ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು  ನೀಡಬೇಕು: ಡಾ.ಗುಬ್ಬಿಗೂಡು ರಮೇಶ್ ಅಭಿಮತ
ಮೈಸೂರು

ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು: ಡಾ.ಗುಬ್ಬಿಗೂಡು ರಮೇಶ್ ಅಭಿಮತ

December 3, 2018

ಮೈಸೂರು: ಇಂದಿನ ಉನ್ನತ ಶಿಕ್ಷಣವು ಕೌಶಲವನ್ನು ಕಲಿಸಬೇಕು. ಆದರೆ ಕೇವಲ ಕೌಶಲವು ಶಿಕ್ಷಣವೆನಿಸದು. ಅದರ ಜೊತೆ ಜ್ಞಾನವು ಇರಬೇಕು. ಜ್ಞಾನವಿಲ್ಲದ ಕೌಶಲ ನಿಷ್ಪ್ರಯೋಜಕ. ಆದುದರಿಂದ ಇಂದು ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು ಎಂದು ಸಂಸ್ಕøತಿ ಚಿಂತಕ, ಅಂಕಣ ಕಾರ ಡಾ.ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು.

ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಶಾಲೆಯಲ್ಲಿ ಆಯೋಜಿಸಿದ್ದ 20ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕರ್ನಾಟಕ ಸಾಂಸ್ಕøತಿಕ ವಾಗಿ ಶ್ರೀಮಂತವಾಗಿದೆ. ವಾಣಿಜ್ಯ, ಕಲೆ, ವಿಜ್ಞಾನ ಯಾವುದೇ ವಿಷಯಗಳಲ್ಲಿನ ಬೋಧನೆ, ಕಲಿಕೆ ಮತ್ತು ಸಂಶೋಧನೆಗಳು ಪ್ರಸ್ತುತ ಸಮಾಜದ ಬದುಕಿಗೆ ಬೇಕಾದ ಜ್ಞಾನ ಕಲಿಕೆಯನ್ನು ತಂದುಕೊಡಬೇಕು. ವಿದ್ಯಾರ್ಥಿ ಗಳಿಗೆ ಕಲಿಕೆ ಮತ್ತು ಆಲೋಚನೆಯಲ್ಲಿ ಹೊಸ ಅನುಭವ ನೀಡುವಂತೆ ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ವ್ಶೆಜ್ಞಾನಿಕ ಮತ್ತು ಕ್ಷೇತ್ರ ಕಾರ್ಯದ ಅಧ್ಯಯನಗಳು ಹೆಚ್ಚಬೇಕು. ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಈ ರೀತಿಯ ಕಲಿಕೆ ಕಂಡುಬರುತ್ತಿದೆ ಎಂದು ಗುಬ್ಬಿಗೂಡು ರಮೇಶ್ ತಿಳಿಸಿದರು.

ಸಮಾಜದಲ್ಲಿ ಮಕ್ಕಳನ್ನು ಯಾವ ಸಂಸ್ಕಾರದಲ್ಲಿ ಬೆಳೆಸುತ್ತಿದ್ದೇವೆ ಎಂಬುದರ ಮೇಲೆ ಈ ಸಮಾಜ ನಿಂತಿದೆ. ಆದ್ದರಿಂದ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಹ ಕೆಲಸವನ್ನು ಪೋಷಕರು ಮಾಡ ಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ವೇಗ ವಾದ ಮತ್ತು ಒತ್ತಡವಾದ ಬದುಕಿನಿಂದ ಮಕ್ಕಳು ಸದಾ ಒತ್ತಡ ದಿಂದ ಇರುವುದನ್ನು ಸರಿಪಡಿಸಲು ಕ್ರೀಡೆ, ಸಂಗೀತ, ಕಲೆ, ಧಾರ್ಮಿಕ ಮುಂತಾದ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಪುರಾಣ ಪುಣ್ಯ ಕಥೆಗಳನ್ನು ಹೇಳಿಕೊಡು ವುದರಿಂದ ಹಿರಿಯರಲ್ಲಿ ಭಕ್ತಿ ಭಾವನೆ ಮೂಡುತ್ತದೆ ಎಂದರು. `ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಯಂತೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯ ವಾಗಿದ್ದು ಮಕ್ಕಳಿಗೆ ಹುಮ್ಮಸ್ಸು, ಉತ್ಸಾಹ ಬಂದು ಅವರ ಸಾಧನೆಗೆ ಅನುಕೂಲವಾಗುತ್ತದೆ ಎಂದರು.

ಸಂಸ್ಥೆ ಅಧ್ಯಕ್ಷ ಟಿ.ರಂಗಪ್ಪ ಮಾತನಾಡಿ, ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆ ಬಹು ಮುಖ್ಯವಾದದು. ಶಿಸ್ತು, ಶಾಂತಿ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಕ್ರೀಡೆಗಳು ಮಹತ್ತರವಾದ ಪಾತ್ರವಹಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ, ಇಲ್ಲಿ ಸೋಲು, ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿ ರುತ್ತದೆ ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮೈಸೂರು ನಗರಪಾಲಿಕೆ ಸದಸ್ಯ ವೇದಾವತಿ, ಬ್ಲಾಕ್ ಎಜುಕೇಷನ್ ಆಫೀಸರ್ ಶಿವಕುಮಾರ್, ಸಂಯೋ ಜನಾಧಿಕಾರಿ ಕಾಂತಿನಾಯಕ್, ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಶಾಲಾ ಮುಖ್ಯೋಪಾಧ್ಯಾ ಯಿನಿ ಝರೀನಾ ಬಾಬುಲ್ ಹಾಗೂ ಇತರರು ಇದ್ದರು.ಪ್ರಾರ್ಥನೆಯನ್ನು ಕು.ಗುಣವತಿ ಹಾಗೂ ತಂಡ ದವರು ಸಲ್ಲಿಸಿದರೆ, ಶೈಲಜ ಸ್ವಾಗತ ಕೋರಿದರು. ಕಾಂತಿ ನಾಯಕ್ ಶಾಲಾ ವಾರ್ಷಿಕ ವರದಿ ವಾಚಿಸಿದರು.

Translate »