ಮೈಸೂರು: ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿದರೆಂಬ ಆರೋಪದಡಿ ಪತಿ ಸೇರಿ ಐವರ ವಿರುದ್ಧ ಮೈಸೂರಿನ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಶ್ರೀರಾಂಪುರ 2ನೇ ಹಂತ ನಿವಾಸಿಗಳಾದ ಆರ್. ಮಂಜುನಾಥಪ್ರಸಾದ್, ಸಾವಿತ್ರಮ್ಮ, ರಾಮಸ್ವಾಮಿ, ಆರ್. ಪುಟ್ಟರಾಜು ಹಾಗೂ ಆರ್. ಸತ್ಯಮೂರ್ತಿ ಎಂಬುವರೇ ಆರೋಪ ಎದುರಿಸುತ್ತಿರುವವರು. ಮೈಸೂರಿನ ಜೆಪಿ ನಗರದ ಇಂಡಸ್ಟ್ರಿಯಲ್ ಸಬರ್ಬ್ನ ಒಷನಸ್ ರಾಯಲ್ ಅಪಾರ್ಟ್ಮೆಂಟ್ನ ನಿವಾಸಿ ಲೇಟ್ ಹೆಚ್.ಎಸ್. ಪಂಚಾಕ್ಷರಿ ಅವರ ಪುತ್ರಿ ಎಸ್.ಪಿ. ಸ್ವಾತಿ ಅವರು, ನವೆಂಬರ್ 10ರಂದು ನೀಡಿದ ದೂರಿನನ್ವಯ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪತಿ ಮಂಜುನಾಥಪ್ರಸಾದ್ ಸೇರಿ ಐವರ ವಿರುದ್ಧ ಮಹಿಳಾ ಠಾಣೆ ಪೊಲೀಸರು ಪ್ರಕರಣ (ಕ್ರೈಂ ನಂ. 77/2018) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
