ಭಾರತ್ ಬಂದ್‍ಗೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೆಂಬಲ
ಮೈಸೂರು

ಭಾರತ್ ಬಂದ್‍ಗೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೆಂಬಲ

March 26, 2021

ಮೈಸೂರು,ಮಾ.25-ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ಭಾರತ್ ಬಂದ್‍ಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ರೈತರು ನಡೆ ಸುತ್ತಿರುವ ಹೋರಾಟ ಪ್ರಾರಂಭ ವಾಗಿ ಮಾ.26ಕ್ಕೆ 4 ತಿಂಗಳು ಪೂರ್ಣಗೊಳ್ಳಲಿದೆ. ಆದರೆ ಪ್ರಧಾನಿ ಮೋದಿ ಅವರು, ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡದೆ, ಸಂಘಟನಾ ನಾಯಕರ ಜೊತೆ ಒಮ್ಮೆಯೂ ನೇರ ಮಾತುಕತೆ ನಡೆಸದೆ ಇರುವುದು ದುರ್ದೈವದ ಸಂಗತಿ. ಅಲ್ಲದೆ ಮರಣ ಹೊಂದಿದ ಚಳವಳಿ ನಿರತ ರೈತರಿಗೆ ಸಂತಾಪ ಸೂಚಿಸಲಿಲ್ಲ. ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳದಿ ರುವುದು ಖಂಡನೀಯ ಎಂದು ಮರಿತಿಬ್ಬೇಗೌಡರು ಪ್ರಕಟಣೆ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತ ದೇಶದ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಪಾತ್ರವೇ ಪ್ರಮುಖವಾಗಿದ್ದು, ರೈತ ದೇಶದ ಬೆನ್ನೆಲುಬು. ರೈತ ಕಾರ್ಮಿಕರ ದುಡಿಮೆಯಿಂದ ಮಾತ್ರ ಭಾರತ ಅಭಿವೃದ್ಧಿ ಸಾಧ್ಯ. ಶೇಕಡ 60ಕ್ಕೂ ಹೆಚ್ಚು ಜನರಿಗೆ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕಲ್ಪಿತವಾಗಿದೆ. ಕೃಷಿ ಕ್ಷೇತ್ರಕ್ಕೆ ಮಾರಕ ವಾಗಿರುವ ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಹಿಂಪಡೆ ಯುವಂತೆ ನಡೆಸುತ್ತಿರುವ ಹೋರಾಟ ನ್ಯಾಯಯುತ ವಾಗಿದೆ. ಆದರೆ ಶ್ರಮಿಕರ ಚಳುವಳಿಗೆ ಸರ್ಕಾರ ಸ್ಪಂದಿ ಸದೆ, ಹೋರಾಟ ಹತ್ತಿಕ್ಕಲು ನಿರಂತರ ಪ್ರಯತ್ನ ನಡೆಸ ಲಾಗುತ್ತಿದೆ. ಚಳುವಳಿ ನಿರತ ರೈತರ ಮೇಲೆ ಉದ್ದೇಶ ಪೂರ್ವಕವಾಗಿ, ವಿನಾಕಾರಣ ಮೊಕದ್ದಮೆ ಹೂಡಲಾಗು ತ್ತಿದೆ. ಈ ಮೂಲಕ ಕಿರುಕುಳ, ಹಿಂಸೆ ನೀಡುತ್ತಿರುವುದು ಅತ್ಯಂತ ಹೀನ ಕೃತ್ಯ. ಹೀಗೆ ಬಂಡವಾಳಶಾಹಿಗಳ ಜೊತೆ ಸೇರಿ ರೈತರನ್ನು ನಿರ್ಲಕ್ಷಿಸಿದರೆ ದೇಶದ ಬೆಳವಣಿಗೆ ಅಧಃಪತನಕ್ಕೆ ಪ್ರಧಾನಿಗಳೇ ಕಾರಣರಾಗುತ್ತಾರೆ ಎಂದು ಆರೋಪಿಸಿರುವ ಅವರು, ಅನ್ನದಾತನ ಉಳಿವಿಗಾಗಿ ನಡೆಯುತ್ತಿರುವ ಭಾರತ್ ಬಂದ್‍ಗೆ ನಾಡಿನ ಜನ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.

Translate »