ಅಂಬರೀಶ್ ಹೆಸರಲ್ಲಿ ಹುಟ್ಟೂರಲ್ಲಿ ಸಿನಿಮಾ  ತರಬೇತಿ ಶಾಲೆ ಸ್ಥಾಪಿಸಲು ಮಂಡ್ಯ ರಮೇಶ್ ಸಲಹೆ
ಮೈಸೂರು

ಅಂಬರೀಶ್ ಹೆಸರಲ್ಲಿ ಹುಟ್ಟೂರಲ್ಲಿ ಸಿನಿಮಾ  ತರಬೇತಿ ಶಾಲೆ ಸ್ಥಾಪಿಸಲು ಮಂಡ್ಯ ರಮೇಶ್ ಸಲಹೆ

December 3, 2018

ಮೈಸೂರು: ಅಂಬ ರೀಶ್ ಅವರ ಹೆಸರಿನಲ್ಲಿ ಮಂಡ್ಯವನ್ನು ಕೇಂದ್ರವಾಗಿಟ್ಟುಕೊಂಡು ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ಶಾಲೆಯೊಂದನ್ನು ತೆರೆದು ನೂರಾರು ಯುವಕರನ್ನು ಸಾಹಿತ್ಯ, ರಂಗಭೂಮಿ ಇನ್ನಿತರ ಸಾಂಸ್ಕøತಿಕ ಕ್ಷೇತ್ರ ಗಳಿಗೆ ಕರೆ ತರುವ ಕೆಲಸ ಆಗಬೇಕು ಎಂದು ಚಿತ್ರನಟ, ನಾಟಕ ನಿರ್ದೇಶಕ ಮಂಡ್ಯ ರಮೇಶ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ನೇಗಿಲಯೋಗಿ ಮರಳೇ ಶ್ವರ ಸೇವಾ ಭವನದಲ್ಲಿ ಸ್ಪಂದನ ಸಾಂಸ್ಕøತಿಕ ಪರಿಷತ್ತು, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಅಂಬರೀಶ್ ಅವರಿಗೆ `ನುಡಿ ಮತ್ತು ಕಾವ್ಯ ನಮನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ನಾಡು ಕಂಡ ಅತ್ಯಂತ ಮೇರು ವ್ಯಕ್ತಿತ್ವದ ನಟ, ರಾಜಕಾರಣಿ ಅಂಬರೀಶ್ ಎಂಥಾ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾ ಗದೆ ಅತ್ಯಂತ ತಾಳ್ಮೆಯಿಂದ, ಸದಾ ಲವಲ ವಿಕೆಯಿಂದ, ನಗುತ್ತಲೇ ಎಲ್ಲವನ್ನೂ ಸ್ವೀಕರಿ ಸುತ್ತಿದ್ದರು. ಶುದ್ಧ, ನಿಷ್ಕಲ್ಮಶ ಶ್ರೇಷ್ಟ ವ್ಯಕ್ತಿತ್ವ ಹೊಂದಿದ್ದರು. ಸೃಸ್ಟಿಶೀಲವಾಗಿರಬೇಕಿದ್ದ ಸ್ಟುಡಿಯೋಗಳನ್ನು ಸಮಾಧಿ ಸ್ಥಳವಾಗಿ ಮಾಡುವ ರಾಜಕಾರಣಿಗಳು, ಹಸಿ, ಬಿಸಿ ಸಾಹಿತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಅಂಬರೀಶ್ ಹೆಸರಿನಲ್ಲಿ ಸಂಶೋ ಧನಾ ಕೇಂದ್ರ ತೆರೆಯುವುದರಿಂದ  ಅಂಬ ರೀಶ್ ಅವರಿಗೆ ನಿಜಕ್ಕೂ ಗೌರವ ಸಲ್ಲಿಸಿ ದಂತಾಗುತ್ತದೆ ಎಂದು ಸಲಹೆ ನೀಡಿದರು.

ಸ್ಪಂದನ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಅಂಬರೀಶ್ ಹೆಸರಿನಲ್ಲಿ ಟ್ರಸ್ಟ್ ಮಾಡಿ, ಚಲನ ಚಿತ್ರ, ತಂತ್ರಜ್ಞರು, ಕಲಾವಿದರು, ಸಂಗೀತ ನಿರ್ದೇಶಕರನ್ನು ತಯಾರು ಮಾಡುವಂತಹ ಚಲನಚಿತ್ರ ಸಂಶೋಧನಾ ಕೇಂದ್ರವನ್ನು ತೆರೆಯುವ ಮೂಲಕ ಅವರಿಗೆ ಗೌರವ ಸಲ್ಲಿಸು ವಂತಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಕವಿಗಳು ತಾವು ರಚಿಸಿದ್ದ ಅಂಬರೀಶ್ ಅವರನ್ನು ಕುರಿತ ಕಾವ್ಯ ನಮನ ಸಲ್ಲಿಸಿದರು. ಹಿರಿಯ ಸಾಹಿತಿ, ಚಿಂತಕ ಡಾ. ಮಳಲಿ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ರಂಗಕರ್ಮಿ ರಾಜಶೇಖರ ಕದಂಬ, ನೇಗಿಲಯೋಗಿ ಸಮಾಸ ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »