ಮೈಸೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜು,  ಚಿತ್ರಮಂದಿರಗಳೇ ಕೊರೊನಾ ಕೇಂದ್ರಗಳಾಗಿವೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶಾಲಾ-ಕಾಲೇಜು, ಚಿತ್ರಮಂದಿರಗಳೇ ಕೊರೊನಾ ಕೇಂದ್ರಗಳಾಗಿವೆ

March 25, 2021

ಮೈಸೂರು, ಮಾ.24(ಆರ್‍ಕೆಬಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶಾಲಾ-ಕಾಲೇಜು ಮತ್ತು ಚಿತ್ರಮಂದಿರ ಗಳಿಂದಲೇ ಹೆಚ್ಚಾಗಿ ಕೊರೊನಾ ಸೋಂಕು ಹರಡುತ್ತಿರುವುದಾಗಿ ವಿಶ್ಲೇಷಿಸಿದ್ದೇವೆ. ಇದನ್ನು ನಿಯಂತ್ರಿಸದೆ ಹೀಗೆ ಬಿಟ್ಟರೆ ಪ್ರಕರಣಗಳ ಸಂಖ್ಯೆ ದಿನೇದಿನೆ ದ್ವಿಗುಣ ಗೊಳ್ಳುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಟಿ.ಅಮರ್‍ನಾಥ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರು ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಅಧ್ಯಕ್ಷೆ ಪರಿ ಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ನಡೆದ ಕರ್ನಾ ಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಅವರು ಮಾಹಿತಿ ನೀಡಿದರು.
ಬನ್ನೂರು ಶಾಲೆಯಲ್ಲಿ ಕಂಡು ಬಂದ 18 ಪಾಸಿಟಿವ್ ಪ್ರಕರಣಗಳಲ್ಲಿ ಸಂಪರ್ಕಿ ತರನ್ನು ಪತ್ತೆ ಹಚ್ಚಿದಾಗ 78 ಪಾಸಿಟಿವ್ ಪ್ರಕರಣಗಳು ಬಂದಿವೆ. ಹಾಗಾಗಿ ಬನ್ನೂರು ಶಾಲೆಯನ್ನು 14 ದಿನಗಳ ಕಾಲ ಬಂದ್ ಮಾಡಬೇಕೇ ಅಥವಾ ಐಸೋಲೇಷನ್ ಮಾಡಬೇಕೇ ಎಂಬ ಬಗ್ಗೆ ಜಿಲ್ಲಾಧಿ ಕಾರಿಗಳು ಕರೆದಿರುವ ಸಭೆಯಲ್ಲಿ ನಿರ್ಧಾರಗೊಳ್ಳಲಿದೆ ಎಂದು ಹೇಳಿದರು.

ಇದೇ ರೀತಿ ಶಾಲೆಗಳಲ್ಲಿ ಕೊರೊನಾ ಹರಡಿದರೆ 5ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಅವು ಗಳನ್ನು 14 ದಿನಗಳವರೆಗೆ ಮುಚ್ಚಿಸಬೇಕೇ ಎಂಬ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧ ರಿಸುತ್ತಾರೆ ಎಂದರು.

ಶಾಲೆಗಳಲ್ಲಿ ಹೆಚ್ಚು ಪ್ರಕರಣಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆ ಗಳಲ್ಲೂ ಕಡ್ಡಾಯವಾಗಿ ಮತ್ತೊಂದು ಸುತ್ತು ಟೆಸ್ಟ್ ಮಾಡಿಸಲಾಗುತ್ತದೆ. ಹಾಸ್ಟೆಲ್ ಗಳಲ್ಲಿಯೂ ವಿದ್ಯಾರ್ಥಿಗಳು ಒಟ್ಟಿಗೆ ಇರು ತ್ತಾರೆ. ಅಲ್ಲಿಯೂ ಹರಡುವ ಸಾಧ್ಯತೆ ಹೆಚ್ಚು. ಅಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಸುತ್ತಿಲ್ಲ ಎಂಬ ದೂರುಗಳಿವೆ. ನಾವು 4-5 ಇಂಜಿ ನಿಯರಿಂಗ್ ಕಾಲೇಜು ಹಾಸ್ಟೆಲ್‍ಗಳಿಗೆ ಭೇಟಿ ನೀಡಿದ್ದೇವೆ. ಎಲ್ಲಾ ಹಾಸ್ಟೆಲ್‍ಗಳಲ್ಲೂ ಕಟ್ಟು ನಿಟ್ಟಾಗಿ ಮಾರ್ಗಸೂಚಿ ಅನುಸರಿಸಲು ಸೂಚಿಸಿದ್ದೇವೆ. ಮನೆಗೆ ಹೋಗಿ ಬರುವ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ಬಂದರೆ ಆರ್‍ಟಿ -ಪಿಸಿಆರ್ ನೆಗೆಟಿವ್ ವರದಿ ತಂದರೆ ಮಾತ್ರ ಹಾಸ್ಟೆಲ್ ಒಳಗೆ ಸೇರಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.

