ಮರಿತಿಬ್ಬೇಗೌಡರ ಪರ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ
ಮಂಡ್ಯ

ಮರಿತಿಬ್ಬೇಗೌಡರ ಪರ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ

June 5, 2018

ಪಾಂಡವಪುರ: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ಪಟ್ಟಣದಲ್ಲಿ ಜಿಪಂ ಸದಸ್ಯ ಸಿ.ಅಶೋಕ್ ಪ್ರಚಾರ ನಡೆಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯ ಕಾಲೇಜು, ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳಿಗೆ ತೆರಳಿ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರು ಆಯ್ಕೆ ಬಯಸಿ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಮರಿತಿ ಬ್ಬೇಗೌಡರಿಗೆ ತಾಲೂಕಿನ ಮತದಾರರು ಮೊದಲ ಪ್ರಾಶಸ್ತ್ಯದ ಮತವನ್ನು ನೀಡ ಬೇಕು. ರಾಜ್ಯದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಅವರ ಸರ್ಕಾರ ಅಧಿಕಾರದಲ್ಲಿರುವು ದರಿಂದ ಮರಿತಿಬ್ಬೇಗೌಡರನ್ನು ಗೆಲ್ಲಿಸಿ ಕೊಟ್ಟರೆ ರಾಜ್ಯದ ಶಿಕ್ಷಕರ ಸಮಸ್ಯೆಗಳು ಬಗೆಹರಿಸುವ ಕೆಲಸ ಮಾಡಲಿದ್ದಾರೆ. ಈ ಹಿಂದೆ ಮರಿತಿಬ್ಬೇಗೌಡರು ವಿಧಾನ ಪರಿಷತ್‍ಗೆ ಆಯ್ಕೆಯಾಗಿ ಶಿಕ್ಷಕರ ಹಾಗೂ ಶೈಕ್ಷಣ ಕ ಕ್ಷೇತ್ರದ ಸಮಸ್ಯೆಗಳನ್ನು ಬಗೆ ಹರಿಸಲು ಸಾಕಷ್ಟು ಹೋರಾಟ ಮಾಡಿ ದ್ದಾರೆ. ಇಂತಹ ದಕ್ಷ ವ್ಯಕ್ತಿಯನ್ನು ಮತ್ತೊಮ್ಮೆ ವಿಧಾನ ಪರಿಷತ್‍ಗೆ ಕಳುಹಿಸಿ ಕೊಟ್ಟರೆ ಕುಮಾರಸ್ವಾಮಿ ಅವರ ಸರ್ಕಾರ ದಲ್ಲ್ಲಿ ಮತ್ತಷ್ಟು ಕೆಲಸ ಕಾರ್ಯಗಳು ನಡೆಯಲಿವೆ.

ಆದ್ದರಿಂದ ಶಿಕ್ಷಕರ ಕ್ಷೇತ್ರದ ಮತದಾ ರರು ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಅವರನ್ನು ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು, ಮನ್‍ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ, ಜೆಡಿಎಸ್ ಎಸ್‍ಸಿ/ಎಸ್‍ಟಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಚನ್ನೇಗೌಡ, ಎಸ್.ನಾರಾಯಣಗೌಡ, ಗೋವಿಂದರಾಜು, ನಾಗರಾಜು, ಪ್ರಭಾಕರ್ ಸೇರಿದಂತೆ ಹಲವರಿದ್ದರು.

Translate »