ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಚಾಮರಾಜನಗರ

ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

November 29, 2018

ಗುಂಡ್ಲುಪೇಟೆ:  ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಪಟ್ಟ ಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ರಾಜ್ಯೋತ್ಸವದ ಅಂಗವಾಗಿ ಪ್ರವಾಸಿ ಮಂದಿರದ ಎದುರಿನ ಗಾಂಧಿ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಯ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾ ರೋಹಣ ನೆರವೇರಿಸಲಾಯಿತು.

ನಂತರ ಚಾಮರಾಜನಗರ ರಸ್ತೆಯಲ್ಲಿ ರುವ ವೀರ ಯೋಧ ಶಿವಾನಂದ ವೃತ್ತ ದಿಂದ ಬೆಳ್ಳಿ ರಥದಲ್ಲಿ ಕನ್ನಡಾಂಬೆಯ ಭಾವಚಿತ್ರವನ್ನಿರಿಸಿ ನಾಡಧ್ವಜದಿಂದ ಅಲಂಕೃತ ಆಟೋಗಳು, ಜನಪದ ಕಲಾ ತಂಡಗಳು, ಮಂಗಳವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ನಾಡು ನುಡಿಗಾಗಿ ಹೋರಾಟ: ನಂತರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಬಯಲು ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಘಟ ಕದ ಅಧ್ಯಕ್ಷ ಪ್ರವೀಣ್ ಮಾತನಾಡಿ, ಹಿಂದಿನಿಂದಲೂ ಕರ್ನಾಟಕ ರಕ್ಷಣಾ ವೇದಿಕೆಯು ನಾಡು ನುಡಿ, ನೆಲ ಜಲ ರಕ್ಷಣೆಗೆ ಹೋರಾಟ ನಡೆಸುತ್ತಿದೆ. ಕನ್ನಡ ನಿತ್ಯೋತ್ಸವವಾದರೇ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾ ನಿಸ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರವೇ ಚಾಮರಾ ಜನಗರ ಜಿಲ್ಲಾಧ್ಯಕ್ಷ ನವೀನ್, ತಾಲೂಕು ಅಧ್ಯಕ್ಷ ಸುರೇಶ್ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಪದಾಧಿಕಾರಿ ಗಳಾದ ಜಗದೀಶ್, ಶ್ರೀನಿವಾಸನಾಯಕ್, ರಮೇಶ್ ನಾಯಕ್, ದೈಹಿಕ ಶಿಕ್ಷಕ ಮಲ್ಲ ನಾಯಕ್ ಸೇರಿದಂತೆ ಪಟ್ಟಣ ಘಟಕ, ಹೋಬಳಿ ಮತ್ತು ಗ್ರಾಮ ಘಟಕಗಳ ಪದಾ ಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

Translate »