ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು: ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ
ಮಂಡ್ಯ

ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು: ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ

November 5, 2018

ಪಾಂಡವಪುರ:  ಶ್ರೀರಾಮ ಯೋಗೀಶ್ವರ ಮಠವು ತನ್ನದೇ ಆದ ಶರಣ ಸಂಸ್ಕೃತಿಯನ್ನು ಬಿಂಬಿಸುತ್ತಾ ಬಂದಿದೆ ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು ಎಂದು ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ ತಿಳಿಸಿದರು.

ತಾಲೂಕಿನ ಬೇಬಿಬೆಟ್ಟದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮಸ್ಥರು ಆಯೋಜಿಸಿದ ಲಿಂಗೈಕ್ಯ ಸದಾಶಿವನಂದ ಸ್ವಾಮೀಜಿ ಅವರ 4ನೇ ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠ ಪ್ರಬಲವಾದಾಗ ಶ್ರೀಮಠ ತಾನೇ ತಾನಾಗಿ ಬೆಳೆಯುತ್ತದೆ ಭಕ್ತರು ಮಠ ಬೆಳೆಯಲು ಆಧಾರ ಸ್ತಂಭಗಳಾಗಬೇಕೇ ವಿನಃ ಅಧಿಕಾರಸ್ಥರಾಗಬಾರದು ಎಂದರು.

ಮಠಮಂದಿರ ಹಾಗೂ ಗುರುಹಿರಿಯರ ಮಾರ್ಗದಶರ್ನನದಲ್ಲಿ ಯಾರು ನಡೆಯುತ್ತಾರೋ ಅವರ ಬದುಕು ಅಸನಾಗುತ್ತದೆ. ಮೊಬೈಲ್‍ನಂತಹ ಹಾವಳಿಯಿಂದ ದೂರವಿದ್ದು ಒಳ್ಳೆಯ ವಿಷಯಗಳ ಕಡೆ ಗಮನಹರಿಸಬೇಕು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎನ್.ಮಹ ದೇವಪ್ಪ ಮಾತನಾಡಿ, ಕ್ರಿಯಾಶಕ್ತಿ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಆಗ ಶರಣ ಸಂಸ್ಕೃತಿಗೆ ಅರ್ಥ ಬರುತ್ತದೆ ಮೌಢ್ಯ ಮತ್ತು ಕಂದಾಚಾರವನ್ನು ಯಾವಾ ಗಲೂ ಸಮಾಜಕ್ಕೆ ಮಾರಕ ಬಸವಣ್ಣ ನವರು ಮೌಢ್ಯ ಕಂದಾಚಾರವನ್ನು ವಿರೋಧಿಸುತ್ತಿದ್ದರು ಎಂದರು.

ಮಂಡ್ಯ ತಾಲೂಕು ಸಾಹಿತ್ಯ ಪರಿಷತ್ತು ಉಪನ್ಯಾಸಕ ಎಸ್.ಕೆ.ಮಹೇಶ್ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರಾದ ಮರಿಬಸವಯ್ಯ, ಗ್ರಾಪಂ ಸದಸ್ಯೆ ಸುಮಂಗಲಿ, ಮುಖಂಡರಾದ ಎಸ್.ಎ. ಮಲ್ಲೇಶ್, ಸಿದ್ದಪ್ಪ, ಸಿ.ಪುಟ್ಟಸ್ವಾಮಿ, ಶಿವಸ್ವಾಮಿ, ವಿಶ್ವೇಶ್, ಡಿ.ಬಿ.ಶಂಭಲಿಂಗಪ್ಪ ಜಗ ದೀಶ್ ಸೇರಿದಂತೆ ಭಕ್ತರು ಹಾಜರಿದ್ದರು.

Translate »