ಕೊಡಗು ಮತ್ತೆ ತನ್ನ ವೈಭವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಕಲಾವಿದ ಮಂಡ್ಯ ರಮೇಶ್
ಕೊಡಗು

ಕೊಡಗು ಮತ್ತೆ ತನ್ನ ವೈಭವ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಕಲಾವಿದ ಮಂಡ್ಯ ರಮೇಶ್

October 26, 2018

ಮಡಿಕೇರಿ: ಪ್ರಕೃತ್ತಿ ವಿಕೋಪದಿಂದ ನಲುಗಿರುವ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವೈಭವವು ಕೆಲವೇ ತಿಂಗಳಲ್ಲಿ ಮರುಕಳುಹಿಸಲಿದ್ದು, ಈ ನಿಟ್ಟಿನಲ್ಲಿ ಆತಂಕ ಬೇಕಾಗಿಲ್ಲ. ಬದುಕನ್ನು ಛಲದಿಂದ ಎದುರಿಸುವ ಸ್ಥೆರ್ಯ ಎಲ್ಲರಲ್ಲಿಯೂ ಮೂಡಲಿ ಎಂದು ಹೆಸರಾಂತ ಕಲಾವಿದ ಮಂಡ್ಯ ರಮೇಶ್ ಮನವಿ ಮಾಡಿದರು.

ಭಾರತೀಯ ವಿದ್ಯಾಭವನದ ವತಿಯಿಂದ ಪ್ರಕೃತ್ತಿ ವಿಕೋಪ ಸಂತ್ರಸ್ಥರ ನಿಧಿಗಾಗಿ ಆಯೋಜಿತ ನಾಟಕ ಪ್ರದರ್ಶನದ ಸಂದರ್ಭ ಮಾತನಾಡಿದ ಮಂಡ್ಯ ರಮೇಶ್, ಕೊಡಗು ಜಿಲ್ಲೆ ನಿಸರ್ಗ ಸೌಂದ ರ್ಯದೊಂದಿಗೆ ಕಾಫಿ, ಕಿತ್ತಳೆ, ಜೇನಿನಂಥ ಅಪೂರ್ವತೆಗೆ ಉದಾಹರಣೆಯಾಗಿತ್ತು. ಈಗ ಸಂಭ ವಿಸಿರುವ ವಿಕೋಪ ಗ್ರಾಮೀಣ ಜನರನ್ನು ತಲ್ಲಣಗೊಳ್ಳುವಂತೆ ಮಾಡಿದ್ದರೂ ಯಾರೂ ಎದೆ ಗುಂದದೆ ಛಲದಿಂದ ಸವಾಲನ್ನು ಎದುರಿಸುವಂತಾಗಬೇಕು ಎಂದು ಕೋರಿದರು.

ಪ್ರಕೃತ್ತಿ ವಿಕೋಪ ಪೀಡಿತ ಜಪಾನ್, ಶ್ರೀಲಂಕಾ ದೇಶಗಳೂ ಕೂಡ ಕೆಲವೇ ತಿಂಗಳಲ್ಲಿ ಮತ್ತೆ ತಮ್ಮ ವೈಭವವನ್ನು ಮರಳಿ ಪಡೆದಿರುವುದನ್ನು ತಾವೇ ಕಂಡದ್ದಾಗಿ ಉದಾಹರಣೆಯೊಂದಿಗೆ ವಿವರಿ ಸಿದ ಮಂಡ್ಯ ರಮೇಶ್ ಇದೇ ರೀತಿ ಕೊಡಗು ಕೂಡ ಜನರು, ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸಹಕಾರದಿಂದ ಮತ್ತೆ ಹಿಂದಿನಂತೆ ವೈಭವ ಮರಳಿ ಪಡೆಯುತ್ತದೆ. ಪ್ರಕೃತ್ತಿ ರಕ್ಷಣೆಯ ಪಾಠವನ್ನು ಮಾತ್ರ ಯಾರೂ ಮರೆಯಬಾರದೆಂದು ಮನವಿ ಮಾಡಿದರು. ಭವಿಷ್ಯದಲ್ಲಿ ಕೊಡಗು ನಾಡಿಗೆ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನೂ ಯುವ ಪೀಳಿಗೆಗೆ ಮನದಟ್ಟು ಮಾಡಿಸಬೇಕು ಎಂದೂ ಸಲಹೆ ನೀಡಿದ ಮಂಡ್ಯ ರಮೇಶ್, ಕಾಲೂರಿನಂಥ ವಿಕೋಪ ಸಂಭವಿಸಿದ ಗ್ರಾಮದ ಸಂತ್ರಸ್ಥರಿಗೆ ಕೌಶಲ್ಯ ಮಾರ್ಗದರ್ಶನ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದೂ ಮಂಡ್ಯರಮೇಶ್ ಪ್ರಶಂಶಿಸಿದರು. ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಡಾ.ಮನೋಹರ್ ಜಿ.ಪಾಟ್ಕರ್ ಹಾಜರಿದ್ದರು. ನಯನ ಕಶ್ಯಪ್ ನಿರೂಪಿಸಿದರು.

Translate »