ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆ ಬಲಿ
ಮೈಸೂರು

ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆ ಬಲಿ

May 28, 2018

ಮೈಸೂರು: ವರದಕ್ಷಿಣೆ ಪಿಡುಗಿಗೆ ನವ ವಿವಾಹಿತೆಯೊಬ್ಬರು ಬಲಿಯಾಗಿದ್ದು, 7 ತಿಂಗಳ ಹಿಂದಷ್ಟೆ ಹಸೆಮಣೆ ಏರಿದ್ದ ಯುವತಿಯನ್ನು ಆತನ ಪತಿ ಮತ್ತು ಪತಿಯ ಪೋಷಕರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

ಮೈಸೂರಿನ ಕೆಸರೆಯ ಉಸ್ಮಾನಿಯಾ ಬ್ಲಾಕ್ ನಿವಾಸಿ ಸೈಯ್ಯದ್ ರುಬಾನ್ ಎಂಬುವರ ಪತ್ನಿ ಆಯೀಷಾ (19) ಎಂಬುವರೇ ಸಾವಿಗೀಡಾದವರಾಗಿದ್ದಾರೆ. ಆಂಬುಲೆನ್ಸ್ ಚಾಲಕನಾಗಿರುವ ಸೈಯ್ಯದ್ ರುಬಾನ್ ಕಳೆದ 7 ತಿಂಗಳ ಹಿಂದಷ್ಟೇ ಆಯೀಷಾ ಎಂಬುವರನ್ನು ವಿವಾಹವಾಗಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮೇ 23ರಂದು ಆಯೀಷಾಳ ಮೇಲೆ ಆತನ ಗಂಡ ಸೈಯ್ಯದ್ ರುಬಾನ್ ಹಾಗೂ ಅತ್ತೆ-ಮಾವ ಸೇರಿದಂತೆ ಇನ್ನಿತರರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಯೀಷಾಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮೃತರ ಪೋಷಕರು ನೀಡಿರುವ ದೂರಿನ ಮೇರೆಗೆ ಎನ್.ಆರ್.ಠಾಣೆಯ ಪೊಲೀಸರು ಸಯ್ಯದ್ ರುಬಾನ್, ಆತನ ತಂದೆ ಹಾಗೂ ಇಬ್ಬರು ಸಹೋದರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Translate »