ಮೈಸೂರು ವಿಜಯನಗರದ ಪಾರ್ಕ್‍ನಲ್ಲಿ  ಪಕ್ಷಿಗಳ ಶಂಕಾಸ್ಪದ ಸಾವು
ಮೈಸೂರು

ಮೈಸೂರು ವಿಜಯನಗರದ ಪಾರ್ಕ್‍ನಲ್ಲಿ ಪಕ್ಷಿಗಳ ಶಂಕಾಸ್ಪದ ಸಾವು

March 26, 2021

ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆ

ಮೈಸೂರು,ಮಾ.25(ಆರ್‍ಕೆ)-ಮೈಸೂರಿನ ವಿಜಯನಗರ ಮೊದಲ ಹಂತದ ಕೊಡವ ಸಮಾಜ ಸಮೀಪದ ಪಾರ್ಕ್‍ನಲ್ಲಿ ಪಕ್ಷಿಗಳು ಶಂಕಾಸ್ಪದ ರೀತಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಕಳೆದ 4 ದಿನಗಳ ಹಿಂದೆ 3 ಪಾಂಡಹೆರಾನ್ಸ್ ಪಕ್ಷಿಗಳು ಮೃತಪಟ್ಟಿರು ವುದರ ಬಗ್ಗೆ ವಾಯುವಿಹಾರಿಗಳು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಇವುಗಳ ಸಾವಿಗೆ ಕಾರಣ ತಿಳಿಯಲು ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ಪಾರ್ಕ್‍ನ ಒಂದು ಬದಿಯಲ್ಲಿ ಒಳಚರಂಡಿ ನೀರು ನಿಂತಿದ್ದು, ಮೈಸೂರು ಪಾಲಿಕೆ ಅಧಿಕಾರಿಗಳನ್ನು ಕರೆಸಿ, ತ್ಯಾಜ್ಯ ನೀರು ಎಲ್ಲಿಂದ ಬರುತ್ತಿದೆ ಎಂಬು ದನ್ನು ಪರಿಶೀಲಿಸಿದರಲ್ಲದೆ, ತಕ್ಷಣವೇ ಕೊಳಚೆ ನೀರು ಹರಿದು ಬರುತ್ತಿರುವುದನ್ನು ತಪ್ಪಿಸಿದ್ದಾರೆ. ಕೊಳಚೆ ನೀರು ಸೇವಿಸಿದ್ದರಿಂದಲೇ ಪಾಂಡಹೆರಾನ್ಸ್ ಪಕ್ಷಿಗಳು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆಯಾದರೂ, ಪಾರ್ಕಿನ ಯಾವುದೇ ಭಾಗದಲ್ಲಿ ವಿಷಯುಕ್ತ ಪದಾರ್ಥಗಳಿರುವ ಯಾವುದೇ ಕುರುಹುಗಳು ಸಿಕ್ಕಿಲ್ಲ.

ಸಾವಿಗೆ ನಿಖರ ಕಾರಣ ಪತ್ತೆ ಮಾಡುವ ಸಲುವಾಗಿ ಒಳಚರಂಡಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವಾರದೊಳಗೆ ವರದಿ ಬರುವ ನಿರೀಕ್ಷೆ ಇದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಸಿ.ಪ್ರಶಾಂತ ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈಗ ಹಕ್ಕಿಜ್ವರವೂ ಇಲ್ಲ, ಪಾರ್ಕಿನಲ್ಲಿ ಪಕ್ಷಿಗಳು ಸಾವನ್ನಪ್ಪಲು ಕಾರಣವಾದ ಅಂಶಗಳೂ ಇಲ್ಲದಿರುವುದರಿಂದ ಮೂರು ಪಕ್ಷಿಗಳ ಮೃತದೇಹ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಅಲ್ಲಿಯೇ ಈಗಲೂ ಇನ್ನೂ ಹಲವು ಪಕ್ಷಿಗಳು ಚೆನ್ನಾಗಿಯೇ ಹಾರಾಡಿಕೊಂಡಿವೆ ಎಂದ ಅವರು, ಪ್ರಯೋಗಾಲಯ ದಿಂದ ವರದಿ ಬಂದ ಮೇಲೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದರು.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಪಾಲಿಕೆ ಅಧಿಕಾರಿಗಳು ಈಗಾಗಲೇ ಕೊಳಚೆ ನೀರನ್ನು ತೆರವುಗೊಳಿಸಿ, ಸ್ಥಳ ಸ್ವಚ್ಛಗೊಳಿಸಿರುವುದರಿಂದ ಮುಂದೆ ಇಂತಹ ಘಟನೆಗಳಿಗೆ ಆಸ್ಪದವಿರಲಾರದು ಎಂದೂ ಡಾ.ಪ್ರಶಾಂತಕುಮಾರ್ ತಿಳಿಸಿದರು. ಕಲುಷಿತ ನೀರು ಅಥವಾ ರಸಾಯನಿಕ ಮಿಶ್ರಿತ ಪದಾರ್ಥ ಸೇವಿಸಿ ಪಕ್ಷಿಗಳು ಸಾವನ್ನಪ್ಪಿರ ಬಹುದೆಂದು ಪೀಪಲ್ಸ್ ಫಾರ್ ಅನಿಮಲ್ಸ್(Pಈಂ)ಸಂಸ್ಥೆ ಮುಖ್ಯಸ್ಥೆ ಸವಿತಾ ನಾಗಭೂಷಣ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆ¯ ಅರಣ್ಯಾಧಿಕಾರಿಗಳು ನಿತ್ಯ ಪಾರ್ಕಿಗೆ ಭೇಟಿ ನೀಡಿ ಪರಿಶೀಲನೆ ನಡಸುತ್ತಿದ್ದು, ಪಕ್ಷಿಗಳ ಚಲನ-ವಲನದ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದರು.

Translate »