ಎಲ್ಲಾ ಶಾಲಾ ಕಾಲೇಜುಗಳಲ್ಲೂ ಕೊರೊನಾ ಸೋಂಕು ಹರಡದಂತೆ ಪ್ರಯತ್ನ ಮಾಡುತ್ತಿದ್ದೇವೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಲು ಸೂಚಿಸಿದ್ದೇವೆ. ಜೊತೆಗೆ ಕೋವಿಡ್ ಲಸಿಕೆ ತೆಗೆದು ಕೊಂಡರೆ ಶೇ.80ರಷ್ಟು ರಕ್ಷಣೆ ಸಿಗುತ್ತದೆ ಎಂದು ತಿಳಿಹೇಳಿದ್ದೇವೆ ಎಂದು ತಿಳಿಸಿದರು.
60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಗುರಿ: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಇದು ವರೆಗೆ 68,000 ಲಸಿಕೆ ನೀಡಿದ್ದೇವೆ. ನಮಗೆ 2,79,000 ಗುರಿ ಇದೆ. ಇನ್ನು ಮಾ.31 ರೊಳಗೆ 2 ಲಕ್ಷದವರೆಗೆ ಮಾಡಿ, ಉಳಿದ ವನ್ನು ಏ.5ರೊಳಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪಾಸಿ ಟಿವ್ ಸಂಖ್ಯೆ 2 ವಾರಗಳ ಹಿಂದೆ ಶೇ.0.83 ಇತ್ತು. ಈಗ 1.24 ಆಗಿದೆ. ರಾಜ್ಯ ಅನು ಪಾತಕ್ಕೆ ಹೋಲಿಸಿದರೆ ನಮ್ಮದು ಕಡಿಮೆ ಇದೆ. ರಾಜ್ಯದಲ್ಲಿ ಶೇ.2.4ರಷ್ಟಿದೆ. ರಾಜ್ಯದ ಅನುಪಾತಕ್ಕೆ ಹೋಲಿಸಿದರೆ ನಮ್ಮದು ಕಡಿಮೆ ಇದೆ. ಆದರೂ ಹೇಳಲಾಗದು. ಇದೇ ರೀತಿ ಹರಡಿದರೆ ನಿನ್ನೆ 100 ಪ್ರಕ ರಣಗಳು ಬಂದಿದ್ದು, ಮುಂದೆ ಇದು ದ್ವಿಗುಣ ವಾಗುತ್ತಾ ಹೋಗಬಹುದು ಎಂದು ಡಿಹೆಚ್‍ಓ ಆತಂಕದಿಂದ ನುಡಿದರು.
ಜನರಿಗೆ ಭಯವೇ ಇಲ್ಲದಂತಾಗಿದೆ: ಕೊರೊನಾದಿಂದ ಸಾವಿನ ಪ್ರಮಾಣ ಕಡಿಮೆ ಇದ್ದು, 0.01 ಇದೆ. ಸಾವುಗಳಿಲ್ಲ ದಿರುವುದರಿಂದಲೇ ಜನರಿಗೆ ಭಯ ಇಲ್ಲದಂತಾಗಿದೆ. ಕೊರೊನಾ ಬಂದರೂ ವೈದ್ಯರು ವಾಸಿ ಮಾಡುತ್ತಾರೆಂಬ ನಂಬಿಕೆ ಯಿಂದಾಗಿ ಜನರು ಕೊರೊನಾ ಎಚ್ಚರಿಕೆ ಗಳನ್ನು ಪಾಲಿಸುತ್ತಿಲ್ಲ ಎಂದರು. ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆ ವಹಿಸಿ ದ್ದರು. ಉಪಾಧ್ಯಕ್ಷೆ ಗೌರಮ್ಮ ಸೋಮ ಶೇಖರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಮಂಜುನಾಥ್, ಗುರುಸ್ವಾಮಿ, ಸಿಇಓ ಎ.ಎಂ.ಯೋಗೀಶ್ ಇತರರು ಇದ್ದರು.

Translate »