ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶದ ಪ್ರಚಾರ ಬೈಕ್ ರ್ಯಾಲಿ
ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶದ ಪ್ರಚಾರ ಬೈಕ್ ರ್ಯಾಲಿ

December 3, 2018

ಮೈಸೂರು:  ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶ ಆಯೋಜಿಸಿ ರುವುದರ ಅಂಗವಾಗಿ ಭಾನುವಾರ ಮೈಸೂರು ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ದಲ್ಲಿ ಅಂದು ಸಮಾವೇಶ ನಡೆಯಲಿದೆ. ಇದರ ಪ್ರಚಾರಕ್ಕಾಗಿ ನಡೆಸಿದ ಬೈಕ್ ರ್ಯಾಲಿಗೆ ವಿಜಯನಗರದ ಶ್ರೀ ಯೋಗಾನರಸಿಂಹ ದೇವಸ್ಥಾನದ ಎದುರು ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಿದರು.

ಈ ವೇಳೆ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು. ಸಮುದಾಯದ ಯುವ ಕರು, ಯುವತಿಯರು ಹಾಗೂ ಹಿರಿಯರು ಸೇರಿದಂತೆ ನೂರಾರು ಮಂದಿ ಬೈಕ್‍ನಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ವಿಜಯನಗ ರದ ಶ್ರೀ ಯೋಗಾನರಸಿಂಹಸ್ವಾಮಿ ದೇವ ಸ್ಥಾನದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿಯು, ಕೆಡಿ ರಸ್ತೆ, ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಆಂಡಾಳ್ ಮಂದಿರ, ಯತಿರಾಜ ಮಠದ ರಸ್ತೆಗಳಲ್ಲಿ ಸಂಚರಿಸಿತು. ಅಲ್ಲದೆ, ಕೃಷ್ಣ ಧಾಮ, ಕೃಷ್ಣಮೂರ್ತಿಪುರಂ ವ್ಯಾಸರಾಜ ಮಠ, ರಾಮಮಂದಿರ, ರಾಮಸ್ವಾಮಿ ವೃತ್ತ, ಬಂಡಾರ ಕೇರಿ ಮಠ, ರಾಘವೇಂದ್ರ ಸ್ವಾಮಿ ಮಠ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಪರಕಾಲ ಮಠ, ಶಂಕರಮಠ, ಉತ್ತರಾಧಿ ಮಠ, ರಾಮಾನುಜ ರಸ್ತೆ, ಚಾಮುಂಡಿ ಪುರಂ ವೃತ್ತ, ವಿದ್ಯಾರಣ್ಯಪುರಂ ಅವನಿ ಶಂಕರ ಮಠದ ರಸ್ತೆಗಳಲ್ಲಿ ಸಂಚರಿಸಿತು. ಅಂತಿಮವಾಗಿ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ತಲುಪಿ ಅಂತ್ಯಗೊಂಡಿತು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಸನಾತನ ವೈದಿಕ ಧರ್ಮ ಉಳಿ ಯಲು ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಸಂಘ ಟಿತರಾಗಬೇಕು. ಸಮಾವೇಶದಲ್ಲಿ ಜನಪ್ರತಿ ನಿಧಿಗಳು ಸೇರಿದಂತೆ ಸಮುದಾಯ ಮಠಾ ಧಿಪತಿಗಳು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಆರ್ಥಿಕವಾಗಿ ಹಿಂದುಳಿದ ವಿಪ್ರ ಕುಟುಂಬ ಗಳಿಗೆ ಸರ್ಕಾರದ ನೆರವು ದೊರೆಯಲು ಯೋಜನೆ ರೂಪಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿ ಸಲಾಗುವುದು ಎಂದು ತಿಳಿಸಿದರು.

ಮಾಜಿ ಮೇಯರ್ ಆರ್.ಜೆ.ನರಸಿಂಹ ಅಯ್ಯಂಗಾರ್, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಸಾಹಿತಿ ಡಿ.ಎನ್.ಕೃಷ್ಣ ಮೂರ್ತಿ, ಬೈಕ್ ರ್ಯಾಲಿ ಸಂಚಾಲಕ ಅಜಯ್‍ಶಾಸ್ತ್ರಿ, ಸಮುದಾಯದ ಮುಖಂಡ ರಾದ ವಿಕ್ರಂ ಅಯ್ಯಂಗಾರ್, ಪೆÇೀಟೋ ಗಣೇಶ್, ಜಯಶ್ರೀ, ಆಶಾ ಮಂಜುನಾಥ್ ಸೇರಿದಂತೆ ನೂರಾರು ಮಂದಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Translate »