಿರು ತ್ಸಾಹ ಪ್ರದರ್ಶಿಸಿದರು.

ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾತ್ರ ತಮ್ಮ ಇಲಾಖೆಯ ಅನುಪಾಲನಾ ವರದಿಯನ್ನು ಓದಿ ಕೈತೊಳೆದುಕೊಂಡು ಸುಮ್ಮನಾದರು. ಯಾವುದೇ ಪ್ರಮುಖ ಚರ್ಚೆ, ನಿರ್ಧಾರ ಗಳು ಸಭೆಯಲ್ಲಿ ನಡೆಯಲಿಲ್ಲ. ಕೇವಲ ಅಧಿಕಾರಿಗಳು ನೀಡಿದ ವರದಿ ಅನುಷ್ಠಾನದ ಬಗ್ಗೆಯೂ ಸದಸ್ಯರು ಚಕಾರ ಎತ್ತದೆ ಸಮ್ಮತಿ ಸೂಚಿಸಿದರು. ಸಭೆಯಲ್ಲಿ ಅನುಪಾಲನಾ ವರದಿ ಮಂಡಿಸಿ ಅಧಿಕಾರಿಗಳು ತಮ್ಮ ಇಲಾಖೆಗೆ ಬಂದಿರುವ ಅನುದಾನ, ಖರ್ಚಾಗಿರುವ ಅನುದಾನ, ಇಲಾಖೆಯ ಮುಂದಿರುವ ಗುರಿ, ಸಾಧನೆ ಸಾಧಿಸಿರುವ ಮಾಹಿತಿಯನ್ನಷ್ಟೇ ವಿವರಣೆ ನೀಡಿದರು. ಇದಕ್ಕೆ ಅಧ್ಯಕ್ಷರಾಗಲೀ, ಉಪಾಧ್ಯಕ್ಷರಾ ಗಲೀ ಅಥವಾ ಸದಸ್ಯರಾಗಲೀ ಆಕ್ಷೇಪ ವ್ಯಕ್ತಪಡಿಸದೆ ವರದಿ ಮಂಡನೆಯ ನಂತರ ತಲೆಯಾಡಿಸಿ ಒಪ್ಪಿಗೆ ಸೂಚಿಸಿದರು.

ಮುಂಗಾರು ಆರಂಭವಾಗಿರುವ ಬಗ್ಗೆ, ಕೃಷಿ ಚುಟುವಟಿಕೆಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಸೇರಿದಂತೆ ಯಾವುದೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ. ಪಶು ಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ, ಆಹಾರ ಇಲಾಖೆ, ಅಕ್ಷರ ದಾಸೋಹ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಂಚಾಯತ್ ರಾಜ್ ಎಂಜಿನಿಯರ್, ತೋಟಗಾರಿಕೆ, ಗ್ರಾಮೀಣ ನೈರ್ಮಲ್ಯ, ಆಯುಷ್, ಆರೋಗ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಹಾಗೂ ಇತರ ನಿಗಮಗಳ ಅಧಿಕಾರಿಗಳು ವೇದಿಕೆಯಲ್ಲಿ ಅಂಕಿ ಸಂಖ್ಯೆ ಓದಿದರು.

ಅಂಗನವಾಡಿಗೆ ಜಾಗ ಕೊಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಪ್ರಗತಿಯ ವರದಿ ಮಂಡಿಸಿ ದರಲ್ಲದೆ ಕೆಲವು ಅಂಗನವಾಡಿ ಕೇಂದ್ರ ಗಳಿಗೆ ಸ್ವಂತ ಕಟ್ಟಡವಿಲ್ಲದೆ ಸಮಸ್ಯೆ ಆಗಿದೆ. ದೇವಾಲಯ ಹಾಗೂ ಇನ್ನಿತರೆ ಕಟ್ಟಡ ಗಳಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಸರ್ಕಾರಿ ಶಾಲಾ ಆವರಣದಲ್ಲಿ ಅಂಗನ ವಾಡಿ ನಿರ್ಮಿಸಲು ಸ್ಥಳಬೇಕೆಂದು ಬಹು ದಿನದಂದು ಶಿಕ್ಷಣ ಇಲಾಖೆಯ ಅಧಿಕಾರಿ ಗಳನ್ನು ಒತ್ತಾಯಿಸಲಾಗುತ್ತಿದೆ. ಆದರೆ ಯಾರು ಇದುವರೆಗೆ ಸ್ಪಂದಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಓ ಲಿಂಗ ರಾಜಯ್ಯ, ತಾಲೂಕಿನ ಅಂಗನವಾಡಿ ವಿವರಗಳನ್ನು ಕೊಡಿ. ಅಂಗನವಾಡಿಗೆ ಸ್ವಂತ ಕಟ್ಟಡದ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಎನ್.ಬಿ. ಮಂಜು, ಇಓ ಲಿಂಗರಾಜಯ್ಯ ಸೇರಿದಂತೆ ತಾ.ಪಂ ಸದಸ್ಯರು ಹಾಗೂ ವಿವಿಧ ಇಲಾ ಖೆಯ ಅಧಿಕಾರಿ ಗಳು ಪಾಲ್ಗೊಂಡಿದ್ದರು.

Translate »