ಪರಂಪರಾಗತ ಆಹಾರ ಪದ್ಧತಿ ಕುರಿತ ಪ್ರಾತ್ಯಕ್ಷಿಕೆ, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಪರಂಪರಾಗತ ಆಹಾರ ಪದ್ಧತಿ ಕುರಿತ ಪ್ರಾತ್ಯಕ್ಷಿಕೆ, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

March 25, 2021

ಮೈಸೂರು, ಮಾ.24(ಆರ್‍ಕೆಬಿ)-ರಾಷ್ಟ್ರೀಯ ಪೋಷಣೆ ಅಭಿಯಾನದಡಿ ಬುಧವಾರ ಮೈಸೂರಿನ ಜಿಪಂ ಸಭಾಂಗಣದ ಆವರಣದಲ್ಲಿ ಪರಂಪರಾಗತ ಅಹಾರ ಪದ್ಧತಿಗಳ ಕುರಿತ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋ ಜಿಸಿದ್ದ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಚಾಲನೆ ನೀಡಿದರು.

ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಪೋಷಕಾಂಶವುಳ್ಳ ಆಹಾರದ ಬಗ್ಗೆ ಜನಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ವಿವಿಧ ಅಂಗನವಾಡಿ ಶಿಕ್ಷಕಿಯರು ತಾವೇ ತಯಾರಿಸಿದ ಕೋಸಂಬರಿ, ಪುಷ್ಟಿ ಪಕೋಡ, ಶೇಂಗಾ ಚಟ್ನಿಪುಡಿ, ಅಂಟು ಉಂಡೆ, ಪೌಷ್ಟಿಕಾಂಶಯುಕ್ತ ಸೊಪ್ಪಿನ ರಸ, ಕ್ಯಾರೆಟ್ ಜ್ಯೂಸ್, ರಾಗಿ ಮತ್ತು ಅಕ್ಕಿರೊಟ್ಟಿ, ಹಾಲಿನಪುಡಿ ಸಿಹಿ ಬರ್ಫಿ, ಮಸಾಲೆ ರೊಟ್ಟಿ, ನುಗ್ಗೆಸೊಪ್ಪಿನ ಪಲ್ಯ ಹೀಗೆ ಹಲವಾರು ರೀತಿಯ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಪ್ರಾತ್ಯಕ್ಷಿಕೆ ನಡೆಯಿತು.

ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸಿಇಓ ಎ.ಎಂ.ಯೋಗೀಶ್ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ, ನಿರೂಪಣಾಧಿಕಾರಿ ಗೀತಾಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಪಾಟೀಲ್, ಮಧುಸೂದನ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಬಿ.ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »