ಹಾಸನದಲ್ಲಿ ಹಾಡಹಗಲೇ  ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ
ಹಾಸನ

ಹಾಸನದಲ್ಲಿ ಹಾಡಹಗಲೇ  ನಡುರಸ್ತೆಯಲ್ಲಿ ವ್ಯಕ್ತಿ ಹತ್ಯೆ

June 24, 2018

ಹಾಸನ: ಹಾಡುಹಗಲೇ ವ್ಯಕ್ತಿಯೋರ್ವನನ್ನು ನಡುರಸ್ತೆಯ ದುಷ್ಕರ್ಮಿಗಳು ಹತ್ಯೆಗೈದಿರುವ ಘಟನೆ ನಗರದ ಸಮೀಪ ದಾಸರಕೊಪ್ಪಲಿನಲ್ಲಿ ಇಂದು ಸಂಜೆ ನಡೆದಿದೆ. ದಾಸರಕೊಪ್ಪಲಿನ ನಿವಾಸಿ ಸಂತೋಷ್(34) ಎಂಬಾತ ಹತ್ಯಗೀಡಾದವ.

ಇಂದು ಸಂಜೆ ದಾಸರಕೊಪ್ಪಲಿನಲ್ಲಿ ನಡು ರಸ್ತೆಯಲ್ಲಿ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಓಡಿಸಾಡಿಸಿ ಕೊಚ್ಚಿ ಕೊಲೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಂತಕರು ಪರಾರಿಯಾಗಿದ್ದಾರೆ. ಈ ಘಟನೆ ನೋಡಿದ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇತನನ್ನು ಯಾರು, ಯಾವ ಉದ್ದೇಶಕ್ಕಾಗಿ ಕೊಲೆಗೈದಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಹತ್ಯೆಯಾದವನು ವಿವಿಧ ಕಳ್ಳತನಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿದೆ.

Translate »