ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ
ಮೈಸೂರು

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ

June 13, 2018

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೆಡಿಎಸ್ ಬೆಂಬಲಿತ ಮರಿತಿಬ್ಬೇಗೌಡ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.ಮೈಸೂರಿನ ವಿನಾಯಕನಗರ(ಪಡುವಾರ ಹಳ್ಳಿ) ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್‍ನ ಮರಿ ತಿಬ್ಬೇಗೌಡ ಹಾಗೂ ಕಾಂಗ್ರೆಸ್‍ನ ಎಂ.ಲಕ್ಷ್ಮಣ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 16696 ಚಲಾಯಿತ ಮತಗಳಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣ ಕೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಶೇ.50ರಷ್ಟು ಮತಗಳನ್ನು ಗಳಿಸುವಲ್ಲಿ ವಿಫಲ ರಾದ ಹಿನ್ನೆಲೆಯಲ್ಲಿ 2ನೇ ಪ್ರಾಶಸ್ತ್ಯ ಮತ ಎಣ ಕೆಯ ಮೊರೆ ಹೋಗಬೇಕಾಯಿತು. ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ 6003, ಕಾಂಗ್ರೆಸ್‍ನ ಎಂ.ಲಕ್ಷ್ಮಣ 5514, ಬಿಜೆಪಿಯ ಬಿ.ನಿರಂಜನಮೂರ್ತಿ 3931, ಪಕ್ಷೇತರರಾದ ಎ.ಹೆಚ್. ಗೋಪಾಲಕೃಷ್ಣ 7, ಡಿ.ಕೆ.ತುಳಸಪ್ಪ 2, ಡಾ.ಎಸ್.ಬಿ.ಎಂ. ಪ್ರಸನ್ನ 102, ಡಾ.ಮಹದೇವ 295, ಎಂ.ಎನ್. ರವಿಶಂಕರ್ 4, ಪಿ.ಎ.ಶರತ್‍ರಾಜ್ 6 ಮತಗಳನ್ನು ಪಡೆದರೆ, 13 ಮತಗಳು ನೋಟಾಗೆ ಚಲಾವಣೆಯಾಗಿ ದ್ದರೆ 819 ಮತಗಳು ಅಸಿಂಧು (ತಿರಸ್ಕೃತ )ವಾಗಿ ದ್ದವು. ಈ ಸುತ್ತಿನಲ್ಲಿ ಗೆಲುವಿಗೆ ಬೇಕಾಗಿದ್ದ ಖೋಟಾ 7933 ಮತಗಳನ್ನು ಯಾರೂ ಪಡೆಯಲಿಲ್ಲ.

ಬಳಿಕ ನಡೆದ 2ನೇ ಪ್ರಾಶಸ್ತ್ಯ ಮತ ಎಣಿಕೆ ಯಲ್ಲಿ ಅತ್ಯಂತ ಕಡಿಮೆ ಮತ ಪಡೆದಿರುವ ಅಭ್ಯರ್ಥಿ ಯಿಂದ ಎಲಿಮಿನೇಷನ್ ಆರಂಭಿಸಲಾಯಿತು. ಆರು ಮಂದಿ ಪಕ್ಷೇತರ ಅಭ್ಯರ್ಥಿಗಳ ನಂತರ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಎಲಿ ಮಿನೇಷನ್ ಆದರು. ಪ್ರಥಮ ಪ್ರಾಶಸ್ತ್ಯದ ಅವರ ಮತಪತ್ರಗಳಲ್ಲಿ 2ನೇ ಪ್ರಾಶಸ್ತ್ಯದ ಮತವನ್ನು ವಿಂಗಡಿಸಲಾಯಿತು. ಅದರಲ್ಲಿ 1048 ಮತದಾರರು ಮರಿತಿಬ್ಬೇಗೌಡರಿಗೆ ಹಾಗೂ 1105 ಮತದಾರರು ಎಂ.ಲಕ್ಷ್ಮಣ ಅವರಿಗೆ 2ನೇ ಪ್ರಾಶಸ್ತ್ಯದ ಮತ ನೀಡಿದ್ದರು. ಇದರೊಂದಿಗೆ ಮರಿತಿಬ್ಬೇಗೌಡರಿಗೆ ಒಟ್ಟು 7170 ಮತ ಹಾಗೂ ಎಂ.ಲಕ್ಷ್ಮಣ ಅವರಿಗೆ 6805 ಮತ ದಕ್ಕಿದ್ದವಾದರೂ, ಖೋಟಾ ತಲುಪಲಿಲ್ಲ. ಈ ಹಂತದಲ್ಲಿ ಲಕ್ಷ್ಮಣ್ ಅವರಿಗಿಂತ ಮರಿತಿಬ್ಬೇಗೌಡ 365 ಹೆಚ್ಚು ಮತಗಳನ್ನು ಗಳಿಸಿದ್ದರಾದರೂ ಗೆಲುವಿಗೆ ನಿಗಧಿ ಮಾಡಿದ್ದ 7933 ಮತಗಳ ಖೋಟಾ ತಲುಪಲಿಲ್ಲ. ಈ ಹಿನ್ನೆಲೆಯಲ್ಲಿ ನಿಯಮದನ್ವಯ 2ನೇ ಸ್ಥಾನದಲ್ಲಿದ್ದ ಎಂ.ಲಕ್ಷ್ಮಣ ಅವರನ್ನೇ ಎಲಿಮಿನೇಷನ್‍ನಲ್ಲಿಟ್ಟು ಮತ ಎಣಿಕೆ ನಡೆಸಲಾಯಿತು. ಎಂ.ಲಕ್ಷ್ಮಣ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿದ್ದ 5514 ಮತದಾರರಲ್ಲಿ 3852 ಮಂದಿ ಮರಿತಿಬ್ಬೇಗೌಡರಿಗೆ 2ನೇ ಪ್ರಾಶಸ್ತ್ಯದ ಮತ ನೀಡಿದ್ದರು. ಅಂತಿಮವಾಗಿ ಜೆಡಿಎಸ್‍ನ ಮರಿತಿಬ್ಬೇಗೌಡರು ಒಟ್ಟು 11022 ಮತಗಳೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

