ಪ್ರಕೃತಿ ವಿಕೋಪದ ಎಫೆಕ್ಟ್; ಜೇನು ಹುಳುಗಳಿಗೆ ವೈರಸ್
ಕೊಡಗು

ಪ್ರಕೃತಿ ವಿಕೋಪದ ಎಫೆಕ್ಟ್; ಜೇನು ಹುಳುಗಳಿಗೆ ವೈರಸ್

November 5, 2018

ಮಡಿಕೇರಿ- ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರಕೃತಿ ವಿಕೋಪ ಕೇವಲ ಮಾನವನ ಮೇಲೆ ಮಾತ್ರ ಪರಿಣಾಮ ಬೀರದೆ, ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜೇನು ಹುಳುಗಳ ಕುಟುಂಬಗಳ ಮೇಲೂ ತೀವ್ರ ಅಡ್ಡ ಪರಿಣಾಮವನ್ನು ಹುಟ್ಟು ಹಾಕಿದೆ.

ಅತಿವೃಷ್ಟಿಯಿಂದ ಉಂಟಾದ ನೈಸರ್ಗಿಕ ಆಹಾರದ ಕೊರತೆ ಹಾಗೂ ಹೆಚ್ಚಾದ ಚಳಿಯಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಇರುವ ಜೇನು ಕುಟುಂಬಗಳಲ್ಲಿ ‘ಥಾಯಿಶ್ಯಾಕ್ ಬ್ರೂಡ್’ ಎಂಬ ವೈರಸ್ ಕಾಯಿಲೆ ಉಲ್ಬಣಗೊಂಡಿದೆ. ಹೀಗಾಗಿ ಜಿಲ್ಲೆಯ ಜೇನು ಕೃಷಿಕರು ಆತಂಕದಲ್ಲಿದ್ದು, ವಿಶ್ವ ವಿಖ್ಯಾತಿ ಪಡೆದಿದ್ದ ಕೊಡಗಿನ ಜೇನಿಗೆ ಮತ್ತೆ ಕಂಟಕ ಎದುರಾಗಿದೆ.

ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಚೇರಂಗಾಲ, ಕೋರಂಗಾಲ, ಸಣ್ಣಪುಲಿ ಕೋಟು, ಅಯ್ಯಂಗೇರಿ, ಕೊಳಗದಾಳು ಮತ್ತಿತರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾ ಣದಲ್ಲಿ ಈ ವೈರಸ್ ರೋಗ ಕಾಣಿಸಿಕೊಂ ಡಿದ್ದು, ಶೇ.90ರಷ್ಟು ಜೇನು ಕುಟುಂಬಗಳು ನಶಿಸುವ ಹಂತ ತಲುಪಿವೆ. ಕೊಡಗು ಜಿಲ್ಲೆಯಲ್ಲಿ 1991ರಲ್ಲಿ ಶೇ.90ರಷ್ಟು ಜೇನು ಕುಟುಂಬಗಳಿಗೆ ಥಾಯಿಶ್ಯಾಕ್ ಬ್ರೂಡ್ ಎಂಬ ವೈರಸ್ ಕಾಯಿಲೆ ತಗುಲಿತ್ತು. ಇದೇ ವೇಳೆ ಜಿಲ್ಲೆಯಲ್ಲಿ ಸುಮಾರು 60 ಸಾವಿರ ಜೇನು ಕುಟುಂಬವಿತ್ತಲ್ಲದೆ, ಅಂದು ಸುಮಾರು 13 ಸಾವಿರ ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

ಜಿಲ್ಲೆಯಲ್ಲಿ ಉತ್ತುಂಗದ ಶಿಖರ ಏರಿದ್ದ ಜೇನು ಕೃಷಿಯಿಂದಾಗಿ ವರ್ಷಕ್ಕೆ 4 ಲಕ್ಷ ಕೆ.ಜಿ. ಜೇನು ಉತ್ಪತ್ತಿಯಾಗುತ್ತಿತ್ತು. ಮಾತ್ರ ವಲ್ಲದೆ ಜೇನು ಉತ್ಪಾದನೆಯಲ್ಲಿ ಕರ್ನಾ ಟಕದಲ್ಲಿಯೇ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿತ್ತು. ಕ್ರಮೇಣ ವೈರಸ್ ರೋಗ ಪ್ರಾಕೃತಿಕವಾಗಿಯೇ ಹತೋಟಿಗೆ ಬಂದ ಕಾರಣ ಮತ್ತೆ ಕೊಡಗಿನಲ್ಲಿ ಜೇನು ಕೃಷಿ ಪುನಶ್ಚೇತನದ ಹಾದಿ ಹಿಡಿಯಿತು. ಆದರೆ ಈ ಬಾರಿ ಹೆಚ್ಚಾಗಿ ಸುರಿದ ಮಳೆಯಿಂ ದಾಗಿ ಮತ್ತೆ ಕಾಯಿಲೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದೀಗ ಕೇವಲ 4 ರಿಂದ 5 ಸಾವಿರ ಜೇನು ಕುಟುಂಬಗಳು ಮಾತ್ರ ಉಳಿದುಕೊಂಡಿವೆ. ಪರಿಣಾಮ ಪರಿಶುದ್ಧ ಕೊಡಗಿನ ಜೇನು ಉತ್ಪಾದನೆಯಲ್ಲೂ ಗಣನೀಯ ಕುಸಿತ ಕಂಡಿದ್ದು, ವಾರ್ಷಿ ಕವಾಗಿ ಕೇವಲ 7 ಸಾವಿರ ಕೆ.ಜಿ. ಜೇನು ಮಾತ್ರ ಉತ್ಪತಿಯಾಗುತ್ತಿದೆ.

‘ಕಾಡಿಲ್ಲದೆ ಜೇನಿಲ್ಲ… ಜೇನಿಲ್ಲದೆ ಕಾಡಿಲ್ಲ’ ಎನ್ನುವ ಗಾದೆ ಮಾತು ಜಿಲ್ಲೆಯಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜೇನು ನೊಣಗಳ ಸಂತತಿಯೂ ಕಡಿಮೆಯಾಗುತ್ತಿದೆ. ಜೇನು ಇಲ್ಲದಿದ್ದರೆ ಎಲ್ಲಾ ಜೀವ ರಾಶಿಗಳು ಕೂಡ ನಶಿಸಿ ಹೋಗುವ ಸಾಧ್ಯತೆ ಇದೆ ಎಂದು ಕೆಲವು ಜೇನು ಕೃಷಿ ಕರು ಅಭಿಪ್ರಾಯ ಪಡುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಥಾಯಿ ಶ್ಯಾಕ್ ಬ್ರೂಡ್ ವೈರಸ್ ಕಾಯಿಲೆ ಮಧ್ಯಮಧ್ಯದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ರೋಗ ಉಲ್ಬಣಗೊಂಡಿದೆ ಎನ್ನಲಾಗು ತ್ತಿದೆ. ಕೃಷಿಕರು ಜೇನು ಕುಟುಂಬಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಸಕ್ಕರೆಯ ಕೃತಕ ದ್ರಾವಣವನ್ನು ಜೇನು ಹುಳುಗಳಿಗೆ ಆಹಾರವಾಗಿ ಬಳಸುತ್ತಿದ್ದರೂ ಕೂಡ ಯಾವುದೇ ಪ್ರಯೋಜನ ಕಂಡು ಬರು ತ್ತಿಲ್ಲ. ಇದರಿಂದ ಜೇನು ಕುಟುಂಬಗಳು ನಾಶವಾಗಿ ಹಲವಾರು ಕೃಷಿಕರು ಜೇನು ಕೃಷಿಯನ್ನೇ ತೊರೆಯುವಂತಹ ಪರಿಸ್ಥಿತಿ ತಲೆದೋರಿದೆ. ಜೇನು ಕೃಷಿಯನ್ನೇ ನಂಬಿ ಕೊಂಡು ಬದುಕು ಕಟ್ಟಿಕೊಂಡಿದ್ದ ಕೃಷಿ ಕರಿಗೆ ದಿಕ್ಕೇ ತೋಚದಾಗಿದೆ.

ಜೇನು ನೊಣಗಳು ತೀವ್ರ ಪ್ರಮಾಣ ದಲ್ಲಿ ಸಿಟ್ಟಿಗೇಳುವುದು, ಹಲವಾರು ಜೇನು ಕುಟುಂಬಗಳು ಒಂದೇ ಮರದ ಕೊಂಬೆಗಳಲ್ಲಿ ಅಲ್ಲಲ್ಲಿ ಬಾವಲಿಗಳಂತೆ ಕೂರು ವುದು, ರೋಗ ತಗುಲಿದ ತಕ್ಷಣ ಕೆಲಸ ಕಾರ್ಯಗಳನ್ನು ಕುಂಠಿತಗೊಳಿಸುತ್ತಿರುವ ಲಕ್ಷಣಗಳು ಜೇನು ಕುಟುಂಬಗಳಲ್ಲಿ ಕಂಡು ಬರುತ್ತಿದೆ. ಹಲವು ಜೇನು ಕುಟುಂಬಗಳು ಈಗಾಗಲೇ ನಶಿಸಿ ಹೋಗಿದ್ದು, ಕೃಷಿಕರು ನಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದ ಕೊಡ ಗಿನ ಪರಿ ಶುದ್ಧ ಜೇನು ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.

ಪ್ರಸಾದ್ ಸಂಪಿಗೆಕಟ್ಟೆ

Translate »