ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ
ಮೈಸೂರು

ಅರೆಕಾಲಿಕ ಉಪನ್ಯಾಸಕರ ಮತದಾನದ ಹಕ್ಕು ಮೊಟಕು ಡಾ. ಸುಧಾಕರ ಹೊಸಳ್ಳಿ ವಿಷಾದ

May 28, 2018

ಮೈಸೂರು: ವಿಧಾನ ಪರಿಷತ್‍ಗೆ ಜೂ.8ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಅರೆಕಾಲಿಕ ಉಪನ್ಯಾಸಕರಿಂದ ತೆಗೆದು ಹಾಕಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ವರ್ತನೆಯಾಗಿದೆ ಎಂದು ರಾಜ್ಯ ಶೈಕ್ಷಣ ಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‍ಗೆ ಜೂ.8ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯಲಿದ್ದು, ಈ ಬಾರಿ ಅರೆಕಾಲಿಕ ಉಪನ್ಯಾಸಕರಿಗೆ ಮತದಾನ ಮಾಡುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಆ ಮೂಲಕ ಅತಿಥಿ ಉಪನ್ಯಾಸಕರ ವಿಷಯದಲ್ಲಿ ತಾರತಮ್ಯ ನೀತಿ ಮುಂದುವರೆಸಲಾಗಿದೆ. ಮತದಾನ ಮಾಡುವುದಕ್ಕೆ ಪೂರ್ಣ ಕಾಲಿಕ ಶಿಕ್ಷಕನಾಗಿರಬೇಕೆಂಬ ನಿಯಮ ರೂಪಿಸಿ ಅರೆಕಾಲಿಕ ಶಿಕ್ಷಕರಿಗೆ ಮತದಾನದ ಹಕ್ಕನ್ನು ತೆಗೆದು ಹಾಕಿರುವುದು ತಲೆ ತಗ್ಗಿಸುವ ಸಂಗತಿಯಾಗಿದೆ ಎಂದರು.

ಕೂಡಲೇ ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆಗೆ ಅರೆಕಾಲಿಕ ಉಪನ್ಯಾಸಕರಿಗೆ ಮತದಾನ ಮಾಡಲು ಅವಕಾಶ ನೀಡಬೇಕು. ಈಗಾಗಲೇ ಸಮಿತಿಯ ವತಿಯಿಂದ ಮತದಾನದ ಹಕ್ಕಿಗಾಗಿ ಹೋರಾಟ ಆರಂಭಿಸಿರುವುದಾಗಿ ತಿಳಿಸಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಶೈಕ್ಷಣ ಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ಪದಾಧಿಕಾರಿಗಳಾದ ಡಾ. ಹನಿಯೂರು ಚಂದ್ರೇಗೌಡ, ಶಿವಪ್ರಕಾಶ್, ಹೇಮಾ ಇದ್ದರು.

Translate »