ಬುದ್ಧಿಮಾಂದ್ಯ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಿರಿ ವಿಶ್ವ ಪಾಶ್ರ್ವವಾಯು ದಿನಾಚರಣೆಯಲ್ಲಿ ವೈದ್ಯಾಧಿಕಾರಿ ಡಾ.ವೆಂಕಟೇಶ್ ಸಲಹೆ
ಮಂಡ್ಯ

ಬುದ್ಧಿಮಾಂದ್ಯ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಿರಿ ವಿಶ್ವ ಪಾಶ್ರ್ವವಾಯು ದಿನಾಚರಣೆಯಲ್ಲಿ ವೈದ್ಯಾಧಿಕಾರಿ ಡಾ.ವೆಂಕಟೇಶ್ ಸಲಹೆ

November 5, 2018

ಭಾರತೀನಗರ: ಪಾಶ್ರ್ವವಾಯು ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಪ್ರೀತಿ, ವಿಶ್ವಾಸ ಮತ್ತು ಆತ್ಮ ಗೌರವದಿಂದ ಕಾಣ ಬೇಕು ಎಂದು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿ ಕಾರಿ ಡಾ.ವೆಂಕಟೇಶ್ ಸಲಹೆ ನೀಡಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ರಮಣ ಮಹರ್ಷಿ ಅಂಧರ ಪರಿಷತ್‍ನ ಸಮುದಾಯ ವಿಕಲ ಚೇತನರ ಪುನರ್ವಸತಿ ಯೋಜನೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ಭಾರತೀ ನಗರ ಸಂಯುಕ್ತಾಶ್ರಯದಲ್ಲಿ ನಡೆದ ಪಾಶ್ರ್ವ ವಾಯು ಮತ್ತು ಬುದ್ಧಿಮಾಂದ್ಯ ಮಕ್ಕಳ ಪೋಷಕರ ಕಾರ್ಯಾಗಾರ ಹಾಗೂ ವಿಶ್ವ ಪಾಶ್ರ್ವವಾಯು ವ್ಯಕ್ತಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಅನುಕಂಪ ತೋರಿ ಸುವ ಬದಲು ಹೆಚ್ಚು ಅವಕಾಶಗಳನ್ನು ನೀಡಬೇಕು. ಆ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಸಮುದಾಯ ಪುನರ್ವಸತಿ ಯೋಜನೆಯ ಸಂಯೋಜಕಿ ಕೆ.ಬಿ.ಜಯಂತಿ ಮಾತ ನಾಡಿ, ಪಾಶ್ರ್ವವಾಯು ಮತ್ತು ಬುದ್ಧಿ ಮಾಂದ್ಯತೆಗೆ ಕಾರಣವಾಗುವ ಅಂಶಗಳು ಮತ್ತು ಅದನ್ನು ಪ್ರಾರಂಭದ ಹಂತದಲ್ಲಿ ತಡೆಗಟ್ಟಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬುದ್ಧಿಮಾಂದ್ಯ ಮಕ್ಕಳ ಕುಟುಂಬವನ್ನು ಸಮಾಜ ತಿರಸ್ಕಾರ ಮನೋಭಾವದಿಂದ ಕಾಣುವುದನ್ನು ಬಿಡಬೇಕು. ಅವರ ಮೆದುಳಲ್ಲಿ ಕಲಿಕಾ ಸಾಮಥ್ರ್ಯದ ಜೀವಕೋಶಗಳು ದುರ್ಬಲವಾಗಿರುವುದರಿಂದ ಇತರರಂತೆ ಬೇಗ ಅರ್ಥ ಮಾಡಿಕೊಳ್ಳಲು ಮತ್ತು ಮಾತ ನಾಡಲು ಆಗುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಸೂಕ್ತ ತರಬೇತಿ ಬೇಕಾಗಿರುತ್ತದೆ ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಕೃಷ್ಣೇಗೌಡ ಮಾತ ನಾಡಿ, ವಿಕಲಚೇತನರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ರಮಣ ಮಹರ್ಷಿ ಅಂಧರ ಸಂಸ್ಥೆಯ ಶ್ರಮಿಸುತ್ತಿದೆ. ಅಂಗವಿಕಲತೆಯನ್ನು ಬೇಗ ಗುರುತಿಸಿದಾಗ ಹೆಚ್ಚಿನ ಬದಲಾವಣೆಯನ್ನು ತರಬಹುದು ಎಂದು ತಿಳಿಸಿದರು.

ದಾವಣಗೆರೆ ಸಿ.ಆರ್.ಸಿ ಕೇಂದ್ರ ನಿರ್ದೇ ಶಕ ಶೈಕ್ ಯಾಸೀನ್ ಷÀರೀಫ್, ವಿಕಲ ಚೇತನರ ಗುರಿಗಳು ಮತ್ತು ಧ್ಯೇಯೋದ್ದೇಶ ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮತ್ತು ಇದೇ ಸಂದರ್ಭದಲ್ಲಿ ಮೂವರು ಬುದ್ಧಿ ಮಾಂದ್ಯ ಮಕ್ಕಳಿಗೆ ತಲಾ 10,000 ರೂ. ಮೌಲ್ಯದ ಕಲಿಕಾ ಕಿಟ್‍ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಮಣ ಮಹರ್ಷಿ ಅಂಧರ ಪರಿಷತ್ತಿನ ವ್ಯವಸ್ಥಾಪಕ ಮಹಾಂ ತೇಶ ಹಿರೇಮಠ, ಆರೋಗ್ಯ ಕಿರಿಯ ಸಹಾ ಯಕ ಶಿವರಾಜು, ರಮಣ ಮಹರ್ಷಿ ಅಂಧರ ಸಂಸ್ಥೆಯ ಕಾರ್ಯದರ್ಶಿ ಎಂ.ಯು. ಜೋಸೆಫ್, ಸಮೃದ್ಧಿ ಯೋಜನೆಯ ಮುಖ್ಯಸ್ಥ ಡಾ.ವೈ.ಬಿ.ಜಯಂತ್‍ಕುಮಾರ್, ದಾವಣಗೆರೆ ಸಿಆರ್‍ಸಿ ಡಾ.ಸತ್ಯನಾರಾ ಯಣ್, ಹಾರೋನಹಳ್ಳಿ ರೋಟರಿ ಅಧ್ಯಕ್ಷ ಮಹಮದ್ ಏಜಸ್, ಎಐಎಫ್‍ಒ ಸಂಸ್ಥೆಯ ಡಾ.ಪಾರ್ಥಿಪ ರಾಮಸ್ವಾಮಿ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯರು, ಸಮುದಾಯ ಯೋಜನೆಯ ಕಾರ್ಯಕರ್ತ ರಾದ ಸೌಭಾಗ್ಯ, ಅನಿಲ್ ಹಾಜರಿದ್ದರು.

Translate »