ಸಂಭ್ರಮಾಚರಣೆ: ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಜೆಡಿಎಸ್‍ನ ಮರಿತಿಬ್ಬೇಗೌಡ ಹಾಗೂ ಕಾಂಗ್ರೆಸ್‍ನ ಎಂ.ಲಕ್ಷ್ಮಣ ಅವರ ನಡುವೆ ಹತ್ತಿರದ ಪ್ರತಿಸ್ಪರ್ಧೆ ಏರ್ಪಟ್ಟಿತ್ತು. ಇಬ್ಬರ ನಡುವೆ ಕೇವಲ 489 ಮತಗಳ ಅಂತರವಿದ್ದ ಹಿನ್ನೆಲೆಯಲ್ಲಿ 2ನೇ ಪ್ರಾಶಸ್ತ್ಯದ ಮತ ಎಣ ಕೆಯಲ್ಲಿ ಇಬ್ಬರಿಗೂ ಗೆಲ್ಲುವ ವಿಶ್ವಾಸದ ಜೊತೆಗೆ ಸೋಲಿನ ಆತಂಕವೂ ಇತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 9 ಅಭ್ಯರ್ಥಿಗಳಲ್ಲಿ 6 ಪಕ್ಷೇತರರೂ ಹೆಚ್ಚು ಮತ ಪಡೆಯದ ಕಾರಣ 7 ನೇ ಸುತ್ತಿಗೆ ಬಿಜೆಪಿಯ ಬಿ.ನಿರಂಜನಮೂರ್ತಿ ಹೊರಬರಬೇಕಾಯಿತು. ನಂತರವೂ ಖೋಟಾ ತಲುಪದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಎಲಿಮಿನೇಟ್ ಆದರು. ಆಗ ಮರಿತಿಬ್ಬೇಗೌಡರ ಗೆಲುವು ಬಹುತೇಕ ಖಚಿತವಾಗಿದ್ದರಿಂದ ಮತ ಎಣ ಕೆ ಕೇಂದ್ರದ ಹೊರಗಿದ್ದ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚಲುವೇ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ನಗರ ಪಾಲಿಕೆ ಸದಸ್ಯರಾದ ಕೆ.ವಿ.ಮಲ್ಲೇಶ್, ಎಸ್‍ಬಿಎಂ ಮಂಜು, ಶಿವಣ್ಣ ಸೇರಿದಂತೆ ಅನೇಕ ಮುಖಂಡರು, ನೂರಾರು ಅಭಿಮಾನಿಗಳು ಸಂಭ್ರಮಾ ಚರಣೆಯಲ್ಲಿ ಭಾಗಿಯಾಗಿದ್ದರು. ಕೆಲಹೊತ್ತಿನ ಬಳಿಕ ಆಗಮಿಸಿದ ಮರಿತಿಬ್ಬೇಗೌಡರಿಗೆ ಹೂಗುಚ್ಛ ನೀಡಿ, ಹಾರ ಹಾಕಿ, ಅಭಿನಂದಿಸಿದರಲ್ಲದೆ ಜೈಕಾರ ಹಾಕಿದರು.

ಇಂದು ಒಟ್ಟು 14 ಟೇಬಲ್‍ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಬೆಳಗ್ಗೆ 8ಗಂಟೆಯಿಂದ ಮತ ಪತ್ರಗಳ ಜೋಡಣೆಯ ಕಾರ್ಯವಾದ ನಂತರ 11.35ರಿಂದ ಅಧಿಕೃತವಾಗಿ ಮತ ಎಣಿಕೆ ಆರಂಭವಾಯಿತು. ಪ್ರತಿ ಟೇಬಲ್‍ಗೆ 500 ಮತ ಪತ್ರಗಳಿರುವ ಬಂಡಲ್ ನೀಡಲಾಯಿತು. ಒಂದು ಸುತ್ತಿನಲ್ಲಿ 7 ಸಾವಿರ ಮತ ಎಣಿಕೆ ಮಾಡಲಾಯಿತು. ಜೂ.8ರಂದು ಮತದಾನ ನಡೆದಿತ್ತು.

Translate »