ಪಾತ್ರೆ ವ್ಯಾಪಾರಿಗಳ ಸಂಘದಿಂದ  ವಿಜೃಂಭಣೆಯ ಕನ್ನಡ ರಾಜ್ಯೋತ್ಸವ
ಮೈಸೂರು

ಪಾತ್ರೆ ವ್ಯಾಪಾರಿಗಳ ಸಂಘದಿಂದ  ವಿಜೃಂಭಣೆಯ ಕನ್ನಡ ರಾಜ್ಯೋತ್ಸವ

December 3, 2018

ಮೈಸೂರು: ಕನ್ನಡ ನಾಡು, ನುಡಿ, ಸಂಸ್ಕøತಿಯ ಕೇಂದ್ರವಾದ ಮೈಸೂರಿನಲ್ಲಿ ಎಲ್ಲಾ ಭಾಷಿಕರನ್ನೂ ಹೊಂದಿ ರುವ ಮೈಸೂರು ನಗರ ಪಾತ್ರೆ ವ್ಯಾಪಾರಿ ಗಳ ಸಂಘದ ವತಿಯಿಂದ ಭಾನುವಾರ ಮೈಸೂರಿನ ಅಶೋಕ ರಸ್ತೆ ಕ್ರಾಸ್‍ನ ರವೆ ಬೀದಿಯಲ್ಲಿ 63ನೇ ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮೈಸೂರಿನ 150ಕ್ಕೂ ಹೆಚ್ಚು ಪಾತ್ರೆ ವ್ಯಾಪಾರಿಗಳನ್ನು ಹೊಂದಿರುವ ಪಾತ್ರೆ ವ್ಯಾಪಾರಿಗಳ ಸಂಘದಲ್ಲಿ ಕನ್ನಡ, ತಮಿಳು, ಉರ್ದು, ಮರಾಠಿ, ಹಿಂದಿ, ರಾಜಾಸ್ತಾನಿ ಇನ್ನಿತರ ಭಾಷಿಕರು ಇದ್ದಾರೆ. ಅವರೆ ಲ್ಲರೂ ಹೇಳುವ ವಾಕ್ಯ ಒಂದೇ `ನಾವೆ ಲ್ಲರೂ ಕನ್ನಡಿಗರು’. ಅವರೆಲ್ಲರೂ ಕೂಡಿ ಇಂದು ಸಂಘದ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

ರವೆ ಬೀದಿಯಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್ ಕನ್ನಡ ಧ್ವಜಾರೋಹಣ ನೆರ ವೇರಿಸಿದರು. ಬಳಿಕ ಮಾತನಾಡಿದ ಅವರು, ಬೇರೆ ಬೇರೆ ಭಾಷಿಕ ಪಾತ್ರೆ ವ್ಯಾಪಾರಿಗಳು ಒಗ್ಗಟ್ಟಿನಿಂದ ಕನ್ನಡ ರಾಜ್ಯೋತ್ಸವ ಆಚರಿಸು ತ್ತಿರುವುದು ಸಂತೋಷದ ವಿಚಾರ. ಕರ್ನಾಟಕ ದಲ್ಲಿ ವಾಸಿಸುವವರೆಲ್ಲರೂ ಕನ್ನಡಿಗರೇ ಹೌದು. ಕನ್ನಡ ನಾಡು, ನುಡಿಗೆ ನಾವು ಗೌರವ ಸಲ್ಲಿಸಿದರೆ ಅದು ತನ್ನಂತಾನೇ ಅಭಿವೃದ್ದಿ ಹೊಂದುತ್ತಾ ಸಾಗುತ್ತದೆ ಎಂದು ಅಭಿ ಪ್ರಾಯಪಟ್ಟರು. ಪಾಲಿಕೆ ಸದಸ್ಯರಾದ ಎಂ.ಡಿ.ನಾಗರಾಜ್, ಎಂ.ಸತೀಶ್, ಪಾತ್ರೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ. ತುಕಾರಾಂ, ಉಪಾಧ್ಯಕ್ಷ ಬಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುಸ್ತಫಾ, ಜಂಟಿ ಕಾರ್ಯದರ್ಶಿ ಸಿ.ಕೀರ್ತಿ ಜೈನ್, ಖಜಾಂಚಿ ಆರ್.ಷಣ್ಮುಗಂ, ಕರ್ಣನ್, ಎಸ್. ಕೆ.ಸಾಬ್‍ಜಾನ್ ಷರೀಫ್, ಎಸ್.ಲೋಕೇಶ್ ರಾವ್, ಭರತ್ ಜೈನ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »