ಟಿಪ್ಪು ಜಯಂತಿ: ಶಾಂತಿ ಕಾಪಾಡಲು ಪೊಲೀಸರ ಮನವಿ
ಕೊಡಗು

ಟಿಪ್ಪು ಜಯಂತಿ: ಶಾಂತಿ ಕಾಪಾಡಲು ಪೊಲೀಸರ ಮನವಿ

November 5, 2018

ಸೋಮವಾರಪೇಟೆ:  ಟಿಪ್ಪು ಜಯಂತಿ ಕಾರ್ಯಕ್ರಮ ಆಚರಿಸುವ ಸಂದರ್ಭ ಯಾರೇ ಆದರೂ, ಕಾನೂನು ವಿರೋಧಿ ಚಟುವ ಟಿಕೆ ನಡೆಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ನಂಜುಂಡೇಗೌಡ ಎಚ್ಚರಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. 2016ರಿಂದ ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಸರ್ಕಾರದ ಅದೇಶ ವನ್ನು ಪಾಲಿಸುವುದು ನೌಕರರ ಕೆಲಸ.

ಆದುದರಿಂದ ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರ ಶಾಂತಿ ಭಂಗವಾಗುವ ಕೆಲಸ ಮಾಡದೆ, ಎಲ್ಲರೂ ಟಿಪ್ಪು ಜಯಂತಿ ಆಚರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಅಲ್ಲದೆ, ಸಭೆಯಲ್ಲಿ ಟಿಪ್ಪು ಜಯಂತಿ ಆಚರಿಸಲು ವಿರೋಧ ವ್ಯಕ್ತವಾದ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಇದೇ ಸಂದರ್ಭ ಟಿಪ್ಪು ಹೋರಾಟ ಸಮಿ ತಿಯ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಸಾಕಷ್ಟು ಹಾನಿಯಾಗಿದೆ. ಪ್ರಾಣ ಹಾನಿಯೊಂದಿಗೆ ಸಾಕಷ್ಟು ಜನರು ಮನೆ ಮಠಗಳನ್ನು ಕಳೆದುಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಬ್ಬ ಹರಿದಿನಗಳು ಹಾಗೂ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗಿದೆ. ಆದುದರಿಂದ ಟಿಪ್ಪು ಜಯಂತಿಯನ್ನು ಆಚರಿಸಬಾರದು ಎಂದು ಮನವಿ ಮಾಡಿದರು.

ಆಟೋ ಚಾಲಕರ ಸಂಘದ ಜಿಲ್ಲಾ ಸಮಿತಿ ಸದಸ್ಯ ಹಸನಬ್ಬ ಮಾತನಾಡಿ, ಈಗಾಗಲೇ ಜನರು ಮಳೆಯಿಂದ ತತ್ತರಿಸಿದ್ದಾರೆ. ಇದೀಗ ಟಿಪ್ಪು ಜಯಂತಿ ಆಚರಿ ಸಲು ಸರ್ಕಾರ ಮುಂದಾದಲ್ಲಿ ಮತ್ತೊಮ್ಮೆ ಜನರು ಪರಿತಪಿಸಬೇಕಾಗುತ್ತದೆ. ಆದುದರಿಂದ ಜಯಂತಿಯನ್ನು ಆಚರಿಸು ವುದು ಬೇಡ ಎಂದರು.

ಜಲಾಲಿಯ ಮಸೀದಿಯ ಕಾರ್ಯದರ್ಶಿ ರಫೀಕ್ ಮಾತನಾಡಿ, ಕೇವಲ ರಾಜಕೀಯದ ಲಾಭಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದರಿಂದ ಒಂದಾಗಿ ಬದುಕುತ್ತಿರುವ ಜಿಲ್ಲೆಯ ಜನರಲ್ಲಿ ಶಾಂತಿ ಕದಡಲು ಅವಕಾಶವಾಗುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸುವುದು ಬೇಡ ಎಂದರು. ಇದೇ ಸಂದರ್ಭ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಮಾತನಾಡಿ ದರು. ಸಭೆಯಲ್ಲಿ ಶನಿವಾರಸಂತೆ ಪಿಎಸ್‍ಐ ಎಚ್.ಎಂ. ಮರೀಸ್ವಾಮಿ ಸೇರಿ ದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »