ಮಹಿಳೆ ಆತ್ಮಹತ್ಯೆ
ಮೈಸೂರು

ಮಹಿಳೆ ಆತ್ಮಹತ್ಯೆ

May 28, 2018

ಮೈಸೂರು: ಮಕ್ಕಳಾಗಲಿಲ್ಲ ಎಂದು ಕೊರಗುತ್ತಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿಯ ಕೆಹೆಚ್‍ಬಿ ಕಾಲೋನಿಯಲ್ಲಿ ನಡೆದಿದೆ.

ಹೂಟಗಳ್ಳಿ ಕೆಹೆಚ್‍ಬಿ ಕಾಲೋನಿ ನಿವಾಸಿ ನರೇಂದ್ರ ಎಂಬುವರ ಪತ್ನಿ ಲತಾ (52) ಎಂಬುವರೇ ಮಕ್ಕಳಿಲ್ಲದ ಕೊರಗಿನಿಂದ ಸಾವಿಗೆ ಶರಣಾದವರಾಗಿದ್ದಾರೆ. ಕೆಆರ್‍ಎಸ್ ರಸ್ತೆಯಲ್ಲಿರುವ

ಕಾರ್ಖಾನೆಯೊಂದರ ನೌಕರನಾಗಿರುವ ನರೇಂದ್ರ ಅವರು 20 ವರ್ಷದ ಹಿಂದೆ ಲತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮನ ನೊಂದಿದ್ದರು ಎನ್ನಲಾಗಿದೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಲತಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »