ಮೈಸೂರು, ಮೈಸೂರು ಗ್ರಾಮಾಂತರ

ಜಮೀನು ವಿವಾದ: ತಮ್ಮನಿಂದ ಅಣ್ಣನ ಕೊಲೆ

June 21, 2020

ಹೆಚ್.ಡಿ.ಕೋಟೆ,ಜೂ.20- ಜಮೀನು ವಿವಾದ ತಾರಕ್ಕೇರಿ ತಮ್ಮನಿಂದ ಅಣ್ಣ ಹತ್ಯೆಯಾದ ಘಟನೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಗಂಗಾಧರ ಎಂಬಾತನೇ ತನ್ನ ಅಣ್ಣ ಮಹದೇವೇಗೌಡ (53) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮೃತನ ಮಗ ಶ್ರೀಕಾಂತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಮಕ್ಕಳಿರುವ ಈ ಕುಟುಂಬಕ್ಕೆ ಸುಮಾರು 150ಕ್ಕೂ ಹೆಚ್ಚು ಎಕರೆ ಜಮೀನಿದ್ದರೂ ಕೇವಲ 6 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆದು, ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು ಎಂದು ಹೇಳಲಾಗಿದೆ. ಅಣ್ಣ ಮಹ ದೇವೇಗೌಡರ ಹೆಸರಿನಲ್ಲಿದ್ದ ಆರು ಎಕರೆ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ವಿವರ: ಶನಿವಾರ ಜಮೀನಿನಲ್ಲಿ ಮಹದೇವೇಗೌಡರು ಮತ್ತು ಅವರ ಮಗ ಶ್ರೀಕಾಂತ್ ಜಮೀನಿನಹೆಚ್.ಡಿ.ಕೋಟೆ,ಜೂ.20- ಜಮೀನು ವಿವಾದ ತಾರಕ್ಕೇರಿ ತಮ್ಮನಿಂದ ಅಣ್ಣ ಹತ್ಯೆಯಾದ ಘಲ್ಲಿ ಉಳುಮೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಜಮೀನಿಗೆ ಬಂದ ಗಂಗಾಧರ ಉಳುಮೆ ಮಾಡದಂತೆ ಅಣ್ಣನಿಗೆ ಅಡ್ಡಿಪಡಿಸಿದ್ದಾನೆ. ಈ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆಗೆ ತಿರುಗಿದೆ. ಆಗ ಗಂಗಾಧರ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಅಣ್ಣ ಮತ್ತು ಆತನ ಮಗನಿಗೆ ಇರಿದಿದ್ದಾನೆ. ಅಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಗ ಶ್ರೀಕಾಂತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಲಾಟೆಯನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನವರು ಕೊಲೆ ಮಾಡಿದ ಗಂಗಾಧರನನ್ನು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಲ್ಲಿ ಆರೋಪಿ ಗಂಗಾಧರನಿಗೂ ತೀವ್ರ ಗಾಯಗಳಾಗಿದ್ದರಿಂದ ಪೆÇಲೀಸರು ವಶಕ್ಕೆ ಪಡೆದ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಹೆಚ್.ಡಿ.ಕೋಟೆ ಪೆÇಲೀಸ್ ಠಾಣೆಯ ಪಿಎಸ್‍ಐ ಎಂ.ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Translate »