ಸಭೆ, ಸಮಾರಂಭ, ಮನರಂಜನೆ,  ಧಾರ್ಮಿಕ ಕಾರ್ಯಗಳಿಗೆ ಕಡಿವಾಣ ಹಾಕಿ ಜಿಲ್ಲಾಡಳಿತಕ್ಕೆ ಸಚಿವ ಡಾ.ಸುಧಾಕರ್ ಸೂಚನೆ
News

ಸಭೆ, ಸಮಾರಂಭ, ಮನರಂಜನೆ, ಧಾರ್ಮಿಕ ಕಾರ್ಯಗಳಿಗೆ ಕಡಿವಾಣ ಹಾಕಿ ಜಿಲ್ಲಾಡಳಿತಕ್ಕೆ ಸಚಿವ ಡಾ.ಸುಧಾಕರ್ ಸೂಚನೆ

March 25, 2021

ಬೆಂಗಳೂರು, ಮಾ.24(ಕೆಎಂಶಿ)- ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಮುಂದಿನ ಒಂದು ತಿಂಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಸಭೆ-ಸಮಾರಂಭ, ಮನ ರಂಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 1 ತಿಂಗಳು ಅತ್ಯಂತ ಸವಾಲಿನ ಪರಿಸ್ಥಿತಿ ಎದುರಾಗುವ ಸಂಭವವಿದೆ, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.2ರಷ್ಟು ಹೆಚ್ಚಾಗುತ್ತಿದೆ, ಮನರಂಜನೆ, ಧಾರ್ಮಿಕ ಕಾರ್ಯಕ್ರಮ ಗಳು, ರಾಜಕೀಯ ಚಟುವಟಿಕೆಗಳು, ಸಭೆ-ಸಮಾರಂಭಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಗಳ ಜೊತೆ ಮಾತುಕತೆ ನಡೆಸಲಾಗಿದೆ, ಗಡಿ ಭಾಗಗಳಲ್ಲಿ ಹೊರರಾಜ್ಯ ಗಳಿಂದ ಬಂದವರನ್ನು ತಪಾಸಣೆ ಮಾಡುವುದು, ಕೋವಿಡ್ ನೆಗೆಟಿವ್ ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.
ಧಾರ್ಮಿಕ ಮುಖಂಡರು ಜನರಲ್ಲಿ ಕೋವಿಡ್ ಕುರಿತಂತೆ ಅರಿವು ಮೂಡಿಸುವ ಕಾರ್ಯ ಮಾಡಬೇಕು, ಹೆಚ್ಚು ಜನರು ಸೇರದಂತೆ ಸ್ವಾಮೀಜಿ ಗಳು ಭಕ್ತರಿಗೆ ಸೂಚಿಸಬೇಕು ಎಂದು ಸುಧಾಕರ್ ಮನವಿ ಮಾಡಿದರು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಲ್ಲಿ ಎಲ್ಲರೂ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಲಸಿಕೆ ಕೊರತೆ ಎದುರಾಗಿಲ್ಲ, ರಾಜ್ಯದಲ್ಲಿ ಪ್ರಸ್ತುತ 4 ಲಕ್ಷ ಡೋಸ್ ಲಸಿಕೆ ಅಗತ್ಯವಿತ್ತು, ಸಾಕÀಷ್ಟು ಲಸಿಕೆ ಸಂಗ್ರಹ ಇದೆ. ವಾರಾಂತ್ಯಕ್ಕೆ ಕೇಂದ್ರ ದಿಂದ ಹನ್ನೆರಡೂವರೆ ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ಬರಲಿದೆ, ಕರ್ನಾಟಕಕ್ಕೆ ಅಗತ್ಯವಿರುವಷ್ಟು ಕೋವಿಡ್ ಲಸಿಕೆ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ವದಂತಿಗಳಿಗೆ ಕಿವಿಗೊಡದೆ 45 ವರ್ಷ ಮೇಲ್ಪಟ್ಟ ಪ್ರತಿಯೊ ಬ್ಬರೂ ನಿಗದಿಪಡಿಸಿರುವ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಡಾ.ಸುಧಾಕರ್ ಮನವಿ ಮಾಡಿದರು.

Translate »