ನಾಳೆ ಪಾಲಿಕೆ ಭ್ರಷ್ಟಾಚಾರ ವಿರುದ್ಧ  ದಾಖಲೆ ಬಿಡುಗಡೆ ಮಾಡಿ ಪ್ರತಿಭಟನೆ
ಮೈಸೂರು

ನಾಳೆ ಪಾಲಿಕೆ ಭ್ರಷ್ಟಾಚಾರ ವಿರುದ್ಧ ದಾಖಲೆ ಬಿಡುಗಡೆ ಮಾಡಿ ಪ್ರತಿಭಟನೆ

November 18, 2019

ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ ತೀವ್ರ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ವಿರೋಧಿಸಿ ನ.19ರಂದು ನಗರಪಾಲಿಕೆಯ ರೆವಿನ್ಯೂ ಕಚೇರಿ ಎದುರು ದಾಖಲಾತಿ ಬಿಡುಗಡೆ ಮಾಡುವ ಮೂಲಕ ಪ್ರತಿಭಟನೆ ನಡೆಸ ಲಾಗುವುದು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ತೀವ್ರ ಭ್ರಷ್ಟಾಚಾರ ನಡೆಯತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ದೂರಿದರು. ಇದೇ ವೇಳೆ ಮಾತನಾಡಿದ ಮತ್ತೊಬ್ಬ ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆಯ ಎಲ್ಲಾ ವಿಭಾಗದಲ್ಲೂ ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ. ಪಾಲಿಕೆ ಸದಸ್ಯರಿಗೆ ಕಿಂಚಿತ್ತು ಬೆಲೆ ಇಲ್ಲ. ಕೌನ್ಸಿಲ್ ಸಭೆಯಲ್ಲಿ ನಿರ್ಧಾರವಾಗುವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು. ಪಾಲಿಕೆಯ ಕಂದಾಯ ಅಧಿಕಾರಿ ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಾರ್ವಜನಿಕರ ಅಹವಾಲು ಸ್ವೀಕರಿಸುವವರೇ ಇಲ್ಲ. ನಿವೇಶನ ಖಾತೆ ವರ್ಗಾವಣೆಗೆ ಲಂಚ, ಏಜೆಂಟರ ಹಾವಳಿ, ಪ್ರತಿಯೊಂದು ಕೆಲಸವೂ ಏಜೆಂಟರ ಮೂಲಕ ಮಾಡಿಸುವ ಸ್ಥಿತಿ ಉಂಟಾಗಿದೆ. ಆಯುಕ್ತರು ಕೇವಲ ನಾಮಕಾವಸ್ತೆಗೆ ಇದ್ದಾರೆಂಬಂತಾಗಿದೆ. ಹೀಗಾದರೆ ಸಾರ್ವಜನಿಕರು ತಮ್ಮ ಆಸ್ತಿ ರಕ್ಷಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಸಿ.ಸ್ವಾಮಿ ಉಪಸ್ಥಿತರಿದ್ದರು.

Translate »