ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!
ಮಂಡ್ಯ

ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!

June 24, 2018

ಮಂಡ್ಯ: ಗರ್ಭಿಣಿಯರಿಗೆ ಅವರ ಕುಟುಂಬ ವರ್ಗ, ಬಂಧು ಬಳಗ ದವರು ಸೀಮಂತ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಪಾಂಡವಪುರ ಪೊಲೀಸ್ ಠಾಣೆ ಸಿಬ್ಬಂದಿಯೇ ಸೀಮಂತ ಮಾಡಿರುವÀ ವಿಶಿಷ್ಠ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿ ರುವ ಸುಮಾರಾಣ ಅವರ ಸೀಮಂತ ಕಾರ್ಯಕ್ರಮವನ್ನು ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಠಾಣೆಯಲ್ಲಿ ಹಿಂದೂ ಸಂಪ್ರಾದಯದಂತೆ ಸೀಮಂರ ಕಾರ್ಯವನ್ನು ನೆರವೇರಿಸಲಾಯಿತು.

ಸಬ್ ಇನ್ಸ್‌ಪೆಕ್ಟರ್ ಸುಮಾರಾಣ ಅವರು ಪಾಂಡವಪುರ ಪೊಲೀಸ್ ಠಾಣೆಗೆ 10 ತಿಂಗಳ ಹಿಂದೆ ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದು, ವಿಧಾನಸಭೆ ಚುನಾವಣೆ ಸೇರಿ ದಂತೆ ವಿವಿಧ ಪ್ರಕರಣಗಳಲ್ಲಿ ಉತ್ತಮ ಮಹಿಳಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 8ತಿಂಗಳ ತುಂಬು ಗರ್ಭಿಣ ಯಾಗಿದ್ದ ಸುಮಾರಾಣ ಯವರು ಜೂ.28ರಿಂದ 6 ತಿಂಗಳವರೆಗೆ ಹೆರಿಗೆ ರಜೆಯ ಮೇಲೆ ತೆರಳುತ್ತಿದ್ದ ಹಿನ್ನೆಲೆ ಯಲ್ಲಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸುಮಾರಾಣ ಅವರಿಗೆ ಸೀಮಂತ ಕಾರ್ಯ ನೆರವೇರಿಸಿದರು.
ಸೀಮಂತ ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಸುಮಾರಾಣ ಅವರಿಗೆ ಮಹಿಳಾ ಸಿಬ್ಬಂದಿ ವರ್ಗ ಅರಿಶಿಣ, ಕುಂಕುಮ ಹಚ್ಚಿ, ಹಣ್ಣು ಹಂಪಲು, ಸೀರೆ ನೀಡಿ ಮಡಿಲು ತುಂಬಿದರು. ಜೊತೆಗೆ ಠಾಣೆಯ ಹಿರಿಯರು ಸುಮಾರಾಣ ಅವರಿಗೆ ಅಕ್ಷತೆ ಹಾಕುವ ಮೂಲಕ ಶುಭ ಹಾರೈಸಿದರು.

ಸದಾ ಕ್ರೈಂ, ತನಿಖೆ, ವಿಚಾರಣೆ ಇಂತಹ ವಿವಾದದಲ್ಲೇ ಬ್ಯುಸಿಯಾಗಿರುತ್ತಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಮೇಲಾಧಿ ಕಾರಿಯ ಸೀಮಂತ ಮಾಡಿ ಅಧಿಕಾರಿ ಮೇಲಿರುವ ಅಭಿಮಾನ ಮೆರೆದಿದ್ದಾರೆ.

ಸಂತೋಷವಾಗಿದೆ: ನನಗೆ ತುಂಬಾ ಸಂತೋಷವಾಗಿದೆ. ಗಂಡನ ಮನೆಯವರು, ಹಿರಿಯರು, ಕುಟುಂಬ ವರ್ಗದಂತೆಯೇ ನನಗೆ ಸೀಮಂತ ಕಾರ್ಯಕ್ರಮ ಮಾಡಿದ್ದು ಅದರಲ್ಲೂ ಸದಾ ಜಂಜಾಟದಲ್ಲಿ ಕೆಲಸ ಮಾಡುವ ಪೊಲೀಸ್ ಠಾಣೆಯಲ್ಲಿ ಇಂತಹ ಸಮಾರಂಭ ಮಹಿಳಾ ವರ್ಗಕ್ಕೆ ಗೌರವ ಸಿಕ್ಕಂತಾಗಿದೆ ಎಂದು ಸುಮಾರಾಣ ಹೇಳಿ ದರು. ಸಮಾರಂಭದಲ್ಲಿ ಸಿಪಿಐ ಶಂಕರಾಚಾರಿ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Translate »