ಕ್ರೀಡಾ ಪ್ರತಿಭಾನ್ವೇಷಣೆ; 280 ‘ಉತ್ಸಾಹಿ’ ವಿದ್ಯಾರ್ಥಿಗಳು ಭಾಗಿ
ಮೈಸೂರು

ಕ್ರೀಡಾ ಪ್ರತಿಭಾನ್ವೇಷಣೆ; 280 ‘ಉತ್ಸಾಹಿ’ ವಿದ್ಯಾರ್ಥಿಗಳು ಭಾಗಿ

March 26, 2021

ಮೈಸೂರು,ಮಾ.25(ಎಂಟಿವೈ)-ಕ್ರೀಡಾ ಚಟು ವಟಿಕೆಗಳ ಮೂಲಕ ಮಕ್ಕಳಲ್ಲಿರುವ ಸಾಮಥ್ರ್ಯ, ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ಮೈಸೂರಿನ ನಜರಬಾದ್‍ನಲ್ಲಿ ರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭ ವಾದ 2 ದಿನಗಳ `ಕ್ರೀಡಾ ಪ್ರತಿಭಾನ್ವೇಷಣೆ’ (ಟಾಲೆಂಟ್ ಸರ್ಚ್) ಶಿಬಿರದಲ್ಲಿ 280 ವಿದ್ಯಾರ್ಥಿಗಳು ಉತ್ಸಾಹ ದಿಂದ ಪಾಲ್ಗೊಂಡು ಕ್ರೀಡಾಸಕ್ತಿ ಪ್ರದರ್ಶಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಕ್ರೀಡಾ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಕ್ರೀಡಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ಮೈಸೂರು ನಗರದ ವಿವಿಧೆಡೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 8-15 ವರ್ಷ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಾರು ಯಾವ ಕ್ರೀಡೆಗೆ ಸೂಕ್ತ ಎಂದು ವಿದ್ಯಾರ್ಥಿ ಗಳನ್ನು ಗುರುತಿಸಿ ಹೆಚ್ಚಿನ ತರಬೇತಿ, ಮಾರ್ಗದರ್ಶನ ಉಚಿತವಾಗಿ ನೀಡಲಾಯಿತು.

ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂ ಗಣದಲ್ಲಿನ ಕ್ರೀಡಾ ವಿಜ್ಞಾನ ಕೇಂದ್ರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಉಚಿತವಾಗಿ `ಕ್ರೀಡಾ ಪ್ರತಿಭಾನ್ವೇಷಣೆ’ ನಡೆಸುತ್ತಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾ ಯಕ ನಿರ್ದೇಶಕ ಜಿ.ಓಂಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಅದರಂಗ ವಾಗಿ ಮೈಸೂರಲ್ಲಿ ಎರಡು ದಿನಗಳ ಟ್ಯಾಲೆಂಟ್ ಸರ್ಚ್ ಶಿಬಿರ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಯಾವ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ? ಯಾವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಮಥ್ರ್ಯವಿದೆ? ಎಂಬುದನ್ನು ಪತ್ತೆ ಮಾಡÀಲಾಗುವುದು. ಕಾಲು, ಮಂಡಿ, ಮೊಣಕಾಲು, ದೇಹ ಚಲನೆ, ವೇಗದ ಓಟ ಹಾಗೂ ಇನ್ನಿತರ ಸಾಮಥ್ರ್ಯ ಗಳ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದರು.

ಕ್ರೀಡಾ ವಿಜ್ಞಾನ ಕೇಂದ್ರದ ನಿರ್ದೇಶಕ ಆಂಥೊಣಿ ಚಾಕೋ ಮಾತನಾಡಿ, ಶಿಬಿರದಲ್ಲಿ 44 ಬಗೆಯ ಪರೀಕ್ಷೆಗಳಿಂದ ಮಾಹಿತಿ ಕ್ರೋಢೀಕರಿಸಿ, ಬಾಲಕ-ಬಾಲಕಿಯರು ಪ್ರತ್ಯೇಕವಾಗಿ ಅಥ್ಲೆಟಿಕ್ಸ್, ಈಜು, ಫೆನ್ಸಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಕಯಾಕಿಂಗ್, ವೇಯ್ಟ್ ಲಿಫ್ಟಿಂಗ್, ಜಿಮ್ನಾಸ್ಟಿಕ್, ಡೈವಿಂಗ್, ಶೂಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಈಗಾಗಲೇ ಕೆಜಿಎಫ್, ಕೋಲಾರ, ಬಂಗಾರ ಪೇಟೆ, ಕಾರವಾರ, ಹಳಿಯಾಳ, ಯಲ್ಲಾಪುರ, ರಾಯಚೂರು, ಯಾದಗಿರಿಯಲ್ಲಿ ಇಂಥ ಶಿಬಿರ ನಡೆಸಲಾಗಿದೆ. ಮೈಸೂರು ನಂತರ ಮಡಿಕೇರಿ, ಗೋಣಿಕೊಪ್ಪದಲ್ಲಿ ನಡೆಸಲಾಗುವುದು ಎಂದರು.

Translate »