ಹಲ್ಲೆ ಆರೋಪ: ದೂರು ದಾಖಲು
ಮೈಸೂರು

ಹಲ್ಲೆ ಆರೋಪ: ದೂರು ದಾಖಲು

May 28, 2018

ಹೆಚ್.ಡಿ.ಕೋಟೆ:  ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡ ಮತ್ತು ಅವರ ಸಹೋದರ ಗ್ರಾಮ ಪಂಚಾಯತಿ ಸದಸ್ಯ ರಾಜು ಹಲ್ಲೆ ನಡೆಸಿದ್ದಾರೆ ಎಂದು ಈಶ್ವರ್ ಗೌಡ ಮತ್ತು ವೆಂಕಟೇಗೌಡ ಪೆÇಲೀಸ್‍ರಿಗೆ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಗಿರಿಗೌಡ ಮತ್ತು ರಾಜು ದೂರು ನೀಡಿದ್ದಾರೆ.
ಘಟನೆ ವಿವರ: ತಾಲೂಕಿನ ಹೆಬ್ಬಾಳ ಜಲಾಶಯ ದಲ್ಲಿ ಟ್ರಾಕ್ಟರ್‍ನಲ್ಲಿ ಮಣ್ಣು ತುಂಬುತ್ತಿದ್ದ ವಿಷಯಕ್ಕಾಗಿ ಗಲಾಟೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಚಿಕ್ಕಣ್ಣರವರು ಗಾಯಾಳುಗಳನ್ನು ಮಾತನಾಡಿಸಿದರು.

ನಂತರ ಪೆÇಲೀಸರೊಂದಿಗೆ ಮಾತನಾಡಿ, ಹಲ್ಲೆ ನಡೆಸಿದ ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲ್ಲೆ ನಡೆಸಿರುವ ಅವರು ರೌಡಿ ಲಿಸ್ಟ್‍ನಲ್ಲಿದ್ದು ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಕೊಲೆ ಬೆದರಿಕೆಯನ್ನು ಹಾಕಿದ್ದರಿಂದ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಮಾಜಿ ಶಾಸಕ ಚಿಕ್ಕಣ್ಣ ತಿಳಿಸಿದರು.

Translate »