ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಕೆಡಿಪಿ ಸಭೆಯಲ್ಲಿ ಸಿಇಓ ಅಸಮಾಧಾನ
ಚಾಮರಾಜನಗರ

ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಕೆಡಿಪಿ ಸಭೆಯಲ್ಲಿ ಸಿಇಓ ಅಸಮಾಧಾನ

July 12, 2018

ಚಾಮರಾಜನಗರ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಆಗುತ್ತಿದೆ ಎಂದು ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಸ ಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾಡಳಿತ ಭವನದ ಆವ ಣದಲ್ಲಿ ಇರುವ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರಿ ಬ್ಬರು ಅಸಮಾಧಾನ ತೋರ್ಪಡಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆ ಯಡಿಯಲ್ಲಿ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಕೊಳವೆ ಬಾವಿ ಕೊರೆದ ನಂತರ ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಇದರಿಂದ ಯೋಜ ನೆಯು ಫಲಪ್ರದ ಆಗುತ್ತಿಲ್ಲ ಎಂದು ಉಪಾಧ್ಯಕ್ಷ ಜೆ.ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿಪಂ ಸಿಇಓ ಡಾ.ಕೆ.ಹರೀಶ್ ಕುಮಾರ್, ಸರ್ಕಾರದ ಯೋಜನೆಗಳು ಫಲಪ್ರದ ಆಗ ಬೇಕಾದರೆ ಅದರ ಪ್ರಯೋಜನ ಫಲಾನು ಭವಿಗಳಿಗೆ ದೊರೆತಾಗ ಮಾತ್ರ ಎಂದರು.

ಇದಕ್ಕೆ ಉತ್ತರಿಸಿದ ಚೆಸ್ಕಾಂ ಕಾರ್ಯ ಪಾಲಕ ಇಂಜಿನಿಯರ್ ಪೂರ್ಣಚಂದ್ರ ತೇಜಸ್ವಿ, ಈ ನಾಲ್ಕು ನಿಗಮಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ 7 ಪಲಾನುಭವಿ ಗಳ ಹೆಸರು ನಿಗಮಕ್ಕೆ ಬಂದಿದೆ. ಶೀಘ್ರದ ಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸುವು ದಾಗಿ ಭರವಸೆ ನೀಡಿದರು. ಈ ವೇಳೆ ಉಪಾಧ್ಯಕ್ಷರು ಎಲ್ಲಾ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಎಲ್ಲಾ ನಿಗಮದ ಅಧಿಕಾರಿ ಗಳಿಗೆ ಸೂಚಿಸಿದರು.

ತಡೆಗೋಡೆ ನಿರ್ಮಾಣ ಇಲ್ಲ: ಬಿಳಿಗಿರಿರಂಗನಬೆಟ್ಟ (ಬಿ.ಅರ್.ಟಿ) ವ್ಯಾಪ್ತಿಯಲ್ಲಿ ವಾಹನಗಳ ರಸ್ತೆ ಅಪಘಾತ ತಡೆ ಹಿನ್ನೆಲೆಯಲ್ಲಿ ಕ್ರಾಸ್ಡ್-ಬೇರಿಂಗ್ ಕಾಮ ಗಾರಿ ನಡೆಸಿದರೆ ವನ್ಯ ಜೀವಿಗಳ ಚಲನ ವಲನಕ್ಕೆ ಅಡಚಣೆ ಉಂಟಾಗಲಿದೆ. ಹೀಗಾಗಿ ಕ್ರಾಸ್ಡ್-ಬೇರಿಂಗ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಬಿ.ಅರ್.ಟಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುದ್ರನ್ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಸಿಇಓ ಡಾ.ಕೆ.ಹರೀಶ್ ಕುಮಾರ್, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ್‍ಪಾಂಡೆ ಹಾಜರಿದ್ದರು.

ಸಭೆಯಲ್ಲಿ ಕೇಳಿ ಬಂದ ಸ್ವಾರಸ್ಯಕರ ಚರ್ಚೆ

  • ಅಧ್ಯಕ್ಷೆ ಶಿವಮ್ಮ ಅವರ ಸ್ವಕ್ಷೇತ್ರ ಪಾಳ್ಯದಲ್ಲಿಯೇ ಎರಡು ವರ್ಷದಿಂದ ಗ್ರಂಥಾಲಯ ಬಾಗಿಲು ತೆರೆದಿಲ್ಲ. (ಅಧ್ಯಕ್ಷರಿಂದಲೇ ಬಹಿರಂಗ)
  •  ನಮಗೆ ಕೆಲಸ ಕೊಡಿ ಎಂದು ಕೇಳುವ ಜನರೇ ಇಲ್ಲ ಎಂದ ಮೇಲೆ ಕೆಲಸ ವನ್ನು ಯಾರಿಗೆ ಕೊಡೋಣ. (ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲ್ಲೇಶ್)
  • ಈ ಬಾರಿ ಪ್ರಗತಿ ತೋರಿಸುತ್ತೇನೆಂದು ಬಾಂಡ್ ಪೇಪರ್‍ನಲ್ಲಿ ಬರೆದು ಕೊಡು. (ತಿರುಮಲ್ಲೇಶ್ ಕುರಿತು ಸಿಇಓ)
  • ಬಾಂಡ್ ಪೇಪರ್ ಮೇಲೆ ಬರೆದುಕೊಡಲು ಸಿದ್ಧ ಸಾರ್.(ಸಿಇಓಗೆ ತಿರುಮಲ್ಲೇಶ್)
  • ಏನ್ ಪ್ರಯೋಜನಾ? ಅಲ್ಲಿಯವರೆಗೆ ನಾವು ಇರೋಲ್ಲ. (ತಿರುಮಲ್ಲೇಶ್‍ಗೆ ಸಿಇಓ)
  • ನಾನು ಇರುತ್ತೇನೆ ಸಾರ್ (ಸಿಇಓಗೆ ತಿರುಮಲ್ಲೇಶ್)
  • ಯಳಂದೂರು ತಾಲೂಕಿಗೆ ಕಬಿನಿ ನೀರು ಬಂದಿದೆ. ಕಾಲುವೆಗಳಲ್ಲಿ ಹೂಳೆತ್ತಿಸಿ ರೈತರಿಗೆ ನೀರು ಬಿಡುವ ಬಗ್ಗೆ ಮಾಹಿತಿ ನೀಡಿ, ಕೊಳ್ಳೇಗಾಲ ದವರೆಗೂ ನೀರು ತಲುಪಿಸುವ ಹೊಣೆ ಅಧಿಕಾರಿಗಳದ್ದು. (ಜೆ.ಯೋಗೇಶ್)

Translate »