ಸೋಮವಾರಪೇಟೆ: ಗಂಡನ ವರದಕ್ಷಿಣೆ ಕಿರುಕುಳದಿಂದ ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿ ರುವ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸಂಭವಿಸಿದೆ.
ಕಾಗಡಿಕಟ್ಟೆ ಗ್ರಾಮದ ಯೂಸೂಫ್ ಎಂಬುವರ ಮಗಳು ರಂಶಿನಾ(22) ಆತ್ಮ ಹತ್ಯೆ ಮಾಡಿಕೊಂಡವರು. ಹೊಸತೋಟ ಗ್ರಾಮದ ಮಹಮ್ಮದ್ ಎಂಬುವರ ಪುತ್ರ ರಶೀದ್(28) ಆರೋಪಿಯಾಗಿದ್ದಾನೆ.
2015ರಲ್ಲಿ ರಂಶಿನಾ ಅವರನ್ನು ರಶೀದ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಕುಟುಂಬದಲ್ಲಿ ಒಡಕು ಮೂಡಿದ್ದು, 2016ರ ಮಾರ್ಚ್‍ನಲ್ಲಿ ಕಾಗಡಿಕಟ್ಟೆ ಹಾಗೂ ಹೊಸತೋಟ ಜಮಾಅತ್‍ನಲ್ಲಿ ಪ್ರಕರಣವನ್ನು ಸರಿಪಡಿಲಾಗಿತ್ತು. ನಂತರ ಪತಿಯ ಕಿರುಕುಳ ಜಾಸ್ತಿಯಾಗಿ, ಪ್ರಕರಣ ಪಟ್ಟಣದ ಠಾಣೆಯಲ್ಲಿ ತೀರ್ಮಾನವಾಗಿ, ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಆರೋಪಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಎನ್ನಲಾಗಿದೆ.
ಗಂಡನ ಮನೆಯಲ್ಲಿ ವಾಸವಿದ್ದ ರಂಶಿನಾ ಳಿಗೆ, ರಶೀದ್ ವರದಕ್ಷಿಣೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದ ರಂಶಿನಾ ಶನಿವಾರ ಸಂಜೆ, ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ಮೃತೆಯ ಸಹೋ ದರ ಶರೀಫ್ ಸೋಮವಾರಪೇಟೆ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ವಿಷ ಸೇವಿಸಿದ ನಂತರ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ರಂಶಿನಾಳನ್ನು ದಾಖಲಿಸಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಹಸೀಲ್ದಾರ್ ವಿರೇಂದ್ರ ಬಾಡಕರ್ ಭೇಟಿ ನೀಡಿ ಪರಿ ಶೀಲನೆ ನಡೆಸಿದ್ದಾರೆ. ಮೃತೆ ಒಂದು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ.