ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ
ಮಂಡ್ಯ

ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ

June 24, 2018

ಮಂಡ್ಯ:  ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕನೇ ಬಾರಿ ಆಯ್ಕೆ ಯಾಗಲು ಕಾರಣದಾರ ಪಕ್ಷದ ಮುಖಂ ಡರು, ಶಾಸಕರು, ಶಿಕ್ಷಕ ಮತದಾರರು, ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸುವುದಾಗಿ ನೂತನ ವಿಧಾನ ಪರಿಷತ್ ಸದಸ್ಯ ಮರಿತಿ ಬ್ಬೇಗೌಡ ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಬಂಧು ಗಳಿಗಾಗಿ ಕೃತಜ್ಞತಾ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

ಜೂ.21ರವರೆಗೆ ಉಪ ಸಭಾಪತಿ ಯಾಗಿ ಕಾರ್ಯ ನಿರ್ವಹಿಸಿ, ಹಿಂದಿನ ಅವಧಿ ಮುಗಿಸಿ ನಾಲ್ಕನೇ ಅವಧಿಗೆ ನಿನ್ನೆ ಪ್ರಮಾಣ ವಚನ ಸ್ವೀಕರಿಸಿ, ವಿಧಾನ ಪರಿ ಷತ್ ಸದಸ್ಯನಾಗಿದ್ದೇನೆ ಎಂದು ತಿಳಿಸಿದರು.

ಮಳವಳ್ಳಿ ತಾಲೂಕು ಅಂಚೆದೊಡ್ಡಿ ಕುಗ್ರಾಮದ ರೈತ ಸಮುದಾಯದಿಂದ ಬಂದಿರುವ ನಾನು ಮೈಸೂರು ವಿವಿ ವಿದ್ಯಾರ್ಥಿಯಾಗಿ, ಸೆನೆಟ್ ಸದಸ್ಯನಾಗಿ, ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಂಸ್ಥೆ ಕೆಲಸ ಮಾಡಿ, ತಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ನಾಲ್ಕು ಜಿಲ್ಲೆ, ನಾಲ್ಕು ಲೋಕಸಭಾ ಕ್ಷೇತ್ರ, 28 ವಿಧಾನಸಭಾ ಕ್ಷೇತ್ರ ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಗೆಲ್ಲಲು ಮಂಡ್ಯ ಜಿಲ್ಲೆಯ ಶಿಕ್ಷಕ ಬಂಧು ಗಳು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಹಿತೈಷಿಗಳು ಕೆಲಸ ಕಾರಣ ಎಂದರು.
ನಾಲ್ಕು ಚುನಾವಣೆಗಳಲ್ಲಿ ನನ್ನನ್ನು ಆರಿಸಿ ಕಳುಹಿಸಿದ್ದೀರಿ. ಈ ಬಾರಿಯ ಫಲಿ ತಾಂಶದ ಸಂದರ್ಭದಲ್ಲಿ ಬಹಳ ಅಚ್ಚರಿಯ ಫಲಿತಾಂಶ ಬಂತು. ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಬಹಳ ಹತ್ತಿರದಲ್ಲಿ ಏಕಕಾಲ ದಲ್ಲಿ ಬಂದಿದ್ದು, ವಿಧಾನಸಭೆ ಚುನಾವಣೆ ನಂತರ ಪರಿಷತ್ ಚುನಾವಣೆ ನಡೆದಿದ್ದು, ನನ್ನ ಗೆಲುವಿನಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆ ಉಂಟಾಯಿತು ಎಂದು ಚುನಾವಣೆಯ ಫಲಿತಾಂಶದ ಬಗ್ಗೆ ವಿಶ್ಲೇಷಿಸಿದರು.

ಚುನಾವಣಾ ಪೂರ್ವದಲ್ಲಿ ಮತ ದಾರರ ನೋಂದಣಿ ಸಂದರ್ಭದಲ್ಲಿ ನಾವು ಎಡವಿದ್ದೇವೆ ಎಂಬುದು ಚೆನ್ನಾಗಿ ತಿಳಿ ದಿದೆ. ಒಂದು ಗೆಲುವಿಗೆ ನೂರಾರು ಕಾರಣ. ಸೋತಾಗಲೂ ನೂರಾರು ಕಾರಣ ಪಟ್ಟಿ ಮಾಡಬಹುದು. ಆದರೆ ಏನೇ ಇರಲಿ ಕೊನೆಗೆ ಅದೃಷ್ಟ ಬಲ, ಅನುಗ್ರಹ, ಆಶೀ ರ್ವಾದ ನಡುವೆ ಅಭ್ಯರ್ಥಿಗಳಿಗೆ ಅದೃಷ್ಟ ಇರಬೇಕು. ದೇವರ ಆಶೀರ್ವಾದಿಂದ ಜಯ ತಂದುಕೊಟ್ಟಿದೆ ಎಂದರು. ಶಾಸಕ ಎಂ.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Translate »