ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ
ಮಂಡ್ಯ

ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ

June 24, 2018

ಪಾಂಡವಪುರ:  ತಾಲೂಕು ಆಡಳಿತದ ವತಿಯಿಂದ ಆಚರಿಸುವ ಗಣ್ಯರ ಜಯಂತಿ ಹಾಗೂ ಪೂರ್ವಭಾವಿ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷೆ ಪೂರ್ಣಿಮಾ ಸೂಚಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದ ಅವರು, ಮಹಾನ್ ನಾಯಕರ ಜಯಂತಿಗಳಿಗೆ ತಾಲೂಕು ಮಟ್ಟದ ಅಧಿ ಕಾರಿಗಳು ಬಹುತೇಕ ಗೈರಾಗುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ತಹಶೀ ಲ್ದಾರ್ ಅವರು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಡಿ.ಹನುಮಂತ ರಾಯಪ್ಪ ಮಾತನಾಡಿ, ನಾಡಪ್ರಭು ಕೆಂಪೇ ಗೌಡರ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಜೂ.27ರಂದು ಪಟ್ಟಣದ ಮಿನಿವಿಧಾನಸೌಧದಲ್ಲಿ ಆಚರಿಸ ಲಾಗುವುದು. ಜಯಂತಿ ಆಚರಿಸುವ ಬಗ್ಗೆ ಸಾರ್ವಜನಿಕರೂ ಯಾವುದಾದರು ಸಲಹೆ ಸಹಕಾರ ನೀಡುವುದಾದರೆ ನೀಡುವಂತೆ ಮನವಿ ಮಾಡಿದರು.

ಸಿ.ಆರ್.ರಮೇಶ್ ಮಾತನಾಡಿ, ತಾಲೂಕಿ ನಲ್ಲಿ ಓಕ್ಕಲಿಗ ಸಮುದಾಯ ಬಹುಸಂಖ್ಯಾ ತರಿದ್ದಾರೆ. ಆದ್ದರಿಂದ ನಮ್ಮ ಸಮುದಾಯದ ನಾಡುಪ್ರಭು ಕೆಂಪೇಗೌಡರ ಜಯಂತ್ಯು ತ್ಸವವನ್ನು ತಾಲೂಕು ಆಡಳಿತ ಅದ್ಧೂರಿ ಯಾಗಿ ಆಚರಣೆ ಮಾಡಬೇಕೆಂದು ತಹಶೀಲ್ದಾರ್ ಡಿ.ಹನುಮಂತರಾಯಪ್ಪ ನವರಿಗೆ ಸಲಹೆ ನೀಡಿದರು.

ಬಳಿಕ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್, ನಮ್ಮಲ್ಲಿ ಎಲ್ಲರೂ ಒಂದೇ ಬಹುಸಂಖ್ಯಾತರು, ಅಲ್ಪಸಂಖ್ಯಾತರು ಬೇದಭಾವ ಬೇಡ. ಇದುವರೆಗೂ ತಾಲೂಕು ಆಡಳಿತ ಎಲ್ಲಾ ಸಮುದಾಯದ ನಾಯಕರ ಜಯಂತಿ ಗಳನ್ನು ಹೇಗೆ ಆಚರಿಸುತ್ತಿತ್ತೋ ಅದೇ ರೀತಿ ನಮ್ಮ ಸಮುದಾಯದ ನಾಯಕ ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಆಚ ರಣೆ ಮಾಡಲಿ. ತಾಲೂಕು ಆಡಳಿತವು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಲೂಕು ಆಡಳಿತ ಕಾರ್ಯಕ್ರಮ ರೂಪಿಸಲಿ. ಬೇಕಿದ್ದರೆ ಸಮು ದಾಯದ ಎಲ್ಲಾ ಮುಖಂಡರು ಸೇರಿ ಒಟ್ಟಾಗಿ ಕೆಂಪೇಗೌಡರ ದಿನಾಚರಣೆ ಆಚರಿಸೋಣ ಎಂದರು. ಇದಕ್ಕೆ ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು ಸಹ ಸಹಮತ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಪಂ ಸದಸ್ಯೆ ಅನು ಸೂಯ, ತಾಪಂ ಮಾಜಿ ಅಧ್ಯಕ್ಷ ರಾಧಮ್ಮ, ಸದಸ್ಯ ರಾದ ವಿ.ಎಸ್.ನಿಂಗೇ ಗೌಡ, ಗೋವಿಂದಯ್ಯ, ಶಿವಣ್ಣ, ಗಾಯಿತ್ರಿ, ಎಪಿಎಂಸಿ ಅಧ್ಯಕ್ಷ ಸುರೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರ ಮೇಶ್, ಬಿಜೆಪಿ ಮುಖಂಡ ಎಚ್.ಎನ್. ಮಂಜುನಾಥ್, ಎಸ್.ಎ.ಮಲ್ಲೇಶ್, ದಸಂಸ ಮುಖಂಡ ಅಂಕಯ್ಯ, ಮುಸ್ಲಿಂ ಸಮುದಾಯದ ಮುಖಂಡ ಮಹಮದ್ ಹನೀಫ್(ಮಾಮು), ಧನ್ಯಕುಮಾರ್, ಚಂದ್ರಶೇಖರಯ್ಯ, ಸೇರಿದಂತೆ ಹಲವರಿದ್ದರು.

Translate »