ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ
ಹಾಸನ

ಮಾನಸಿಕ, ಶಾರೀರಿಕ ಆರೋಗ್ಯಕ್ಕೆ ಕ್ರೀಡೆ ಮುಖ್ಯ

July 19, 2018

ಹಾಸನ:  ಕೆಲಸದ ಒತ್ತಡದಲ್ಲಿರುವ ಪತ್ರಕರ್ತರಿಗೆ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿಟ್ಟು ಕೊಳ್ಳಲು ಕ್ರೀಡೆ ಬಹಳ ಮುಖ್ಯ ಎಂದು ಮಲೆನಾಡು ತಾಂತ್ರಿಕ ಕಾಲೇಜು ಪ್ರಾಂಶು ಪಾಲ ಕೆ.ಎಸ್.ಜಯಂತ್ ತಿಳಿಸಿದರು.

ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾ ಸಂಘ ದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾ ವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಕ್ರೀಡೆ ಯಲ್ಲ್ಲಿ ಆಗಾಗ್ಗೆ ಭಾಗವಹಿಸುವ ಮೂಲಕ ತಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾ ಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು. ಕ್ರೀಡೆ ಎಂದರೇ ಮನಸ್ಸುಗಳು ಒಂದಾಗಿ, ಸ್ನೇಹ ಸಂಬಂಧಗಳು ಉತ್ತಮ ವಾಗುತ್ತದೆ. ಜೊತೆಗೆ ಆರೋಗ್ಯ ವೃದ್ಧಿಸುತ್ತದೆ. ಇಂದಿನ ಯುವಕರಿಗೆ ಆಟೋಟದ ಬಗ್ಗೆ ಹೆಚ್ಚು ಆಸಕ್ತಿ ಇರುವುದು ಕಂಡು ಬರುತ್ತಿದೆ. ಪ್ರತಿ ದಿನ ಕೆಲ ಸಮಯವನ್ನು ವಾಯು ವಿಹಾರಕ್ಕೆ ಮೀಸಲಿಡಬೇಕು. ಕ್ರೀಡೆಯಿಂದ ಒಳ್ಳೆಯ ಮನಸ್ಸು ಜೊತೆಗೆ ಆನಂದವನ್ನು ಪಡೆಯಬಹುದು ಎಂದು ಹೇಳಿದರು.

ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲ ಕೃಷ್ಣೇಗೌಡ ಮಾತನಾಡಿ, ಯಾವುದೇ ಒಂದು ಸ್ಪರ್ಧೆಯಕಲ್ಲೂ ಪೈಪೋಟಿ ಇದ್ದೆ ಇರುತ್ತದೆ. ಆದರೆ ಅದು ಆರೋಗ್ಯಕರವಾಗಿ ರಬೇಕು. ಗಟ್ಟಿಯಾದ ಸಮಾಜ ಕಟ್ಟಲು ಇಂತಹ ಕ್ರೀಡೆಯನ್ನು ಹೆಚ್ಚೆಚ್ಚು ಆಯೋ ಜಿಸುವಂತೆ ಕರೆ ನೀಡಿದರು.

ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೂಡು ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಜಿ.ಪ್ರಕಾಶ್, ನಗರ ಕಾರ್ಯದರ್ಶಿ ಎಂ.ಬಿ. ಮುರುಳಿ, ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಕುಮಾರ್, ಉದಯಕುಮಾರ್, ವ್ಯಂಗ್ಯ ಚಿತ್ರಕಾರ ಶಿವರಾಮ್, ಕ್ರೀಡಾ ಸಂಚಾಲಕ ಕುಮಾರ್, ರಾಜೇಶ್ ಇತರರಿದ್ದರು.

Translate »