ಮೈಸೂರಿನ ಭಾರತೀಯ ವಿದ್ಯಾ ಭವನ ವಿದ್ಯಾರ್ಥಿ  ಟಿ.ಕೆ.ಬೋಪಣ್ಣ ಖೇಲೋ ಇಂಡಿಯಾಕ್ಕೆ ಆಯ್ಕೆ
ಮೈಸೂರು

ಮೈಸೂರಿನ ಭಾರತೀಯ ವಿದ್ಯಾ ಭವನ ವಿದ್ಯಾರ್ಥಿ ಟಿ.ಕೆ.ಬೋಪಣ್ಣ ಖೇಲೋ ಇಂಡಿಯಾಕ್ಕೆ ಆಯ್ಕೆ

March 25, 2021

ಮೈಸೂರು,ಮಾ.24-ಮೈಸೂರಿನ ವಿಜಯನಗರದ ಭಾರತೀಯ ವಿದ್ಯಾ ಭವನ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿ ರುವ ಟಿ.ಕೆ.ಬೋಪಣ್ಣ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಮ್ಯಾರಥಾನ್ ಓಟಗಾರನಾಗಿ ಸಾಧನೆ ಮಾಡಿದ್ದ ಕ್ರೀಡಾಪಟು ಟಿ.ಕೆ.ಬೋಪಣ್ಣ ಅವರನ್ನು ಭಾರತೀಯ ವಿದ್ಯಾ ಭವನ ಶಾಲೆ ಯಲ್ಲಿ ಗೌರವಿಸಲಾಯಿತು. 36ನೇ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 800 ಮೀಟರ್ ಓಟದಲ್ಲಿ ಚಿನ್ನದ ಪದಕ. ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ -2021 ನಡೆಸಿದ 2 ಕಿ.ಮೀ ಕ್ರಾಸ್ ಕಂಟ್ರಿ ರೇಸ್‍ನಲ್ಲಿ ಚಿನ್ನದ ಪದಕ. ಅಸ್ಸಾಂನ ಗೌಹಾಟಿಯಲ್ಲಿ ನಡೆದ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2021ರಲ್ಲಿ ಕಂಚಿನ ಪದಕ. 32ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್-2021ರಲ್ಲೂ 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

Translate »