ಸಮಾನ ವೇತನ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ
ಕೊಡಗು

ಸಮಾನ ವೇತನ, ಉದ್ಯೋಗ ಭದ್ರತೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

October 26, 2018

ಮಡಿಕೇರಿ: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ನೌಕ ರರಿಗೆ ಸಮಾನ ವೇತನ ಮತ್ತು ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಮೂರು ತಾಲೂಕು ಗಳ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಛೇರಿ ಯಿಂದ ಮೆರವಣಿಗೆ ಮೂಲಕ ಸಾಗಿದ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಂ.ಮಹದೇವಪ್ಪ ಮಾತ ನಾಡಿ, ಜೀತ ವ್ಯವಸ್ಥೆಯ ಮತ್ತೊಂದು ರೂಪ ದಂತಿರುವ ಗುತ್ತಿಗೆ ಪದ್ಧತಿಯೇ ಒಂದು ಅಸಂವಿ ಧಾನಿಕ ವ್ಯವಸ್ಥೆಯಾಗಿದೆ ಎಂದರು. ತಮ್ಮ ದುಡಿ ಯುವ ಆಯಸ್ಸಿನ ಬಹುಭಾಗವನ್ನು ಇಲಾಖೆ ಯೊಂದರಲ್ಲಿ ಗುತ್ತಿಗೆ ನೌಕರರಾಗಿ ದುಡಿದು, ನಂತರ ಹೊರದೂಡುವುದು ಅಮಾನವೀಯ ಕ್ರಮ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, 3 ತಿಂಗಳ ಬಾಂಡ್, ವರ್ಷಕ್ಕೊಂದು ಬ್ರೇಕ್ ಇನ್ ಸರ್ವೀಸ್ ತರಹದ ವಿವಿಧ ರೀತಿಯ ಅತಂತ್ರತೆಯ ನಡುವೆ ಹಲವು ರೀತಿಯ ಸಮಸ್ಯೆ ಗಳನ್ನು ಗುತ್ತಿಗೆ ನೌಕರರು ಎದುರಿಸಬೇಕಾಗಿದೆ ಎಂದರು. ಕೊಡಗಿನಲ್ಲಿ 250 ಕ್ಕೂ ಅಧಿಕ ಗುತ್ತಿಗೆ ನೌಕರರಿದ್ದು, ರಾಜ್ಯದಲ್ಲಿ 30 ಸಾವಿರ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸೇವಾ ನಿಯಮ ಮತ್ತು ವೇತನ ಶ್ರೇಣಿಗಳನ್ನು ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರದ ನೌಕರರಿಗೂ ನೀಡಬೇಕು. ಅತಿ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಸೇವಾ ಭದ್ರತೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ, ಮಾದರಿಯಾಗಬೇಕಾದ ಸರಕಾರಿ ವ್ಯವಸ್ಥೆಯಲ್ಲೇ ಗುತ್ತಿಗೆ ನೌಕರರ ಬದುಕು ದುಸ್ತರವಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೆಂದು ಅಭಿಪ್ರಾಯಪಟ್ಟರು. ಕಾನೂನಾತ್ಮಕ ಹೋರಾಟದ ಅಗತ್ಯವಿದೆ ಎಂದರು.

ಸಂಘದ ಗೌರವಧ್ಯಕ್ಷ ಡಾ.ನವೀನ್, ಉಪಾಧ್ಯಕ್ಷ ಎಸ್.ಎಸ್. ಕಿರಣ್, ಸುನೀಲ್, ಡಾ.ಪ್ರಾಣೇಶ್, ಪ್ರಧಾನ ಕಾರ್ಯದರ್ಶಿ ರಘು, ಸಂಘಟನಾ ಕಾರ್ಯದರ್ಶಿ ಜಗದೀಶ್, ಅರುಣ್, ಮಹೇಶ್ ಹಾಗೂ ನಿರ್ದೇಶಕರಾದ ಡಾ.ರಕ್ಷಿತಾ, ಡಾ. ಸಂತೋಷ್, ಡಾ.ಶಶಿಕಲಾ ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »