ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್
ಮಂಡ್ಯ

ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್

June 24, 2018

ಮದ್ದೂರು: ಎಚ್.ಡಿ.ಕುಮಾರ ಸ್ವಾಮಿ ನಮ್ಮ ಸಿಎಂ ಎನ್ನುವ ಮೂಲಕ ಸಚಿವ ಜಮೀರ್ ಅಹಮದ್ ಮತ್ತು ಸಿಎಂ ಎಚ್‍ಡಿಕೆ ನಡುವಿನ ಶೀಥಲ ಸಮರಕ್ಕೆ ಅಂತ್ಯ ಹಾಡಿದ್ದಾರೆ.

ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಚ್‍ಡಿಕೆ ನಮ್ಮ ಸಿಎಂ, ಜನರ ಸಿಎಂ, ಬಡವರ ಸಿಎಂ ಎಂದು ಹಾಡಿಹೊಗಳಿದರು. ಬಡ ವರಿಗೆ ಮತ್ತಷ್ಟು ಕಾರ್ಯಕ್ರಮ ನೀಡಲು ಸಿಎಂ ಕುಮಾರಸ್ವಾಮಿ ಸಿದ್ಧರಿದ್ದಾರೆ. ಬಿಪಿಎಲ್ ಪಡಿತರ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.

ತಿರುಗೇಟು: ಟಿಪ್ಪು ಸುಲ್ತಾನ್ ಮುಸಲ್ಮಾನ ಅಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಾಗಂತ ಹೇಳಿ ರುವವರು ಖುರಾನ್ ಓದಿಯೇ ಇಲ್ಲ. ಹಾಗಾಗಿ ಅವರಿಗೆ ಟಿಪ್ಪು ಬಗ್ಗೆ ಗೊತ್ತಿಲ್ಲ, ಬಿಜೆಪಿ ವಕ್ತಾರ ಟಿಪ್ಪು ಸುಲ್ತಾನ್ ಮುಸ ಲ್ಮಾನ ಅಲ್ಲ ಎಂಬ ಹೇಳಿಕೆ ಬಾಲಿಶ ವಾದುದಾಗಿದೆ ಎಂದು ತಿರುಗೇಟು ನೀಡಿದರು.

ನಾನು ಭಗವದ್ಗೀತೆ ಓದಿಲ್ಲ. ಹಾಗಾಗಿ ಅದರ ಬಗ್ಗೆ ಏನು ಗೊತ್ತಿಲ್ಲ. ಆ ಬಗ್ಗೆ ವಿವಾದವಾಗಿ ಮಾತನಾಡೋದಕ್ಕೂ ಹೋಗೋದಿಲ್ಲ. ಆದರೆ ಟಿಪ್ಪು ಬಗ್ಗೆ ಟೀಕಿ ಸುವವರು ಖುರಾನ್ ಓದಿದ್ದಾರಾ ಎಂದು ಮರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೆನೆಟ್ ಸದಸ್ಯ ವಿಕೆ.ಜಗದೀಶ್, ಪುರಸಭಾ ಸದಸ್ಯ ಮನ್ಸೂರ್‍ಖಾನ್, ಅಸ್ಲಂಪಾಷ, ಜಿಪಂ ಮಾಜಿ ಅಧ್ಯಕ್ಷ ಕಂಟಿ ಸುರೇಶ್, ಎಪಿಎಂಸಿ ಅಧ್ಯಕ್ಷ ನಾಗೇಶ್, ಇನಾಯತ್‍ವುಲ್ಲಾ ಖಾನ್, ಮಾಚಹಳ್ಳಿ ಕುಮಾರ್, ಯಶ ವಂತಗೌಡ ಇದ್ದರು.

ಟಿಪ್ಪು ಮುಸಲ್ಮಾನನೇ ಅಲ್ಲ?: ಮಂಡ್ಯದ ಬಿಜೆಪಿ ಮುಖಂಡ, ನಮೋ ವಿಚಾರ ಮಂಚ್ ಕಾರ್ಯದರ್ಶಿ ಸಿ.ಟಿ.ಮಂಜು ನಾಥ್ ಅವರು ಟಿಪ್ಪು ಸುಲ್ತಾನ್ ಮುಸ ಲ್ಮಾನ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಿಪ್ಪು ಮುಸಲ್ಮಾನ ಪದಕ್ಕೆ ವಿರುದ್ಧ ವಾಗಿದ್ದರು. ಕುರಾನ್‍ನಲ್ಲಿ ಮುಸಲ್ಮಾನ್ ಎಂದರೆ ಮುಸಲ್ ಏ ಇಮಾನ್ ಅಂತಾ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿ ದ್ದಾರೆ. ನಿಯತ್ತಿಗೆ ಬೆಲೆ ಕೊಡದ, ಉಂಡ ಮನೆಗೆ ದ್ರೋಹ ಬಗೆದ ಟಿಪ್ಪು, ಕುರಾನ್‍ಗೆ ವಿರುದ್ಧವಾಗಿ ನಡೆದುಕೊಂಡಿದ್ದ ವ್ಯಕ್ತಿ. ಹೀಗಾಗಿ ಟಿಪ್ಪು ನಿಜವಾದ ಮುಸಲ್ಮಾ ನನೇ ಅಲ್ಲ, ಹೀಗಾಗಿ ಹಜ್ ಭವನಕ್ಕೆ ಟಿಪ್ಪು ಹೆಸರಿಡದಂತೆ ಅವರು ಆಗ್ರಹಿಸಿದ್ದಾರೆ.

Translate »