ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ
ಮಂಡ್ಯ

ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ

November 5, 2018

ಪಾಂಡವಪುರ: ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಇಲ್ಲವಾಗಿದ್ದು, ಐಟಿಬಿಟಿ ಕಂಪನಿಯಲ್ಲಿ ಉದ್ಯೋಗ ಪಡೆಯಲು ಕನ್ನಡ ಬಿಟ್ಟು ಇಂಗ್ಲಿಷ್ ಕಲಿಕೆಗೆ ಮುಂದಾಗುತ್ತಿರುವುದು ದುರಂತದ ಸಂಗತಿ ಎಂದು ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಾಮೇಗೌಡ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಸಾಹಿತ್ಯ ಪರಿಷತ್ ಹಾಗೂ ಪಟ್ಟಣದ ಶ್ರೀಕಲಾನಿಧಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಮೇಲೆ ನಿರಂತರ ವಾಗಿ ಅನ್ಯಭಾಷಿಗರಿಂದ ದಾಳಿ, ದಬ್ಬಾಳಿಕೆ ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಿ ಕನ್ನಡ ಭಾಷಿಗರಿಗಿಂತ ಅನ್ಯಭಾಷಿಗರೆ ಹೆಚ್ಚಾಗಿ ದ್ದಾರೆ. ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಇಲ್ಲವಾಗಿದೆ. ಐಟಿಬಿಟಿ ಕಂಪನಿಗಳಲ್ಲಿ ಕೇವಲ ಇಂಗ್ಲಿಷ್ ಭಾಷೆ ಕಲಿತಿದ್ದವರಿಗೆ ಮಾತ್ರ ಉದ್ಯೋಗ ದೊರೆ ಯುವುದರಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಕೆಗೆ ಮುಂದಾ ಗುತ್ತಿದ್ದಾರೆ ಎಂದರು. ಕನ್ನಡ ಭಾಷೆಯ ಉಳಿವಿಗೆ ರಾಜ್ಯ ಸರ್ಕಾರ ಪಾತ್ರ ಮಹತ್ವದಾ ಗಿದೆ. ಮಕ್ಕಳು ಕಡಿಮೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಮ ಸರಿಯಲ್ಲ. ಜೊತೆಗೆ ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಇಂಗ್ಲೀಷ್ ಶಾಲೆಗೆ ಮಕ್ಕಳನ್ನು ಸೇರಿಸುವುದನ್ನು ಬಿಟ್ಟು ಕನ್ನಡ ಭಾಷೆಯ ಶಾಲೆಗೆ ಸೇರಿಸುವ ಮೂಲಕ ನಮ್ಮ ಭಾಷೆಯ ರಕ್ಷಣೆ ಮಾಡಬೇಕು ಎಂದು ತಿಳಿಸಿದರು. ಕರವೇ ತಾಲೂಕು ಅಧ್ಯಕ್ಷ ಗೋವಿಂದರಾಜ್ ಮಾತನಾಡಿ, ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಭಾಷಿಗರ ಮೇಲೆ ನಿರಂ ತರವಾಗಿ ಶೋಷಣೆ, ದಬ್ಬಾಳಿಕೆ ನಡೆಯು ತ್ತಲೇ ಇದೆ. ಕರ್ನಾಟಕ ರಕ್ಷಣೆ ವೇದಿಕೆಯೂ ಸಹ ಕನ್ನಡ ಭಾಷೆ, ಭಾಷಿಗರ ಮೇಲೆನ ದಬ್ಬಾಳಿಕೆಯ ವಿರುದ್ದ ನಿರಂತರವಾಗಿ ಹೋರಾಟ ಮಾಡಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಂ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ, ಶ್ರೀಕಲಾನಿಧಿ ಸ್ಕೂಲ್ ಆಫ್ ಡ್ಯಾನ್ಸ್‍ನ ಶಿಕ್ಷಕಿ ಪದ್ಮಶ್ರೀ, ಶಿಕ್ಷಕ ಶಿವಣ್ಣ, ಮುಖಂಡರಾದ ಸೋಮಶೇಖರ, ಪ್ರಕಾಶ್ ಇತರರು ಹಾಜರಿದ್ದರು.

Translate »