ಕನ್ನಡ ರಾಜ್ಯೋತ್ಸವ, ಕಾವ್ಯ ಪುರಸ್ಕಾರ
ಮೈಸೂರು

ಕನ್ನಡ ರಾಜ್ಯೋತ್ಸವ, ಕಾವ್ಯ ಪುರಸ್ಕಾರ

November 18, 2019

ಮೈಸೂರು: ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್ ಮತ್ತು ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಸಂಸ್ಥೆಗಳು ಮೈಸೂರು ದಸರಾ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆ ಯಲ್ಲಿ ಐವರು ಹೊರನಾಡ ಕನ್ನಡಿಗರು ಹಾಗೂ ಇಬ್ಬರು ವಿಶೇಷಚೇತನ ಕವಿಗಳೂ ಸೇರಿದಂತೆ 18 ಕವಿಗಳು ರಾಜ್ಯಮಟ್ಟದ ದಸರಾ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಹೊರನಾಡ ಕನ್ನಡ ವಿಭಾಗ: ಸೀಮಾ ಕುಲಕರ್ಣಿ(ಮಲೇಶಿಯಾ), ಡಾ.ಆನಂದ ದೇಶಪಾಂಡೆ(ಲಂಡನ್), ಕಿಶೋರ್ ಎಕ್ಕಾರ್(ದುಬೈ), ಶಾರದಾ ವಿ.ಅಂಚನ(ಮುಂಬೈ), ಪ್ರಭಾಕರ ಶೆಟ್ಟಿ ಥಾಣೆ(ಮುಂಬೈ). ಕವಯತ್ರಿಯರ ವಿಭಾಗ: ಅಕ್ಷಯ ಆ.ಶೆಟ್ಟಿ (ಮಂಗಳೂರು), ಶಾಂತಾ ಕೆ.ಹೊಂಬಾಳ(ಧಾರವಾಡ), ಭಾಗ್ಯ ರೇಖಾ ದೇಶಪಾಂಡೆ (ಹುಬ್ಬಳ್ಳಿ), ಹೆಚ್.ಅರ್ಚನಾ (ಬೆಂಗಳೂರು), ಎನ್.ಆರ್.ರೂಪಶ್ರೀ(ಮೈಸೂರು). ಕವಿಗಳ ವಿಭಾಗ: ನಾಗರಾಜು ಹಂಪ ಸಾಗರ(ಬೆಳಗಾವಿ), ಚಿದಾನಂದ ಹ.ಭಜಂತ್ರಿ(ಧಾರವಾಡ), ಡಾ.ಸೋಮಲಿಂಗಪ್ಪ ಚಿಕ್ಕಳ್ಳ ನವರ್(ಹಾವೇರಿ), ಕೆ.ವಿ.ಲಕ್ಷ್ಮಣ ಮೂರ್ತಿ(ಬೆಂಗಳೂರು), ಎಂ.ಡಿ.ಅಯ್ಯಪ್ಪ (ಮಂಡ್ಯ). ಹಿರಿಯ ಕವಿಗಳ ವಿಭಾಗ: ವೈ.ಎಂ.ರಘುನಂದನ್ (ಮೈಸೂರು). ವಿಶೇಷಚೇತನ ಕವಿಗಳ ವಿಭಾಗ: ಎಂ.ಪಿ.ಅನುಸೂಯ(ದಾವಣಗೆರೆ), ಹನುಮಂತರಾವ್ ಘಂಟೇಕರ್(ಗುಲ್ಬರ್ಗಾ).

ದಿ.ಬಿ.ಆರ್.ಉಲ್ಲಾಸ್ ನೆನಪಿನಲ್ಲಿ ನೀಡುತ್ತಿರುವ ರಾಜ್ಯಮಟ್ಟದ ಕಾವ್ಯ ಪುರಸ್ಕಾರಕ್ಕೆ ಕು.ಎಂ.ಡಿ.ಧನ್ಯತಾ (ನಂಜನಗೂಡು) ಇವರು ಆಯ್ಕೆಯಾಗಿದ್ದಾರೆ. ನ.24ರಂದು ನಡೆಯಲಿರುವ ರಾಜ್ಯಮಟ್ಟದ ದಸರಾ ಹಾಗೂ ಕನ್ನಡ ರಾಜ್ಯೋತ್ಸವದ ಸಂಯುಕ್ತ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಭೇರ್ಯ ರಾಮಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »