ದಾಖಲೆ ಇಲ್ಲದ 15 ಟನ್ ಅಕ್ಕಿ ವಶ
ಮಂಡ್ಯ

ದಾಖಲೆ ಇಲ್ಲದ 15 ಟನ್ ಅಕ್ಕಿ ವಶ

June 24, 2018

ಮಂಡ್ಯ:  ದಾಖಲೆ ಇಲ್ಲದೆ ಟೆಂಪೋದಲ್ಲಿ ಸಾಗಿಸುತ್ತಿದ್ದ ಸುಮಾರು 15ಟನ್ ಗೂ ಹೆಚ್ಚು ಅಕ್ಕಿಯನ್ನು ಮಳವಳ್ಳಿ ತಾಲೂಕಿನ ಕಿರಗಾವಲು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಇಂದು ನಡೆದಿದೆ.

ಕೆಎ 12, 0-1138 ಟೆಂಪೋದಲ್ಲಿ ಅಕ್ಕಿ ಮೂಟೆ ಗಳನ್ನು ಮೈಸೂರು ಕಡೆಗೆ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಐ ಶಿವಮಲ್ಲು ನೇತೃತ್ವದ ತಂಡ ವಾಹನ ತಡೆದು ತಪಾಸಣೆ ಮಾಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನ್ನಭಾಗ್ಯದ ಅಕ್ಕಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಕಿರುಗಾವಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Translate »